ಬಂಕಾಪುರ ಪುರಸಭೆ ಸದಸ್ಯರ ಜೀವ ಉಳಿಸಿದ ಚಾಲಕ

ಹಾವೇರಿ, ಸೆ.2 : ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆಯ ಸದಸ್ಯರು ಊಟಿಯಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದಸ್ಯರ ಜೀವ ಉಳಿಸಿದ ಟೆಂಪೋ ಟ್ರಾವೆಲರ್ ಚಾಲಕ ಮಾತ್ರ ಸಾವನ್ನಪ್ಪಿದ್ದಾನೆ.

ಊಟಿ ಪ್ರವಾಸ ಮುಗಿಸಿ ಕರ್ನಾಟಕಕ್ಕೆ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ಟಿಟಿ ಚಾಲಕನ್ನು ಹುಬ್ಬಳ್ಳಿ ನವನಗರದ ನಿವಾಸಿ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು ಅವರನ್ನು ಊಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Haveri

ಅಪಘಾತ ಸಂಭವಿಸಿದ ಟಿಟಿಯಲ್ಲಿ ಬಂಕಾಪುರ ಪುರಸಭೆಯ ಹಲವು ಸದಸ್ಯರು ಪ್ರಯಾಣ ಮಾಡುತ್ತಿದ್ದರು. ಗುಡ್ಡಗಾಡು ರಸ್ತೆಯಲ್ಲಿ ಟಿಟಿ ಬ್ರೇಕ್‌ ಫೇಲ್‌ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಆ.30ರಂದು ಸದಸ್ಯರು ಪ್ರವಾಸಕ್ಕೆ ಹೋಗಿದ್ದರು. ಸೆ.1ರಂದು ವಾಪಸ್‌ ಬರುವಾಗ ಈ ಅಪಘಾತ ಸಂಭವಿಸಿದೆ. [ಹಾವೇರಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಎತ್ತಂಗಡಿ]

ಘಟನೆಯ ವಿವರ : ಬಂಕಾಪುರ ಪುರಸಭೆಯ 19 ಸದಸ್ಯರು ಎರಡು ಪ್ರತ್ಯೇಕ ಟೆಂಪೋ ಟ್ರಾವೆಲರ್‌ಗಳಲ್ಲಿ ಊಟಿಗೆ ಪ್ರವಾಸ ಹೋಗಿದ್ದರು. ಸೋಮವಾರ ಅಲ್ಲಿಂದ ಮರಳುವಾಗ ಊಟಿ ಬಳಿಯ ಕಲ್ಲಟ್ಟಿ-ಮಸಿನಗುಡಿ ಘಾಟ್‌ನಲ್ಲಿ ಒಂದು ಟಿಟಿಯ ಬ್ರೇಕ್ ವಿಫಲಗೊಂಡಿದೆ. ಕೆಲವು ಸದಸ್ಯರಿದ್ದ ಇನ್ನೊಂದು ಟಿಟಿ ಈ ವಾಹನದ ಮುಂಭಾಗದಲ್ಲಿ ಸಾಗುತ್ತಿತ್ತು.

ಬ್ರೇಕ್‌ ಫೇಲ್‌ ಆಗಿದ್ದನ್ನು ಅರಿತ ಚಾಲಕ ಅಬ್ದುಲ್ಲಾ ಮುಂದಿನ ಟಿಟಿಯಲ್ಲಿದ್ದ ಚಾಲಕನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ನಿನ್ನ ಟಿಟಿಯಲ್ಲಿರುವ ಜನರನ್ನು ಇಳಿಸಿ ಟಿಟಿ ನಿಲ್ಲಿಸು ಅದಕ್ಕೆ ನಾನು ಡಿಕ್ಕಿ ಹೊಡೆಯುತ್ತೇನೆ ಎಂದು ಹೇಳಿದ್ದಾನೆ. ಅಬ್ದುಲ್ಲಾ ಮಾತಿನಂತೆ ಚಾಲಕ ಮಾಡಿದ್ದಾನೆ. ಆದರೆ, ಟಿಟಿಗೆ ಡಿಕ್ಕಿ ಹೊಡೆದ ಅಬ್ದುಲ್ಲಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+