ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲೆಯಲ್ಲಿ ನಾಪತ್ತೆಯಾಗಿದ್ದ 14 ಟೆಕ್ಕಿಗಳು ಪತ್ತೆ

|
Google Oneindia Kannada News

ಹಾಸನ, ಜು. 29 : ಬಿಸಿಲೆ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ 14 ಟೆಕ್ಕಿಗಳು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಓರ್ವ ಯುವತಿ ಸೇರಿದಂತೆ 13 ಜನರ ತಂಡವನ್ನು ಸಕಲೇಶಪುರ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನಿಷೇಧಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಹಿಂದಿನ ಸುದ್ದಿ : ಚಾರಣಕ್ಕಾಗಿ ಸಕಲೇಶಪುರದ ಬಿಸಿಲೆ ಅರಣ್ಯ ಪ್ರದೇಶಕ್ಕೆ ಹೋಗಿದ್ದ ಟೆಕ್ಕಿಗಳು ನಾಪತ್ತೆಯಾಗಿದ್ದಾರೆ. ಮೂಲತಃ ಚೆನ್ನೈನವರಾದ 14 ಮಂದಿಯ ತಂಡ ಚಾರಣಕ್ಕೆ ಹೋಗಿತ್ತು. ಇವರಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಬೆಳಗ್ಗೆ ಚಾರಣಕ್ಕೆಂದು ಟೆಕ್ಕಿಗಳ ತಂಡ ಕಾಡು ಪ್ರವೇಶಿಸಿತ್ತು.

ಮೂಲತಃ ಚೆನ್ನೈನವರಾದ 14 ಮಂದಿ ಸಾಫ್ಟವೇರ್ ಇಂಜಿನಿಯರ್ ಗಳ ತಂಡ ಭಾನುವಾರ ಬೆಳಗ್ಗೆ ಚಾರಣಕ್ಕೆಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಿಸಿಲೆ ಅರಣ್ಯ ತೆರಳಿತ್ತು. ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ತೆರಳಿದ್ದರು ಎಂದು ತಿಳಿದುಬಂದಿದೆ. ಚೆನ್ನೈನ ಟ್ರಕ್ಕಿಂಗ್ ಕ್ಲಬ್ ಈ ಚಾರಣವನ್ನು ಆಯೋಜಿಸಿತ್ತು.

Bisale

ಈ ತಂಡದಲ್ಲಿದ್ದ ಬಾಲಾಜಿ ಎಂಬುವವರು ನಾಪತ್ತೆಯಾಗಿದ್ದಾರೆ ಎಂದು ತಂಡದ ಸದಸ್ಯರು ಪೊಲೀಸರಿಗೆ ಮತ್ತು ಬಾಲಾಜಿ ಅವರ ಪೋಷಕರಿಗೆ ಸಂದೇಶ ಕಳುಹಿಸಿದ್ದಾರೆ. ಬಾಲಾಜಿ ಪೋಷಕರು ಸಕಲೇಶಪುರ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಬಿಸಿಲೆ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ದಟ್ಟ ಮಂಜು ಕವಿದಿದೆ. ಆದ್ದರಿಂದ ಹುಡುಕಾಟ ನಡೆಸುವ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ.

ಉಳಿದವರು ಸಿಗುತ್ತಿಲ್ಲ : ಸೋಮವಾರ ಸಂಜೆಯಿಂದ ಉಳಿದ 14 ಮಂದಿಯೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ ಮಧುಕೇಶವ್ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಮಳೆ ಮತ್ತು ದಟ್ಟ ಮಂಜಿನ ಕಾರಣದಿಂದಾಗಿ ಶೋಧ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಟೆಕ್ಕಿಗಳ ತಂಡ ಚಾರಣಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಟೆಕ್ಕಿಗಳ ಹುಡುಕಾಟಕ್ಕಾಗಿ ಅರಣ್ಯ, ಪೊಲೀಸ್ ಮತ್ತು ಸ್ಥಳೀಯರು ಇರುವ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಎರಡು ವರ್ಷಗಳ ಹಿಂದೆ ಸಹ ಅರಣ್ಯದಲ್ಲಿ ಚಾರಣಕ್ಕೆ ಬಂದಿದ್ದ ಮೂವರು ನಾಪತ್ತೆಯಾಗಿದ್ದ ಪ್ರಕರಣ ನಡೆದಿತ್ತು ಎಂದು ಅಧಿಕಾರಗಳು ತಿಳಿಸಿದ್ದಾರೆ.

English summary
A software engineer from Chennai reportedly went missing on Monday in Bisale forest near Sakleshpur in Hassan district. He was part of a team of 15 persons working for a software company in Chennai. They arrived in Sakleshpur on Sunday morning for a trekking expedition in Bisale forest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X