ತೆರಿಗೆ ವಂಚನೆ ಪ್ರಕರಣ, ಸಂತೋಷ್ ಲಾಡ್ ಸಂಬಂಧಿಗೆ 4 ವರ್ಷ ಜೈಲು

ಬೆಂಗಳೂರು, ಜೂನ್ 8: ಸುಳ್ಳು ಐಟಿ ರಿಟರ್ನ್ಸ್ ಸಲ್ಲಿಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ಸಂತೋಷ್ ಲಾಡ್ ಸಂಬಂಧಿ ಉದ್ಯಮಿ ವಿಶ್ವಾಸ್ ಉದಯಸಿಂಗ್ ಲಾಡ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಲಾಗಿದೆ.

ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ವಿಶ್ವಾಸ್ ಲಾಡ್ ಅವರನ್ನು ಅಪರಾಧಿ ಎಂದು ಮೇ 26ರಂದು ಆದೇಶ ನೀಡಿತ್ತು. ಇದೀಗ ಗುರುವಾರ 4 ವರ್ಷಗಳ ಶಿಕ್ಷೆ ಮತ್ತು 2 ಲಕ್ಷ ರೂಪಾಯಿವರೆಗೆ ದಂಡ ವಿಧಿಸಿ ಆದೇಶಿಸಿದೆ.

ಕೈಗಾರಿಕೋದ್ಯಮಿ ಹಾಗೂ ಹಲವು ಕಂಪನಿಗಳಲ್ಲಿ ನಿರ್ದೇಶಕರಾಗಿರುವ ವಿಶ್ವಾಸ್ ಲಾಡ್ 2010-11ರ ಆರ್ಥಿಕ ವರ್ಷದಲ್ಲಿ ಹಲವು ಬ್ಯಾಂಕ್ ಗಳಲ್ಲಿ 9.60 ಕೋಟಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದರು. ಅವರು 2011-12 ಮತ್ತು 2013-14 ರಲ್ಲಿ ಇದರಿಂದ ಬಂದ ಆದಾಯ 69.33 ಲಕ್ಷ ರೂಪಾಯಿಗಳನ್ನು ತಮ್ಮ ಟ್ಯಾಕ್ಸ್ ರಿಟರ್ನ್ಸ್ ನಲ್ಲಿ ತೋರಿಸಿರಲಿಲ್ಲ.

Tax evasion, Congress leader Santosh Lad’s kin gets 4 years jail

ನ್ಯಾಯಾಧೀಶರು 2010-11ರ ಅಪರಾಧಕ್ಕೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 276ಸಿ ಮತ್ತು 277ರ ಅಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ಮತ್ತು 2011-12 ಹಾಗೂ 2012-13ರ ಅಪರಾಧಕ್ಕೆ ತಲಾ ಒಂದು ವರ್ಷ ಶಿಕ್ಷೆ ನೀಡಿದ್ದಾರೆ.

ಇದು ಕರ್ನಾಟಕದಲ್ಲಿ ತೆರಿಗೆ ವಂಚನೆಗೆ ನೀಡಿರುವ ಅತೀ ಹೆಚ್ಚಿನ ಶಿಕ್ಷೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+