ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ 2 ಜೋಡಿ ಮಾರ್ಗ ಯೋಜನೆಗೆ ಟೆಂಡರ್ ಕರೆದ ರೈಲ್ವೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 07 : ಯಲಹಂಕ-ಪೆನುಕೊಂಡ ಮತ್ತು ತುಮಕೂರು-ಅರಸೀಕೆರೆ ನಡುವೆ ಜೋಡಿ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಟೆಂಡರ್ ಕರೆದಿದೆ. ಬಹುಬೇಡಿಕೆಯ ಎರಡೂ ಮಾರ್ಗಗಳ ಕಾಮಗಾರಿಯನ್ನು 18 ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

2015-16ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಈ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಯಲಹಂಕ-ಪೆನುಕೊಂಡ ಮಾರ್ಗ ಸುಮಾರು 120.55 ಕಿ.ಮೀ. ಇದ್ದು, 960 ಕೋಟಿ ರೂ.ಗಳ ಕಾಮಗಾರಿ ಇದಾಗಿದೆ. ಸುಮಾರು 96 ಕಿ.ಮೀ.ನ ತುಮಕೂರು-ಅರಸೀಕೆರೆ ಮಾರ್ಗದ ಕಾಮಗಾರಿಗೆ 347 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.[ರೈಲ್ವೆ ಬಜೆಟ್ ಮುಖ್ಯಾಂಶಗಳು]

indian railways

'ಯಲಹಂಕ-ಪೆನುಕೊಂಡ ಮಾರ್ಗದಲ್ಲಿ ಎಕ್ಸ್‌ಪ್ರೆಸ್ ರೈಲುಗಳು ಹೆಚ್ಚಾಗಿ ಸಂಚರಿಸುತ್ತವೆ. ಪ್ರತಿದಿನ 40ಕ್ಕೂ ಹೆಚ್ಚು ರೈಲು, 30ಕ್ಕೂ ಅಧಿಕ ಗೂಡ್ಸ್ ರೈಲುಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತವೆ. ಆದ್ದರಿಂದ, ಜೋಡಿ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ' ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಸಕ್ಷೇನಾ ಹೇಳಿದ್ದಾರೆ. [ತುಮಕೂರು-ಅರಸೀಕೆರೆ ಜೋಡಿ ಮಾರ್ಗಕ್ಕೆ ಒಪ್ಪಿಗೆ]

ಬೆಂಗಳೂರು ನಗರ ರೈಲು ನಿಲ್ದಾಣದಿಂದ ಯಲಹಂಕ ರೈಲು ನಿಲ್ದಾಣದ ತನಕ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಾರ್ಗವನ್ನು ಪೆನುಕೊಂಡ ತನಕ ವಿಸ್ತರಣೆ ಮಾಡಲಾಗುತ್ತದೆ. ಈ ಮಾರ್ಗದಲ್ಲಿ ರೈಲ್ವೆ ಭೂಮಿಯೇ ಹಲವಾರು ಕಡೆ ಇದ್ದು, ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತುಮಕೂರು-ಅರಸೀಕೆರೆ : ತುಮಕೂರು-ಅರಸೀಕೆರೆ ನಡುವೆ ಜೋಡಿ ಮಾರ್ಗ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದಕ್ಕೆ ಈ ಮಾರ್ಗ ಸೇರಲಿದೆ.

ತುಮಕೂರು-ಅರಸೀಕೆರೆ ಜೋಡಿ ಮಾರ್ಗದ ಕಾಮಗಾರಿ 347 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಸುಮಾರು 96 ಕಿ.ಮೀ. ಉದ್ದದ ಈ ಮಾರ್ಗ ನಿರ್ಮಾಣದ ಸಮೀಕ್ಷೆಯನ್ನು ಪೂರ್ಣಗೊಳಿಸಿ ಇಲಾಖೆಗೆ ವರದಿಯನ್ನು ನೀಡಲಾಗಿದೆ. 2015ರ ಅಕ್ಟೋಬರ್ ಅಂತ್ಯದ ವೇಳೆಗೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.

English summary
South Western Railway (SWR) has invited tenders for doubling of Yelahanka-Penukonda and Tumakuru-Arsikere rail lines. These projects announced in railway budget 2015-16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X