SWR: ಅರಸೀಕೆರೆ ರೈಲು ಪ್ರಯಾಣಿಕರಿಗೆ ಸೂಚನೆ: ಆ.10ರಿಂದ ಎರಡು ರೈಲುಗಳ ಸಮಯ ಬದಲಾವಣೆ
ಬೆಂಗಳೂರು: ತುರ್ತು ಕಾರ್ಯಾಚರಣೆ ನಿರ್ಬಂಧ ಹಿನ್ನೆಲೆಯಲ್ಲಿ ಅರಸೀಕೆರೆಗೆ ಆಗಮಿಸುವ ಮೆಮು ರೈಲು ಹಾಗೂ ಪ್ಯಾಸೆಂಜರ್ ರೈಲುಗಳ ಸಮಯದಲ್ಲಿ ಬದಲಾವಣೆ ಆಗಿದೆ. ಈ ಪರಿಷ್ಕೃತ ಸಮಯವು ಆಗಸ್ಟ್ 10ರಿಂದ ಜಾರಿಗೆ ಬರಲಿದೆ ಎಂದು ನೈಋತ್ಯ ರೈಲ್ವೆ ವಲಯದ (South Western Railway) ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ನೈಋತ್ಯ ರೈಲ್ವೆಯು ಅರಸೀಕೆರೆ ನಿಲ್ದಾಣಕ್ಕೆ ಆಗಮಿಸುವ ಎರಡು ರೈಲುಗಳ ಸಮಯವನ್ನು ಬದಲಾಯಿಸಿದೆ. ಯಲಹಂಕ - ಅರಸೀಕೆರೆ ಮೆಮು ರೈಲು ಹಾಗೂ ಮೈಸೂರು - ಅರಸೀಕೆರೆ ಪ್ಯಾಸೆಂಜರ್ ರೈಲುಗಳಿಗೆ ಈ ಪರಿಷ್ಕೃತ ಸಮಯ ಆಗಸ್ಟ್ 10ರಿಂದ ಅನ್ವಯಿಸಲಿದೆ.

* ಯಲಹಂಕ - ಅರಸೀಕೆರೆ ಮೆಮು ರೈಲು (ಸಂಖ್ಯೆ 66505) ಅರಸೀಕೆರೆ ನಿಲ್ದಾಣಕ್ಕೆ ಪ್ರಸ್ತುತ ಬೆಳಗ್ಗೆ 11 ಗಂಟೆಗೆ ಆಗಮಿಸುತ್ತಿತ್ತು. ಅದು ಬದಲಾದ ಸಮಯದಲ್ಲಿ 11:15 ಗಂಟೆಗೆ ಅಂದರೆ ಹದಿನೈದು ನಿಮಷ ತಡವಾಗಿ ಆಗಮಿಸಲಿದೆ.
* ಮೈಸೂರು-ಅರಸೀಕೆರೆ ಪ್ಯಾಸೆಂಜರ್ ರೈಲು (ಸಂಖ್ಯೆ 56266) ಅರಸೀಕೆರೆ ನಿಲ್ದಾಣಕ್ಕೆ ಪ್ರಸ್ತುತ ಸಮಯ 10:25 ಗಂಟೆಯ ಆಗಮಿಸುತ್ತಿತ್ತು, ಅದೀಗ 10:15 ಗಂಟೆಗೆ ಅಂದರೆ ಹತ್ತು ನಿಮಿಷ ಮುಂಚಿತವಾಗಿಯೇ ಆಗಮಿಸಲಿದೆ. ಈ ಎರಡು ರೈಲುಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಗಮನಿಸಿ ಪ್ರಯಾಣ ಪ್ಲ್ಯಾನ್ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ಮಂಗಳೂರು-ಯಶವಂತಪುರ ವಿಶೇಷ ರೈಲು
ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಣೆಗಾಗಿ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು (06016) ಮಂಗಳೂರು ಜಂಕ್ಷನ್ ಮತ್ತು ಯಶವಂತಪುರ ನಡುವೆ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ. ಒಂದು ಟ್ರಿಪ್ ವಿಶೇಷ ಸೇವೆ ಒದಗಿಸುತ್ತಿದೆ.
ಮಂಗಳೂರು ಜಂಕ್ಷನ್ -ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (06016) ಬೆಳಗ್ಗೆ 11.30ಕ್ಕೆ ಹೊರಟು, ಇಂದೇ ರಾತ್ರಿ 20.50 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ಬಂಟವಾಳ, ಕಬಕಾಪುತ್ತೂರು, ಸುಬ್ರಹ್ಮಣ್ ರಸ್ತೆ, ಸಕಲೇಶಪುರ, ಹಾಸನ, ಚೆನ್ನಪಟ್ಟಣ, ಶ್ರವಣಬೆಳಗೊಳ, ಬಿಜಿ ನಗರ, ಯಡಿಯೂರು, ಕುಣಿಗಲ್, ನೆಲಮಂಗಲ ಹಾಗೂ ಚಿನ್ನಬಾಣಾವರ ನಿಲ್ದಾಣದಲ್ಲಿ ನಿಲುಗಡೆ ನೀಡಿದೆ. ಒಟ್ಟು 14ಕೋಚ್‌ಗಳ ರೈಲು ಇದಾಗಿದೆ.
ಇತ್ತೀಚೆಗೆ ಅರಸಿಕೆರೆ, ಹಾಸನ ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ಬೆಂಗಳೂರು-ಮಂಗಳೂರು, ವಿಜಯಪುರ-ಮಂಗಳೂರು ಸೆಂಟ್ರಲ್ ಸೇರಿ ವಿವಿಧ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಕಲೇಶಪುರ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ ಕಾರಣ ಪ್ರಮುಖ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು.


Click it and Unblock the Notifications
