• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರ ಗಮನಕ್ಕೆ

|

ಬೆಂಗಳೂರು, ಮೇ 28 : ನೈಋತ್ಯ ರೈಲ್ವೆಯ ಬೆಂಗಳೂರು-ಮೈಸೂರು ಮಾರ್ಗದ ಕೆಲವು ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ಸ್ಥಗಿತಗೊಳಿಸಿದೆ. ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ರೈಲು ಸೇವೆ ಆರಂಭವಾದ ಬಳಿಕ ಇದು ಜಾರಿಗೆ ಬರಲಿದೆ.

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಈ ಕುರಿತು ಆದೇಶ ಹೊರಡಿಸಿದೆ. ಶ್ರೀರಂಗಪಟ್ಟಣ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ಎಲ್ಲಾ ರೈಲುಗಳು ನಿಲ್ಲುವುದಿಲ್ಲ. ಕೆಲವು ರೈಲುಗಳಿಗೆ ಮಾತ್ರ ನಿಲುಗಡೆ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

3 ಸಾವಿರ ಶ್ರಮಿಕ್ ರೈಲು ಸಂಚಾರ; ತವರಿಗೆ ಸೇರಿದ್ದು 40 ಲಕ್ಷ ಜನರು 3 ಸಾವಿರ ಶ್ರಮಿಕ್ ರೈಲು ಸಂಚಾರ; ತವರಿಗೆ ಸೇರಿದ್ದು 40 ಲಕ್ಷ ಜನರು

ಹೊಸ ಆದೇಶದ ಪ್ರಕಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ರೈಲು ನಿಲ್ದಾಣದಲ್ಲಿ 4 ರೈಲುