SWR: ರೈಲ್ವೆ ಜೋಡಿ ಹಳಿ ಕಾಮಗಾರಿ: ಅನೇಕ ರೈಲುಗಳು ಭಾಗಶಃ ರದ್ದು, ಪಟ್ಟಿ ಇಲ್ಲಿದೆ
ಹುಬ್ಬಳ್ಳಿ, ಫೆಬ್ರವರಿ 10: ನೈಋತ್ಯ ರೈಲ್ವೆ ಮಾರ್ಗ ವ್ಯಾಪ್ತಿಯ ಮುಗಳೊಳ್ಳಿ-ಜಡ್ರಾಮಕುಂಟಿ-ಆಲಮಟ್ಟಿ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಕೈಗೊಳ್ಳಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ. ಯಾವೆಲ್ಲ ರೈಲುಗಳು, ಪಟ್ಟಿ, ಸಂಖ್ಯೆ ಮಾರ್ಗಗಳ ವಿವರ ಇಲ್ಲಿದೆ.
ರೈಲು ಸಂಚಾರ ರದ್ದು ವಿವರ
* ಫೆಬ್ರವರಿ 17 ರಿಂದ 25 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಸೋಲಾಪುರ ಡೈಲಿ ಪ್ಯಾಸೆಂಜರ್ ರೈಲು (ಸಂಖ್ಯೆ 56906) ರದ್ದಾಗಿದೆ.
* ಫೆ. 18 ರಿಂದ 26 ರವರೆಗೆ ಸೋಲಾಪುರ-ಧಾರವಾಡ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (11415)
* ಫೆ. 26 ರಂದು ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್ ಪ್ರೆಸ್ ರೈಲುಗಳ (11416) ಪ್ರಯಾಣವನ್ನೂ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ರೈಲುಗಳ ಸಂಚಾರ ಭಾಗಶಃ ರದ್ದು
* ಫೆ. 16 ರಿಂದ 24 ರವರೆಗೆ ಯಶವಂತಪುರದಿಂದ ಹೊರಡುವ ರೈಲು (06545) ಯಶವಂತಪುರ-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಗದಗ-ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಗದಗಿನಲ್ಲಿ ರೈಲು ಕೊನೆಗೊಳ್ಳುತ್ತದೆ.
* ಫೆ. 17 ರಿಂದ 25 ರವರೆಗೆ ರೈಲು (06546) ವಿಜಯಪುರ-ಯಶವಂತಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ವಿಜಯಪುರದ ಬದಲಿಗೆ ಗದಗ ನಿಲ್ದಾಣದಿಂದ ಹೊರಡಲಿದೆ. ವಿಜಯಪುರ-ಗದಗ ನಿಲ್ದಾಣಗಳ ನಡುವಿನ ಪ್ರಯಾಣ ಭಾಗಶಃ ರದ್ದುಗೊಂಡಿದೆ.
* ಮೈಸೂರು ನಿಲ್ದಾಣದಿಂದ ಹೊರಡುವ ರೈಲು (17307) ಮೈಸೂರು-ಬಾಗಲಕೋಟೆ ಬಸವ ಎಕ್ಸ್ ಪ್ರೆಸ್ ರೈಲು ಫೆ. 16 ರಿಂದ 24 ರವರೆಗೆ ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಇದು ವಿಜಯಪುರದಲ್ಲಿ ಕೊನೆಗೊಳ್ಳುತ್ತದೆ.
* ಫೆ.17 ರಿಂದ 25ರವರೆಗೆ ರೈಲು (17308) ಬಾಗಲಕೋಟೆ-ಮೈಸೂರು ಬಸವ ಎಕ್ಸ್ ಪ್ರೆಸ್ ರೈಲು ಬಾಗಲಕೋಟೆ ನಿಲ್ದಾಣದ ಬದಲು ವಿಜಯಪುರದಿಂದ ಹೊರಡಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ರದ್ದಾಗಿದೆ.
* ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (07378) ಫೆ.16 ರಿಂದ 24 ರವರೆಗೆ ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಾಗಲಕೋಟೆಯಲ್ಲಿ ಕೊನೆಗೊಳ್ಳಲಿದೆ.

* ಫೆ 17 ರಿಂದ 25 ರವರೆಗೆ ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು (07377) ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ರದ್ದಾಗಿದೆ.
* ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ವಿಶೇಷ ರೈಲು (06919) ಫೆ 17 ರಿಂದ 25 ರವರೆಗೆ ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಬಾಗಲಕೋಟೆಯಲ್ಲಿ ಕೊನೆಗೊಳ್ಳುತ್ತದೆ.
* ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು (ಸಂಖ್ಯೆ 06920) ವಿಜಯಪುರದ ಬದಲು ಬಾಗಲಕೋಟೆಯಿಂದ ಸಂಚರಿಸುತ್ತದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಗೊಳಿಸಲಾಗಿದೆ.
ರೈಲು ತಡವಾಗಿ ಪ್ರಾರಂಭ
* ಹೊಸಪೇಟೆ-ಸಿಎಸ್ಎಂಟಿ ಮುಂಬೈ ಎಕ್ಸ್‌ಪ್ರೆಸ್ ರೈಲು (11140) ಫೆ. 25 ರಂದ ಹೊಸಪೇಟೆ ನಿಲ್ದಾಣದಿಂದ 2 ಗಂಟೆ ತಡವಾಗಿ ಸಂಚಾರ ಆರಂಭಿಸಲಿದೆ.
ರೈಲು ಮಾರ್ಗ ಮಧ್ಯ ನಿಯಂತ್ರಣ
* ಫೆ. 25 ರಂದು ಪಂಢರಪುರ ನಿಲ್ದಾಣದಿಂದ ಹೊರಡುವ ರೈಲು (16536) ಪಂಢರಪುರ-ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
ಆಲಮಟ್ಟಿ ನಿಲ್ದಾಣದಲ್ಲಿ ನಿಲ್ಲದ ರೈಲುಗಳ ಪಟ್ಟಿ
1. ಯಶವಂತಪುರ-ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16587) ಫೆ. 21 ಮತ್ತು 23ರಂದು ಆಲಮಟ್ಟಿ ನಿಲ್ದಾಣದಲ್ಲಿ ನಿಲುಗಡೆ ನೀಡುವುದಿಲ್ಲ.
* ಎಸ್ಎಸ್ಎಸ್ ಹುಬ್ಬಳ್ಳಿ-ಹೈದರಾಬಾದ್ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17319) ಫೆ. 20 ರಿಂದ 24ರವರೆಗೆ ಈ ನಿಲ್ದಾಣದಲ್ಲಿ ನಿಲ್ಲದು.
* ಹೈದರಾಬಾದ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ (17320) ಫೆ.20 ರಿಂದ 24ರವರೆಗೆ ನಿಲುಗಡೆ ನೀಡುವುದಿಲ್ಲ.
* ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16588): :ಫೆ.18ರಿಂದ 23ವರೆಗೆ ನಿಲುಗಡೆ ನೀಡದು.
* ರೈಲು ಸಂಖ್ಯೆ 17324 ಬನಾರಸ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ( ಫೆ.23)
* ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 11416) ಫೆ.21 ರಿಂದ 25 ರವರೆಗೆ ನಿಲುಗಡೆ ರದ್ದಾಗಿದೆ.
* ರೈಲು ಸಂಖ್ಯೆ 16535 ಮೈಸೂರು-ಪಂಢರಪುರ ಗೋಲ್ ಗುಂಬಜ್ ಡೈಲಿ ಎಕ್ಸ್‌ಪ್ರೆಸ್ (ಫೆ.21 ರಿಂದ 25)
* ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 07330) ಫೆ. 21ರಿಂದ 25ರವರೆಗೆ ನಿಲುಗಡೆ ನೀಡುವುದಿಲ್ಲ.
* ರೈಲು ಸಂಖ್ಯೆ 11139 ಸಿಎಸ್ಎಂಟಿ ಮುಂಬೈ-ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ (ಫೆ.20 ರಿಂದ 24)
* ಸೋಲಾಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲು (56905) ಫೆ. 21 ರಿಂದ 25
* ರೈಲು ಸಂಖ್ಯೆ 11415 ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ ರೈಲು (ಫೆ.21 ರಿಂದ 24)
* ಹೊಸಪೇಟೆ-ಸಿಎಸ್ಎಂಟಿ ಮುಂಬೈ ಎಕ್ಸ್‌ಪ್ರೆಸ್ ರೈಲು (11140) ಫೆ. 21ರಿಂದ 25 ರವರೆಗೆ ನಿಲುಗಡೆ ನೀಡದು.
* ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ ಗುಂಬಜ್ ಡೈಲಿ ಎಕ್ಸ್‌ಪ್ರೆಸ್ ರೈಲು (21 ರಿಂದ 25ರವರೆಗೆ ನಿಲುಗಡೆ ನೀಡುವುದಿಲ್ಲ)
* ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯಪುರ ಡೈಲಿ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ ರೈಲು (07329) ಫೆ.21 ರಿಂದ 25ರವರೆಗೆ ನಿಲ್ಲುವುದಿಲ್ಲ.
* 17323 ಸಂಖ್ಯೆಯ ಎಸ್‌ಎಸ್‌ಎಸ್ ಹುಬ್ಬಳ್ಳಿ-ಬನಾರಸ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಫೆ. 21)
* ಮೈಸೂರು-ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16217) ಫೆ.24 ರಂದು ಆಲಮಟ್ಟಿ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.
* ಸಂಖ್ಯೆ 07322ರ ಧಾರವಾಡ-ಸೋಲಾಪುರ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ( ಫೆ. 21 ರಿಂದ 25)
ಜಡ್ರಾಮಕುಂಟಿ ನಿಲ್ದಾಣ: ನಿಲುಗಡೆ ನೀಡದ ರೈಲುಗಳು
* ಸಂಖ್ಯೆ 11416ರ ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್ ಪ್ರೆಸ್ ರೈಲು (ಫೆ19 ರಿಂದ 25)
* 56905 ಸಂಖ್ಯೆಯ ಸೋಲಾಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲು (ಫೆ.19 ರಿಂದ 25)
* ಸಂಖ್ಯೆ 11415ರ ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್ ಪ್ರೆಸ್ ರೈಲು (ಫೆ. 19 ರಿಂದ 24)
* ಧಾರವಾಡ-ಸೋಲಾಪುರ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (ಸಂಖ್ಯೆ 07322) ಫೆ.19 ರಿಂದ 25ರಂದು ನಿಲುಗಡೆ ನೀಡುವುದಿಲ್ಲ ಎಂದು ನೈಋತ್ಯ ರೈಲ್ವೆ ಹುಬ್ಬಳ್ಳಿ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications