ಭಾನುವಾರ ಸೆಪ್ಟೆಂಬರ್ 7 ತಿರುಪತಿ ತಿರುಮಲ ಸೇರಿ ಕರ್ನಾಟಕದ ಬಹುತೇಕ ಜಿಲ್ಲೆಗಳ ದೇವಾಲಯಗಳು ಕ್ಲೋಸ್
ಭಾನುವಾರ ಬಂತೆಂದರೆ ಸಾಕು ಬಹುತೇಕ ಮಂದಿ ಪ್ರಸಿದ್ಧ ಪ್ರವಾಸಿ ತಾಣಗಳು, ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಆದರೆ, ಸೆಪ್ಟೆಂಬರ್ 7ರ ಭಾನುವಾರ ತಿರುಪತಿ ತಿರುಮಲ ಸೇರಿದಂತೆ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದೇವಸ್ಥಾನಗಳು ಮುಚ್ಚಲ್ಪಡಲಿವೆ. ಹಾಗಾದ್ರೆ, ಕಾರಣ ಏನು ಹಾಗೂ ಎಷ್ಟು ಗಂಟೆಗಳ ಕಾಲ ಮುಚ್ಚಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಗರ ಪ್ರದೇಶಗಳಲ್ಲಿ ಬಹುತೇಕ ಸಾರ್ವಜನಿಕರು, ಉದ್ಯೋಗಿಗಳು ವಾರಾಂತ್ಯದಲ್ಲಿ ಕುಟುಂಬ ಸಮೇತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಆದರೆ, ನಾಳೆ ಭಾನುವಾರ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ದೇವಸ್ಥಾನಗಳು ಮುಚ್ಚಲ್ಪುಡುತ್ತವೆ. ಇದಕ್ಕೆ ಕಾರಣ ಏನಂತಲೂ ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸಾಮಾನ್ಯವಾಗಿ ಗ್ರಹಣದಂತಹ ಸಂದರ್ಭಗಳಲ್ಲಿ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಹಾಗೆಯೇ ಭಾನುವಾರ (ಸೆಪ್ಟೆಂಬರ್ 7) ಚಂದ್ರಹಣ ಇರಲಿದ್ದು, ಈ ವೇಳೆ ದೇವಸ್ಥಾನಗಳನ್ನು ಮುಚ್ಚಲಾಗುತ್ತದೆ ಎಂದು ತಿಳಿದುಬಂದಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚಂದ್ರಗ್ರಹಣವು ಭಾನುವಾರ ರಾತ್ರಿ 8.50 ಗಂಟೆಗೆ ಆರಂಭ ಆಗಲಿದ್ದು, ಮಧ್ಯರಾತ್ರಿ 12.22ರ ವರೆಗೆ ಇರಲಿದೆ ಎಂದು ತಿಳಿದುಬಂದಿದೆ.
ಈ ವೇಳೆ ಬಿಳಿ ಬಣ್ಣದಲ್ಲಿ ಇರುವ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಈ ಹಿನ್ನೆಲೆ ಕರ್ನಾಟಕದ ಬೆಂಗಳೂರು ಸೇರಿದಂತೆ ಇತರ ದೇವಾಲಯಗಳು ಮತ್ತು ಆಂಧ್ರದಪ್ರದೇಶದ ತಿರುಪತಿ ಸೇರಿದಂತೆ ಹಲವೆಡೆ ದೇವಸ್ಥಾನಗಳು ಮುಚ್ಚಲ್ಪಡಲಿವೆ ಎಂದು ತಿಳಿದುಬಂದಿದೆ. ಖಗ್ರಾಸ ಚಂದ್ರ ಗ್ರಹಣದ ಸಮಯದಲ್ಲಿ ದೇವಸ್ಥಾನಗಳನ್ನು ಮುಚ್ಚಲು ಪ್ರಮುಖ ಕಾರಣವೂ ಇದೆ.
ಗ್ರಹಣದ ವೇಳೆ ನಕಾರಾತ್ಮಕ ಶಕ್ತಿಯ ಪ್ರಸರಣ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದ್ದು, ಈ ಹಿನ್ನೆಲೆ ಈ ವೇಳೆ ದೇವಸ್ಥಾನಗಳನ್ನು ಶುದ್ಧೀಕರಿಸಲು ಮತ್ತು ಪೂಜಾ ವಿಧಿವಿಧಾನಗಳನ್ನು ನಡೆಸಲು ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಬಳಿಕ ಗಂಗಾಜಲ ಹಾಕಿ ಅಭಿಷೇಕ ಮಾಡಲಾಗುತ್ತದೆ. ಇದು ಮೊದಲಿನಿಂದಲೂ ನಡೆಸಿಕೊಂಡುಬಂದಿರುವ ಪದ್ಧತಿಯಾಗಿದೆ.
ಯಾವ ದೇವಸ್ಥಾನಗಳು ಕ್ಲೋಸ್?: ಚಂದ್ರಗ್ರಹಣ ಹಿನ್ನೆಲೆ ಬೀದರ್‌ನಲ್ಲಿನ ಐತಿಹಾಸಿಕ ದೇವಾಲಯಗಳನ್ನು ಭಾನುವಾರ ಮುಚ್ಚಲಾಗುತ್ತದೆ. ಸೆಪ್ಟೆಂಬರ್ 7ರ ಮಧ್ಯಾಹ್ನ 12ರಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ, ಜಿಲ್ಲೆಯ ಇನ್ನೂ ಪ್ರಮುಖ ದೇವಸ್ಥಾನಗಳನ್ನು ಸಹ ಮುಚ್ಚಲಾಗುತ್ತದೆ. ಭಕ್ತರು ಸಹಕರಿಸಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ. ಸೋಮವಾರ ಶುದ್ಧಿ ಕಾರ್ಯದ ಬಳಿಕ ಬೆಳಗ್ಗೆ 7 ಗಂಟೆಗೆ ದೇವಸ್ಥಾನಗಳಿಗೆ ಭಕ್ತರ ಪ್ರವೇಶದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಅಂತಲೂ ತಿಳಿಸಲಾಗಿದೆ.
ಯಾವ ದೇವಸ್ಥಾನಗಳು ಎಷ್ಟು ಗಂಟೆಗೆ ಕ್ಲೋಸ್?: ಮೈಸೂರಿನ ಚಾಮುಂಡೇಶ್ವರಿ ದೇವಾಲಯ ರಾತ್ರಿ 9:30ಕ್ಕೆ, ಕೊಪ್ಪಳದ ಹುಲಗೆಮ್ಮ ದೇವಾಲಯ ಸಂಜೆ 5ಕ್ಕೆ, ಚಿಕ್ಕಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಸ್ಥಾನ ಸಂಜೆ 4ಕ್ಕೆ, ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟ ಸಂಜೆ 5ಕ್ಕೆ, ಬೇಲೂರಿನ ಚನ್ನಕೇಶವ ದೇವಸ್ಥಾನ ಮಧ್ಯಾಹ್ನ 3ಕ್ಕೆ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಾಲಯ ಸಂಜೆ 5ಕ್ಕೆ.
ಧರ್ಮಸ್ಥಳದ ಶ್ರೀ ಮಂಜುನಾಥ ದೇವಾಲಯ ಸಂಜೆ 7ಕ್ಕೆ, ಮಂಗಳೂರಿನ ಕದ್ರೋಳಿ ದೇವಾಲಯ ರಾತ್ರಿ 8ಕ್ಕೆ, ಮಂಗಳೂರಿನ ಕದ್ರಿ ದೇವಾಲಯ ಸಂಜೆ 6.30ಕ್ಕೆ, ಬೆಂಗಳೂರಿನ ಗಾಳಿ ಆಂಜನೇಯ ದೇವಾಲಯ ಮಧ್ಯಾಹ್ನ 3ಕ್ಕೆ, ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಅಣ್ಣಮ್ಮ ದೇವಾಲಯ ರಾತ್ರಿ 8ಕ್ಕೆ, ಆರ್ಆರ್ ನಗರದ ರಾಜರಾಜೇಶ್ವರಿ ದೇವಾಲಯ ರಾತ್ರಿ 8ಕ್ಕೆ.
ಬೆಂಗಳೂರಿನ ಬನಶಂಕರಿ ದೇವಸ್ಥಾನ ಸಂಜೆ 6ಕ್ಕೆ, ಗವಿ ಗಂಗಾಧರೇಶ್ವರ ದೇವಸ್ಥಾನ: ಬೆಳಗ್ಗೆ 11ಕ್ಕೆ, ಕಾಡು ಮಲ್ಲೇಶ್ವರ ದೇವಸ್ಥಾನ ಮಧ್ಯಾಹ್ನ 12.20ಕ್ಕೆ, ಮಲ್ಲೇಶ್ವರದ ಪ್ರಸಿದ್ಧ ಗಂಗಮ್ಮ ದೇವಾಲಯ ಸಂಜೆ 7ಕ್ಕೆ, ಚಾಮರಾಜಪೇಟೆಯ ಬಂಡೆ ಮಹಾಕಾಳಿ ದೇವಸ್ಥಾನ ರಾತ್ರಿ 7.30ಕ್ಕೆ ಕ್ಲೋಸ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಾವ ದೇವಾಲಯಗಳು ತೆರೆದಿರಲಿವೆ?: ಆದರೆ, ಬೆಳಗಾವಿಯಲ್ಲಿ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ದಕ್ಷಣಿದ ಕಾಶಿ ಕಪಿಲೇಶ್ವರ ಮಂದಿರದಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಡೆಯಲಿದೆ. ಗ್ರಹಣದ ವೇಳೆ ಬಿಲ್ವಪತ್ರೆಯಲ್ಲೇ ಕಪಿಲೇಶ್ವರ ಶಿವಲಿಂಗ ಮೂರ್ತಿಯನ್ನು ಮುಚ್ಚಲಾಗುತ್ತೆ. ಚಂದ್ರಗೃಹಣ ಮುಗಿದಮೇಲೆ ಮಹಾ ಮಂಗಳಾರತಿ ಪೂಜೆ ಮಾಡಲಾಗುತ್ತದೆ. ಬಳಿಕ ಬಿಲ್ವಪತ್ರೆ ತೆಗದು ವಿಶೇಷ ಪೂಜೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಇನ್ನು ರಾಯಚೂರು ಜಿಲ್ಲೆಯ ಮಂತ್ರಾಲಯದ ರಾಯರ ದೇವಸ್ಥಾನವನ್ನು ಮುಚ್ಚಲಾಗುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು ಕರ್ನಾಟಕ ಹೊರತುಪಡಿಸಿ ನಾಳೆ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಾಸ್ಥಾನ ಕೂಡ ಮುಚ್ಚಲ್ಪಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications