Government Employees: 'ಸರ್ಕಾರಿ ಅಧಿಕಾರಿಗಳು ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನ ಬಳಸಿ'

ಬೆಂಗಳೂರು, ಮಾರ್ಚ್‌ 28: ಸಾರ್ವಜನಿಕ ಸಾರಿಗೆ ಸುಧಾರಣೆಯ ಬಗ್ಗೆ ವ್ಯಾಪಕ ಚರ್ಚೆಯನ್ನನ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಹುಟ್ಟುಹಾಕಿದ್ದಾರೆ. ಸರ್ಕಾರಿ ಸಾರಿಗೆ ವ್ಯವಸ್ಥೆ ಕುರಿತು ತಮ್ಮ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ತೇಜಸ್ವಿ ಸೂರ್ಯ ಅವರು ಬೆಂಗಳೂರಿನ ಸಾರಿಗೆ ವ್ಯವಸ್ಥೆಗಳ ಅಧಿಕಾರಿಗಳನ್ನು ಅವರು ಮೇಲ್ವಿಚಾರಣೆ ಮಾಡುವ ಸೇವೆಗಳನ್ನು ಬಳಸುವಂತೆ ಒತ್ತಾಯಿಸಿದರು

ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ ಅವರು, ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನ ಸರ್ಕಾರಿ ಅಧಿಕಾರಿಗಳು ಬಳಸಿದಾಗ ಪ್ರಯಾಣಿಕರು ಎದುರಿಸುತ್ತಿರುವ ಸವಾಲುಗಳನ್ನು ಎಂಬ ಬಗ್ಗೆ ನಿಮಗೆ ಗೊತ್ತಾಗಲಿದೆ. ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ನಿಗಮ) ಮತ್ತು ಬಿಎಂಆರ್ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ) ಉನ್ನತ ಆಡಳಿತವು ನೇರವಾಗಿ ಅನುಭವಿಸದಿದ್ದರೆ, ಕಿಕ್ಕಿರಿದ ಮೆಟ್ರೋ ಬೋಗಿಗಳು ಮತ್ತು ಕಳಪೆ ಕೊನೆಯ ಮೈಲಿ ಸಂಪರ್ಕದಂತಹ ಪ್ರಮುಖ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಸೂರ್ಯ ಉಲ್ಲೇಖಿಸಿದ್ದಾರೆ.

Tejasvi Surya urges government officials to use government transport system

Take a Poll

ಎಲ್ಲಿಯವರೆಗೆ ಬಿಎಂಟಿಸಿ ಎಂಡಿ ಬಸ್ ನಲ್ಲಿ ಪ್ರಯಾಣಿಸುವುದಿಲ್ಲವೋ ಅಲ್ಲಿಯವರೆಗೆ ಬಿಎಂಟಿಸಿಯ ಸಮಸ್ಯೆಗಳು ಬಗೆಹರಿಯುವುದಿಲ್ಲ. ಎಲ್ಲಿಯವರೆಗೆ ಬಿಎಂಆರ್ ಸಿಎಲ್ ಎಂಡಿ ಮೆಟ್ರೋದಲ್ಲಿ ಪ್ರಯಾಣಿಸುವುದಿಲ್ಲವೋ ಅಲ್ಲಿಯವರೆಗೆ ಜನದಟ್ಟಣೆಯ ಮೆಟ್ರೋ ಬೋಗಿಗಳು ಅಥವಾ ಕೊನೆಯ ಮೈಲಿ ಸಂಪರ್ಕದ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ. ನಮ್ಮ ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ನಡೆಸುವ ಜನರು ಅವುಗಳನ್ನು ಕಡ್ಡಾಯವಾಗಿ ಬಳಸಬೇಕು. ನೀವು ಅನುಭವಿಸದ ಹೊರತು, ನೀವು ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಗ್ರೇಟರ್‌ ಬೆಂಗಳೂರು ವಿಧೇಯಕದ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್‌ ಮಾಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಗ್ರೆಟರ್ ಬೆಂಗಳೂರು ವಿಧೇಯಕವನ್ನು ಹಿಂದೆ ಕಳುಹಿಸಿರುವ ಮಾನ್ಯ ರಾಜ್ಯಪಾಲರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ.ದೂರದೃಷ್ಟಿಯ ಕೊರತೆ, ಅಸಮಂಜಸ ನಿರ್ಧಾರಗಳು ಬೆಂಗಳೂರಿನ ಸಂಚಾರ ನಿಯಂತ್ರಣ, ಅಭಿವೃದ್ಧಿ, ನಗರದ ಸಾರ್ವಜನಿಕ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಯಾವುದೇ ದೂರದೃಷ್ಟಿ ಇಲ್ಲದೇ ನಗರವನ್ನು 7 ವಿಭಾಗಗಳಾಗಿ ವಿಭಜನೆ ಮಾಡುವ ಪ್ರಯತ್ನದ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆಯೇ ವಿನಃ, ನಗರದ ಅಭಿವೃದ್ಧಿಗೆ ಪೂರಕವಾಗಬಲ್ಲ ಯಾವುದೇ ರೂಪುರೇಷೆ ಇದರಲ್ಲಿ ಇರುವುದಿಲ್ಲ. ಬಿಜೆಪಿ, ಜೆಡಿಎಸ್ & ತಜ್ಞರ ತೀವ್ರ ವಿರೋಧವನ್ನು ಪರಿಗಣಿಸಿ, ಮಾನ್ಯ ರಾಜ್ಯಪಾಲರು ಈ ವಿಧೇಯಕವನ್ನು ಹಿಂದೆ ಕಳುಹಿಸಿರುವ ಕ್ರಮ ಶ್ಲಾಘನೀಯ. ಗ್ರೇಟರ್ ಬೆಂಗಳೂರು ವಿಧೇಯಕವು ಸಂವಿಧಾನದ 74ನೇ ತಿದ್ದುಪಡಿಯ ವಿರುದ್ಧವಾಗಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರಂತರ ಬೆಲೆ ಏರಿಕೆಯ ಬರೆಯಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಹಾಲಿನ ದರ ಏರಿಕೆ ಮಾಡಿ ಮತ್ತೆ ಸುಲಿಗೆ ಮಾಡುತ್ತಿದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಬೆಲೆಏರಿಕೆ ಕಾಂಗ್ರೆಸ್ ನ ಅಘೋಷಿತ ಗ್ಯಾರಂಟಿ ಎಂಬುದು ಪ್ರತಿನಿತ್ಯ ರುಜುವಾತು ಆಗುತ್ತಿದೆ. ಕರ್ನಾಟಕದ ಹಣಕಾಸು ಸ್ಥಿತಿ ಗತಿಯನ್ನು ದಿವಾಳಿ ಅಂಚಿಗೆ ತಳ್ಳಿ, ಉಚಿತ ಗ್ಯಾರಂಟಿಗಳ ಸುಳಿಯಲ್ಲಿ ಸಿಲುಕಿಸಿ ಜನಸಾಮಾನ್ಯರನ್ನು ನಿರಂತರ ಸಂಕಷ್ಟಕ್ಕೆ ನೂಕುತ್ತಿರುವುದು ದುರಂತ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+