• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆರಿಗೆ ಸೋರಿಕೆಗೆ ತಡೆ: ವಂಚಕರಿಗೆ ಬಿಸಿ ಮುಟ್ಟಿಸಿದ ಸಾರಿಗೆ ಇಲಾಖೆ

|

ಬೆಂಗಳೂರು, ಜನವರಿ 27: ಬೇರೆಲ್ಲಾ ಇಲಾಖೆಯಲ್ಲಿ ಇರುವಂತೆ ಸಾರಿಗೆ ಇಲಾಖೆಯಲ್ಲೂ ಕೂಡ ತೆರಿಗೆ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಇದೀಗ ಅಧಿಕಾರಿಗಳು ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸಿ ಅವರಿಂದ 281.5 ಕೋಟಿ ರೂ. ತೆರಿಗೆ ಮತ್ತು ದಂಡ ವಸೂಲಿ ಮಾಡಿದ್ದಾರೆ.

ಬಿಎಂಟಿಸಿ ನೌಕರರ ಪ್ರತಿಭಟನೆ: ಬಸ್ ಸಂಚಾರದಲ್ಲಿ ವ್ಯತ್ಯಯವಿಲ್ಲ

ಸಾರಿಗೆ ಇಲಾಖೆಯ ವಿವಿಧ ಮೂಲಗಳಿಂದ ರಾಜಸ್ವ ಸಂಗ್ರಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2017-18ರಲ್ಲಿ 5,954 ಕೋಟಿ ರೂ. ಸಂಗ್ರಹವಾಗಿತ್ತು.

2018-19ರಲ್ಲಿ 26 ಲಕ್ಷ ವಾಹನಗಳ ತಪಾಸಣೆ

2018-19ರಲ್ಲಿ 26 ಲಕ್ಷ ವಾಹನಗಳ ತಪಾಸಣೆ

ನಿಯಮ ಉಲ್ಲಂಘನೆ ಮಾಡಿದ್ದ ವಾಹನಗಳ ಸಂಖ್ಯೆ ಒಟ್ಟು 3,04,418, ಸಿಬ್ಬಂದಿ ತಪಾಸಣೆ ನಡೆಸಿರುವ ವಾಹನಗಳು 26,26,685, ಇದರಲ್ಲಿ ಒಟ್ಟು 13,985 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತೆರಿಗೆ ರೂಪದಲ್ಲಿ ವಾಹನಗಳಿಂದ ಒಟ್ಟು 127.13 ಕೋಟಿ ರೂ ಆದಾಯ

ತೆರಿಗೆ ರೂಪದಲ್ಲಿ ವಾಹನಗಳಿಂದ ಒಟ್ಟು 127.13 ಕೋಟಿ ರೂ ಆದಾಯ

ಹೀಗೆ ತಪಾಸಣೆ ನಡೆಸಿದ ವಾಹನಗಳಿಂದ ತೆರಿಗೆ ರೂಪದಲ್ಲಿ 127.13 ಕೋಟಿ ರೂ. ಆದಾಯಗಳಿಸಿದೆ. ದಂಡದ ರೂಪದಲ್ಲಿ 56.42 ಕೋಟಿ ರೂ. ವಸೂಲಿ ಮಾಡಲಾಗಿದೆ.

ಕೋರ್ಟ್ ಮೂಲಕ ದಂಡ ವಸೂಲಿ

ಕೋರ್ಟ್ ಮೂಲಕ ದಂಡ ವಸೂಲಿ

ಸಾರಿಗೆ ಇಲಾಖೆ ಪ್ರಕರಣ ಒಪ್ಪದೆ ನ್ಯಾಯಾಲಯದಲ್ಲಿ ಕೆಲ ವಾಹನ ಮಾಲೀಕರಿಂದ 12,308 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 2018-19ರ ಸಾಲಿನಲ್ಲಿ 5,505 ಪ್ರಕರಣ ವಿಲೇವಾರಿಯಾಗಿದ್ದು, ಅವುಗಳಿಂದ ನ್ಯಾಯಾಲಯದ ಸೂಚನೆಯಂತೆ 40.95 ಲಕ್ಷ ರೂ. ವಸೂಲಿ ಮಾಡಲಾಗಿದೆ.

15 ತನಿಖಾ ಠಾಣೆಗಳು

15 ತನಿಖಾ ಠಾಣೆಗಳು

ತೆರಿಗೆ ಆದಾಯ ಸೋರಿಕೆ ತಡೆಗಟ್ಟಲು ಮೋಟಾರು ವಾಹನ ಕಾಯ್ದೆ 1988ರ ಅಡಿಯಲ್ಲಿ ಸಾರಿಗೆ ಇಲಾಖೆ 15 ತನಿಖಾ ಠಾಣೆಗಳನ್ನು ತೆರೆದಿದೆ. ಆ ಠಾಣೆಗಳಿಂದ 96.76 ಕೋಟಿ ರೂ. ತೆರಿಗೆ ಸೋರಿಕೆ ಪತ್ತೆ ಹಚ್ಚಿ ವಾಹನಗಳಿಂದ ಅಷ್ಟು ಮೊತ್ತವನ್ನು ವಸೂಲಿ ಮಾಡಲಾಗಿದೆ.

English summary
Tax fraud cases are increasing day by day in the Department of Transportation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X