Teachers Recruitment: ಶಿಕ್ಷಕರ ನೇಮಕಾತಿ ಭರ್ಜರಿ ಗುಡ್ ನ್ಯೂಸ್, ನಾಳೆಯಿಂದಲೇ ಅರ್ಜಿ ಸ್ವೀಕಾರ!
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಅನ್ನೋದು 7,00,00,000 ಕನ್ನಡಿಗರ ಆಗ್ರಹ... ಹೀಗಿದ್ದರೂ ಕನ್ನಡ ನಾಡಲ್ಲಿ ಪರಭಾಷಿಗರು, ಬೇರೆ ಬೇರೆ ರಾಜ್ಯದಿಂದ ಬರುವವರು ಕೆಲಸ ಪಡೆದು ಕನ್ನಡಿಗರ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇದೆ. ಹೀಗಿದ್ದಾಗ ಕರ್ನಾಟಕದ ಸರ್ಕಾರಿ ಕೆಲಸಗಳಲ್ಲಿ ಕೂಡ ಪರಭಾಷಿಕರು ಹೆಚ್ಚಾಗುತ್ತಿರುವ ಕಾರಣಕ್ಕೆ ಈ ಕೂಡಲೇ ನೇಮಕಾತಿ ಮಾಡಿ ಎಂಬ ಒತ್ತಡ ಸರ್ಕಾರದ ಮೇಲೆ ಜಾಸ್ತಿ ಆಗುತ್ತಿದೆ. ಇಂತಹ ಸಮಯದಲ್ಲೇ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ!
ಬೆಂಗಳೂರಲ್ಲಿ ಕನ್ನಡ ಮರೆಯಾಗಿ ಹೋಗುತ್ತಿದೆ, ಎನ್ನುವ ಆರೋಪಗಳೂ ಆಗಾಗ ನಮ್ಮ & ನಿಮ್ಮ ಕಿವಿಗೆ ಬೀಳುತ್ತಲೇ ಇರುತ್ತದೆ. ಅದರಲ್ಲೂ, ರಾಜಧಾನಿ ಬೆಂಗಳೂರಿನ ಕೆಲವು ಪ್ರದೇಶ ಸಂಪೂರ್ಣ ಪರಭಾಷಿಕರ ಹಿಡಿತಕ್ಕೆ ಸಿಲುಕಿವೆ. ಹೀಗಿದ್ದಾಗ ಐಟಿ ಕಂಪನಿಗಳಲ್ಲೂ ಕನ್ನಡ ಉದ್ಯೋಗಿಗಳು ಕಡಿಮೆ ಎಂಬ ಆರೋಪ ಇದೆ. ಹೀಗಿದ್ದಾಗಲೇ ಕನ್ನಡ ಉದ್ಯೋಗಿಗಳ ಪರವಾಗಿ ರಾಜ್ಯ ಸರ್ಕಾರ ಬೆಂಬಲ ನೀಡಲು ಮುಂದಾಗಿದೆ, ಎನ್ನುವ ಸಮಯದಲ್ಲೇ ಒಂದಷ್ಟು ವ್ಯತ್ಯಾಸವಾಗಿ ಕನ್ನಡಿಗರಿಗೆ ಉದ್ಯೋಗ ಕಡ್ಡಾಯ ನಿಯಮವನ್ನು ಹಿಂಪಡೆಯಲಾಗಿತ್ತು. ಇಷ್ಟೆಲ್ಲದರ ನಡುವೆ ಇದೀಗ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಅಕ್ಟೋಬರ್ 04 ಶನಿವಾರದಿಂದಲೇ ಈ ವಿಭಾಗದಲ್ಲಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ!

ಶಿಕ್ಷಕರ ನೇಮಕಾತಿಗೆ ಅರ್ಜಿ ಸ್ವೀಕಾರ ಶುರು!
ಹೌದು, ಹತ್ತಾರು ಲಕ್ಷ ಜನರು ಪದವಿ ಪಡೆದು ಶಿಕ್ಷಕರಾಗಿ ಸೇವೆ ಸಲ್ಲಿಸಲು ಕಾಯುತ್ತಿದ್ದಾರೆ. ಆದರೆ ಶಿಕ್ಷಕರ ನೇಮಕಾತಿ ಆಗಿಲ್ಲ ಎಂಬ ಒತ್ತಡ ಕೂಡ ಹೆಚ್ಚಾಗಿತ್ತು. ಈ ನಡುವೆ ಶಿಕ್ಷಕರ ನೇಮಕಾತಿಯನ್ನ ಮಾಡಬೇಕು ಎಂಬ ಆಗ್ರಹ ಹೆಚ್ಚಾದ ಹಿನ್ನೆಲೆ ಸರ್ಕಾರ ಕೂಡ ಚಿಂತನೆ ನಡೆಸಿತ್ತು. ಇಷ್ಟೆಲ್ಲಾ ಘಟನೆಗಳ ನಡುವೆ ದಿಢೀರ್ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಅಕ್ಟೋಬರ್ 04 ಶನಿವಾರದಿಂದಲೇ ಶಿಕ್ಷಕರ ನೇಮಕಾತಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಹಾಗಾದರೆ ಯಾವೆಲ್ಲಾ ಹುದ್ದೆಗಳಿಗೆ ಅವಕಾಶ ಇದೆ ಗೊತ್ತಾ?
ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ವೆಬ್‌ಸೈಟ್
ಹೌದು, ಈಗ ಅಲ್ವಸಂಖ್ಯಾತರ ನಿರ್ದೇಶನಾಲಯದಿಂದ 2025-26ನೇ ಶೈಕ್ಷಣಿಕ ಸಾಲಿನಲ್ಲಿ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಅಜೀಂ ಪ್ರೇಮ್ ಜೀ ಫೌಂಡೇಶನ್ ಭಾರಿ ಮಹತ್ವದ ನಿರ್ಧಾರ ಕೈಗೊಂಡಿದೆ. ಅಜೀಂ ಪ್ರೇಮ್ ಜೀ ಫೌಂಡೇಶನ್ ಆಯ್ಕೆ ಮಾಡಿದ ಮದರಾಸಗಳಲ್ಲಿ ಔಪಾಚಾರಿಕ ಶಿಕ್ಷಣ ವಿಷಯ ಕನ್ನಡ, ಇಂಗ್ಲೀಷ್, ವಿಜ್ಞಾನ ಮತ್ತು ಗಣಿತ ವಿಷಯಗಳನ್ನ ಬೋಧಿಸಲು ಇದೀಗ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಅಕ್ಟೋಬರ್ 04, 2025 ರಂದು ಕೊನೇ ದಿನವಾಗಿದ್ದು, ಹೀಗೆ ಅರ್ಜಿ ಸಲ್ಲಿಸಿದವರಿಗೆ ಅಕ್ಟೋಬರ್ 10 2025 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ನಂತರ ಅಂದರೆ ಅಕ್ಟೋಬರ್ 13, 2025ಕ್ಕೆ ರಿಸಲ್ಟ್ ಬಿಡುಗಡೆ ಆಗಲಿದೆ. ಅಕ್ಟೋಬರ್ 15, 2025ಕ್ಕೆ ಬೋಧನಾ ಪ್ರತ್ಯಕ್ಷಿಕೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಅಲ್ಪಸಂಖ್ಯಾತರ ನಿರ್ದೇಶನಾಲಯ ಅಧಿಕೃತ ವೆಬ್‌ಸೈಟ್ ಆಗಿರುವ https://dom.karnataka.gov.in ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications