Tejasvi Surya: ಮೇಕೆದಾಟು ಬಗ್ಗೆ ಡಿಕೆಶಿ ಇಲ್ಲಿ ದೊಡ್ಡ ಭಾಷಣ, ಚೆನ್ನೈಗೆ ಹೋದಾಗ ಸೈಲೆಂಟ್
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಚೆನ್ನೈನಲ್ಲಿ ಕರೆದಿದ್ದ ಡೀಲಿಮಿಟೇಷನ್ ಸಭೆಯಲ್ಲಿ ತೆಲಂಗಾಣ, ಕೇರಳ ಸಿಎಂಗಳು ಹಾಗೂ ಕರ್ನಾಟಕದಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಾಲ್ಗೊಂಡಿದ್ದರು. ಈ ವಿಚಾರವಾಗಿ ಬಿಜೆಪಿವರು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಮೇಕೆದಾಟು ಯೋಜನೆಗೆ ತಮಿಳುನಾಡು ಮೊದಲಿನಿಂದಲೂ ಅಡ್ಡಗಾಲು ಹಾಕಿರುವ ವಿಚಾರವನ್ನು ಪ್ರಸ್ತಾಪಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ದೊಡ್ಡ ಸವಾಲ್ ಹಾಕಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಮೇಕೆದಾಟು ಬಗ್ಗೆ ಉತ್ಕೃಷ್ಟವಾಗಿ ಮಾತನಾಡುತ್ತಿದ್ದರು. ಈಗ ಅವರು ಚೆನ್ನೈನಲ್ಲಿದ್ದಾರೆ. ಆದರೆ ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಎನ್‌ಒಸಿ ಪಡೆಯುವ ಬಗ್ಗೆ ಒಂದು ಮಾತನ್ನೂ ಹೇಳುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 2023ರ ಕರ್ನಾಟಕದ ಚುನಾವಣೆಗೆ ಮೊದಲು ಕಾಂಗ್ರೆಸ್ ಮಾಡಿದ ಮೇಕೆದಾಟು ಪಾದಯಾತ್ರೆಯಾಗಿರಲಿ ಅಥವಾ 2026ರ ತಮಿಳುನಾಡು ಚುನಾವಣೆಗೆ ಮೊದಲು ಡಿಎಂಕೆ ಮಾಡುತ್ತಿರುವ ಡಿಲಿಮಿಟೇಶನ್ ನಾಟಕವಾಗಲಿ, ಸರ್ಕಾರದಲ್ಲಿನ ತಮ್ಮ ವೈಫಲ್ಯಗಳನ್ನು ಮರೆಮಾಡಲು ವಿರೋಧ ಪಕ್ಷಗಳು ಅದೇ ನಾಟಕವನ್ನು ಅನುಸರಿಸುತ್ತಿವೆ ಎಂದು ದೂರಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸೋಲಿನ ಭಯದಲ್ಲಿದ್ದಾರೆ ಮತ್ತು ಅವರು ಅಧಿಕಾರಕ್ಕೆ ಮರಳಲು ಕೊನೆಯ ಪ್ರಯತ್ನವಾಗಿ ಈ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಚೆನ್ನೈನಲ್ಲಿ ನಡೆದ ಈ ಸಭೆ ನಿಜಕ್ಕೂ ನಾಟಕವಾಗಿದೆ. ಏಕೆಂದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಡಿನಿರ್ಣಯದ ನಂತರ, ದಕ್ಷಿಣ ರಾಜ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಪದೇ ಪದೇ ಭರವಸೆ ನೀಡಿದ್ದಾರೆ. ಆದರೂ ಈ ರೀತಿಯ ದಿಕ್ಕು ತಪ್ಪಿಸುವ ತಂತ್ರಗಳು 10 ವರ್ಷಗಳ ಹಿಂದೆಯೇ ನಡೆಯುತ್ತಿತ್ತು ಎಂಬುದನ್ನು ಡಿಎಂಕೆ ತಿಳಿದಿರಬೇಕು. ಆದರೆ ಸ್ಟಾಲಿನ್ ಅವರ ಈ ನಾಟಕವನ್ನು ಜನ ಚೆನ್ನಾಗಿ ಗುರುತಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ವಿಶ್ವ ಜಲ ದಿನದ ನಿಮಿತ್ತ ಜಲವೇ ಜೀವ ಎಂಬ ಬೃಹತ್ ನೀರು ಸಂರಕ್ಷಣಾ ಅಭಿಯಾನವನ್ನು ಆರಂಭಿಸಿ, ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ನೆರವೇರಿಸಿ, ದಾಖಲೆ ಬರೆದಿದ್ದೇವೆ. ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ಮೂಲಕ ಕರ್ನಾಟಕದ ಜಲ ಭದ್ರತೆಗಾಗಿ ನಮ್ಮ ಬದ್ಧತೆ ಮೆರೆದಿದ್ದೇವೆ. ಇನ್ನು ಮುಂದೆಯೂ ಈ ಹೋರಾಟ ಮುಂದುವರೆಯಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಬಳಿಕ ಅವರು ಚೆನ್ನೈನಲ್ಲಿ ನಡೆದ ಡೀಲಿಮಿಟೇಷನ್ ಸಭೆಯಲ್ಲಿ ಹಾಜರಾಗಿದ್ದರು. ಈ ವೇಳೆ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡು ಸರ್ಕಾರದ ಜೊತೆ ಯಾಕೆ ಏನೂ ಮಾತನಾಡಲಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಕೆಶಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಅಣ್ಣಾಮಲೈ
ಡಿಲಿಮಿಟೇಷನ್ ಸಭೆಗಾಗಿ ಚೆನ್ನೈ ತಲುಪಿದ್ದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ್ದರು. ತಮಿಳುನಾಡು ರಾಜ್ಯವು ನೆರೆಯ ರಾಜ್ಯಗಳೊಂದಿಗೆ ಹಲವಾರು ಸಮಸ್ಯೆಗಳನ್ನು ಹೊಂದಿದೆ. ಕೇರಳದೊಂದಿಗೆ ಮುಲ್ಲಪೆರಿಯಾರ್ ಅಣೆಕಟ್ಟು ಸಮಸ್ಯೆ ಇದೆ. ಕರ್ನಾಟಕ ಸರ್ಕಾರವು ಹೊಸೂರು ಕಡೆಗೆ ಮೆಟ್ರೋ ಮಾರ್ಗ ವಿರೋಧಿಸಿದೆ. ವಿವಿಧ ಸಂದರ್ಭಗಳಲ್ಲಿ ನಮ್ಮ ಸಿಎಂ ಪಕ್ಕದ ರಾಜ್ಯಗಳಿಗೆ ಭೇಟಿ ನೀಡಿದಾಗ ಈ ವಿಷಯಗಳನ್ನು ಪ್ರಸ್ತಾಪಿಸಲೇ ಇಲ್ಲ. ಆದ್ರೆ ಈಗ ಎಲ್ಲ ಮುಖ್ಯಮಂತ್ರಿಗಳನ್ನು ಕರೆದು ಗಡಿ ನಿರ್ಣಯದ ನಾಟಕ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಬಿಜೆಪಿ ವಿರುದ್ಧ ತೊಡೆ ತಟ್ಟಿದ ಡಿಕೆ ಶಿವಕುಮಾರ್
ಚೆನ್ನೈನಲ್ಲಿ ನಡೆದ ಗಡಿ ನಿರ್ಣಯ ಕುರಿತ ಸಭೆಯಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡು ಮಾತನಾಡಿದರು. ಜನಸಂಖ್ಯೆಯ ಆಧಾರದ ಮೇಲೆ ಪ್ರಸ್ತಾವಿತ ಗಡಿ ನಿರ್ಣಯವು ಕೇವಲ ತಾಂತ್ರಿಕ ಹೊಂದಾಣಿಕೆಯಲ್ಲ, ಇದು ದಕ್ಷಿಣ ರಾಜ್ಯಗಳ ಮೇಲಿನ ರಾಜಕೀಯ ದಾಳಿ ಎಂದು ಖಂಡಿಸಿದ್ದರು. ನಮ್ಮ ರಾಜ್ಯಗಳು ಬಹಳ ಹಿಂದಿನಿಂದಲೂ ಭಾರತದ ಬೆಳವಣಿಗೆಯ ಆಧಾರಸ್ತಂಭಗಳಾಗಿವೆ. ಆರ್ಥಿಕ ಪ್ರಗತಿಗೂ ಸಾಥ್ ನೀಡುತ್ತಿವೆ. ಸಾಮಾಜಿಕ ಅಭಿವೃದ್ಧಿಯನ್ನು ಮುನ್ನಡೆಸಿ ಜನಸಂಖ್ಯಾ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆ. ಆದರೂ, ಕೇಂದ್ರವು ಈಗ ನಮ್ಮ ಸಂಸದೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಯೋಜಿಸುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ರಾಷ್ಟ್ರೀಯ ಚರ್ಚೆಯಲ್ಲಿ ನಮ್ಮ ಧ್ವನಿಯನ್ನು ಪರಿಣಾಮಕಾರಿಯಾಗಿ ನಿಶ್ಯಬ್ದಗೊಳಿಸುತ್ತದೆ. ಇದು ಕೇವಲ ಅನ್ಯಾಯ ಮಾತ್ರವಲ್ಲ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನು ದಂಡಿಸಬಾರದು, ಪ್ರತಿಫಲ ನೀಡಬೇಕು ಎಂಬ ಸಾಂವಿಧಾನಿಕ ಭರವಸೆಗೆ ದ್ರೋಹ ಎಸಗಿದಂತೆ ಎಂದು ಕಿಡಿಕಾರಿದ್ದರು. ಈ ಹೋರಾಟವು ಕೇವಲ ಸಂಖ್ಯೆಯ ಬಗ್ಗೆ ಅಲ್ಲ, ಇದು ನಮ್ಮ ಗುರುತು, ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಬಗ್ಗೆ ಎಂದಿದ್ದರು.
