ಟಿವಿ9 ವಿರುದ್ಧ ತನ್ವೀರ್ ಮಾನನಷ್ಟ ಮೊಕದ್ದಮೆ

Posted By:
Subscribe to Oneindia Kannada

ರಾಯಚೂರು , ನವೆಂಬರ್ 12 : ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ಸಂಬಂಧ ಟಿವಿ9 ವರದಿಗಾರ ಮತ್ತು ಕ್ಯಾಮೆರಾ ಮೆನ್ ವಿರುದ್ಧ ರಾಯಚೂರು ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ವೀರ್ ಸೇಠ್ ಟಿಪ್ಪುಜಯಂತಿಯಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ್ದಾರೆ ಎಂಬ ದೃಶ್ಯದ ತುಣುಕುಗಳನ್ನು ಸುದ್ದಿವಾಹಿನಿ ಬಿತ್ತರ ಮಾಡಿತ್ತು. ಅಲ್ಲದೆ ಈ ಬಗ್ಗೆ ರಾಜಕೀಯ ಪಕ್ಷದಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ವಿಧಾನಸೌಧ ಸೇಠ್ ಕಚೇರಿಗೆ ಬೀಗ ಜಡಿದು ಜೆಡಿಎಸ್ ಪ್ರತಿಭಟಿಸಿತ್ತು.

tanveer

ಶೋಭಾ ಕರಂದ್ಲಾಜೆ, ಜನಾರ್ದನ ಪೂಜಾರಿ, ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲ ಪಕ್ಷಗಳ ಪ್ರಮುಖ ಮುಖಂಡರು ರಾಜೀನಾಮೆಗೆ ಒತ್ತಾಯಿಸಿದ್ದರು. ಕೆಲ ಕಾಂಗ್ರೆಸ್‌ ಮುಖಂಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ತಳ್ಳಿಹಾಕಿದ್ದರು.

ಸೇಠ್ ಎಪಿಎಸ್ ಸೆಕ್ಷನ್ 504ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸುದ್ದಿವಾಹಿನಿಯ ವರದಿಗಾರ ಸಿದ್ದು ಬೀರಾದಾರ್ ಮತ್ತು ಛಾಯಾಗ್ರಾಹಕ ದನಂಜಯ ಅವರ ವಿರುದ್ಧ ರಾಯಚೂರು ಪಶ್ವಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತನಗೆ ಅಪಮಾನ ಮಾಡುವ ರೀತಿಯಲ್ಲಿ ಸುದ್ದಿಯನ್ನು ಬೀತ್ತರಿಸುವ ಕಾರಣ ಸೂಚಿಸಿದ್ದಾರೆ.['ಅಶ್ಲೀಲ ಮಂತ್ರಿ' ಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ: ಪುಟ್ಟಣ್ಣ]

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ವೀರ್ ನಾನು ಯಾವುದೇ ರೀತಿಯ ಚಿತ್ರವನ್ನು ನೋಡಿಲ್ಲ ನನ್ನದು ಜವಬ್ದಾರಿಯುತ ಸಾರ್ವಜನಿಕ ಜೀವನವಾಗಿದೆ. ಮಾಧ್ಯಮಗಳು ವಿಚಾರವನ್ನು ಪರಾಮರ್ಶೆಗೊಳಿಸದೇ ಆರೋಪ ಮಾಡುತ್ತಿವೆ. ನನ್ನದಲ್ಲದ ತಪ್ಪಿಗೆ ಸಾರ್ವಜನಿಕ ವಲಯದಲ್ಲಿ ಆರೋಪ ಎದುರಿಸಬೇಕಾಗಿದೆ. ನಾನು ನಿರ್ದೋಷಿ ಯಾವುದೇ ತನಿಖೆಗೂ ಸಿದ್ಧವಾಗಿದ್ದೇನೆ. ಪಕ್ಷದ ಎಲ್ಲಾ ಪ್ರಮುಖರಿಗೆ ಈ ಬಗ್ಗೆ ಸಮಗ್ರ ವಿವರವನ್ನು ನೀಡುತ್ತೇನೆ. ಪಕ್ಷಕ್ಕೆ ಮುಜುಗುರ ಆಗದಂತೆ ಸಿಎಂ ಜೊತೆ ಚರ್ಚಿಸಿ ಮುನ್ನಡೆಯುತ್ತೇನೆ. ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.[ಟಿಪ್ಪು ವೇದಿಕೆಯಲ್ಲೇ ಅರೆ ನಗ್ನ ಚಿತ್ರ ವೀಕ್ಷಿಸಿದ ತನ್ವೀರ್]

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿ, 'ನಾನು ವರದಿಯನ್ನು ತೆಗೆದುಕೊಂಡ ಮೇಲೆ ಇದರ ಬಗ್ಗೆ ಉತ್ತರ ನೀಡುತ್ತೇನೆ. ತಪ್ಪು ಯಾರೇ ಮಾಡಿದ್ದರೂ ತಪ್ಪೇ ನನಗೆ ವರದಿ ಬರುವವರೆಗೂ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳವುದಿಲ್ಲ' ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tanveer sait Semi-nude video case: Tanveer complaint agenest TV9 kannada in westren police station in Raichuru
Please Wait while comments are loading...