ರೈಲ್ವೆ ಗುಡ್‌ನ್ಯೂಸ್: ಯಲಹಂಕ-ಹುಬ್ಬಳ್ಳಿ ನಡುವೆ ವಿಶೇಷ ರೈಲು ಸೇವೆ, ವೇಳಾಪಟ್ಟಿ
ಬೆಂಗಳೂರು, ನವೆಂಬರ್ 13: ಹಬ್ಬಗಳ ಪ್ರಯುಕ್ತ ವಿಶೇಷ ರೈಲುಗಳ ಸೇವೆ ನೀಡಿರುವ ನೈಋತ್ಯ ರೈಲ್ವೆ (South Western Railway) ಇದೀಗ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿ ಮಧ್ಯೆ ವಿಶೇಷ ರೈಲು ಸೇವೆ ನೀಡಿದೆ. ಈ ರೈಲು ನವೆಂಬರ್ 14ರವರೆಗೆ ತನ್ನ ಸೇವೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲು ಸಂಚಾರ ಸಮಯ, ನಿಲ್ದಾಣಗಳು ಮತ್ತು ವೇಳಾಪಟ್ಟಿ ವಿವರ ಇಲ್ಲಿದೆ.
ನೈಋತ್ಯ ರೈಲ್ವೆ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನ ಯಲಹಂಕದಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿ ನಿಲ್ದಾಣವರೆಗೆ ವಿಶೇಷ ರೈಲು ಇಂದು ಮತ್ತು ನಾಳೆ (ನವೆಂಬರ್ 13 ಮತ್ತು 14ರಂದು) ಕಾರ್ಯಾಚರಣೆ ನಡೆಸಲಿದೆ. ಪ್ರಯಾಣಿಕರ ಸಾರಿಗೆ ಸೌಲಭ್ಯಕ್ಕಾಗಿ ಮತ್ತು ಹುಬ್ಬಳ್ಳಿ-ಯಲಹಂಕ ಮಧ್ಯೆ ಸುಲಭ ಸಂಚಾರಕ್ಕಾಗಿ ಈ ವಿಶೇಷ ರೈಲು (07319) ಸಂಚರಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲಿನ ಸಮಯ, ವೇಳಾಪಟ್ಟಿ
ಹುಬ್ಬಳ್ಳಿ-ಯಲಹಂಕ ವಿಶೇಷ ವಿಶೇಷ ರೈಲು (07319) 2025ರ ನವೆಂಬರ್ 13ರಂದು ಗುರುವಾರ ರಾತ್ರಿ 8 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡುತ್ತದೆ. ಮರು ದಿನ ನವೆಂಬರ್ 14ರಂದು ಶುಕ್ರವಾರ ಬೆಳಗ್ಗೆ 9:20ಕ್ಕೆ ಬೆಂಗಳೂರಿನ ಯಲಹಂಕ ತಲುಪಲಿದೆ.
ನಿಲುಗಡೆಯ ನಿಲ್ದಾಣಗಳು ಯಾವುವು?
ಮಾರ್ಗ ಮಧ್ಯೆದಲ್ಲಿ ಈ ರೈಲು ಅಣ್ಣಿಗೇರಿ, ಗದಗ, ಭಾನಪುರ, ಕೊಪ್ಪಳ, ಗಣಿಗೇರಾ, ಮುನಿರಾಬಾದ್, ಹೊಸಪೇಟೆ, ತೋರಣಗಲ್ಲು, ಬಾಲ್ಲಾರಿ, ಗುಂತಕಲ್, ಅನಂತಪುರ, ಧರ್ಮಾವರಂ, ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ, ಹಿಂದುಪುರ ಮತ್ತು ಗೌರಿಬಿದನೂರು ಮೂಲಕ ಗಮ್ಯ ನಿಲ್ದಾಣ ಯಲಹಂಕಕ್ಕೆ ಬಂದು ಸೇರಲಿದೆ.
ಈ ವಿಶೇಷ ರೈಲು ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ಜನರಲ್ ಬೋಗಿ ಸೇರಿದಂತೆ ಒಟ್ಟು 14 ಕೋಚ್‌ಗಳನ್ನು ಹೊಂದಿರಲಿದೆ. ರೈಲ್ವೆ ಪ್ರಯಾಣಿಕರು ವೇಳಾಪಟ್ಟಿ ಹಾಗೂ ಇತರೆ ವಿವರಗಳನ್ನು ತಿಳಿದುಕೊಳ್ಳಲು ಅಧಿಕೃತ ವೆಬ್‌ಸೈಟ್ https://www.enquiry.indianrail.gov.in ಗೆ ಭೇಟಿ ನೀಡಬೇಕು. NTES ಅಪ್ಲಿಕೇಶನ್, ಅಥವಾ 139 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುದ್ದಿ ಪ್ರಮುಖ ಮುಖ್ಯಾಂಶಗಳು
* ಹುಬ್ಬಳ್ಳಿ-ಯಲಹಂಕ ವಿಶೇಷ ರೈಲು ಸಂಖ್ಯೆ: 07319
* ಹುಬ್ಬಳ್ಳಿ ಬಿಡುವ ಸಮಯ: ನವೆಂಬರ್ 13ಕ್ಕೆ ರಾತ್ರಿ 8.00 ಗಂಟೆ
* ಯಲಹಂಕ ತಲುಪುವ ಸಮಯ: ನವೆಂಬರ್ 14ಕ್ಕೆ ಬೆಳಗ್ಗೆ 9.20ಗಂಟೆ
* ನಿಲುಗಡೆ ಒಟ್ಟು ನಿಲ್ದಾಣಗಳ ಸಂಖ್ಯೆ : 15
* ಕೋಚ್‌ಗಳ ಸಂಖ್ಯೆ: 14












Click it and Unblock the Notifications