ಗಡಿ ನಿರ್ಣಯವು ಕೇವಲ ಸಂಸದೀಯ ಸ್ಥಾನಗಳ ಬಗ್ಗೆ ಅಲ್ಲ, ಇದು ಭಾರತದಲ್ಲಿ ಒಕ್ಕೂಟದ ಭವಿಷ್ಯದ ಬಗ್ಗೆ ಎಂದು ಹೇಳಿದ್ದರು. ಈ ಅನ್ಯಾಯದ ಸೂತ್ರದೊಂದಿಗೆ ಕೇಂದ್ರ ಸರ್ಕಾರ ಮುಂದುವರಿದರೆ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಲು ವಿಫಲವಾದ ರಾಜ್ಯಗಳಿಗೆ ಅಸಮಾನ ಅಧಿಕಾರವನ್ನು ನೀಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಇದು ಉತ್ತರ ಮತ್ತು ದಕ್ಷಿಣದ ನಡುವಿನ ಯುದ್ಧವಲ್ಲ. ಸಮಾನ ರಾಜ್ಯಗಳ ಒಕ್ಕೂಟ ಎಂಬ ಭಾರತದ ದೃಷ್ಟಿಕೋನವನ್ನು ಮರಳಿ ಪಡೆಯುವ ಹೋರಾಟ ಇದು ಎಂದು ಹೇಳಿದ್ದರು.

ನಮಗೆ ನ್ಯಾಯಯುತ ಪ್ರಾತಿನಿಧ್ಯ ಬೇಕು. ನಮ್ಮ ರಾಷ್ಟ್ರದ ಒಕ್ಕೂಟ ರಚನೆಯನ್ನು ರಕ್ಷಿಸುವ ಈ ಐತಿಹಾಸಿಕ ಹೋರಾಟದಲ್ಲಿ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ನಮ್ಮ ಧ್ವನಿಯನ್ನು ದುರ್ಬಲಗೊಳಿಸಲು, ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಲು, ನಮ್ಮ ಸಂಸ್ಕೃತಿಗಳನ್ನು ಅಳಿಸಲು ನಾವು ಎಂದಿಗೂ ಬಿಡುವುದಿಲ್ಲ. ಒಟ್ಟಾಗಿ ವೈವಿಧ್ಯತೆಯನ್ನು ಆಚರಿಸುವ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ಒಕ್ಕೂಟ ಭಾರತದ ಭರವಸೆಯನ್ನು ಪುನಃಸ್ಥಾಪಿಸಲು ನಾವು ಹೋರಾಡುತ್ತೇವೆ ಎಂದು ಕೇಂದ್ರದ ವಿರುದ್ಧ ತೊಡೆ ತಟ್ಟಿದರು. ಈ ವಿಚಾರದಲ್ಲಿ ನಾನು ಎಂ.ಕೆ.ಸ್ಟಾಲಿನ್ ಅವರನ್ನು ಅಭಿನಂದಿಸುತ್ತೇನೆ. ಏಕೆಂದರೆ ಅವರು ಡೀಲಿಮಿಟೇಷನ್ ವಿಚಾರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅಲ್ಲದೆ ಈ ದೇಶದ ಒಕ್ಕೂಟ ರಚನೆ ಮತ್ತು ಸಂವಿಧಾನವನ್ನು ರಕ್ಷಿಸುತ್ತಿದ್ದಾರೆ. ಈ ಬಗ್ಗೆ ನಮಗೆ ಬಹಳ ಹೆಮ್ಮೆ ಇದೆ. ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದಿದ್ದರು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications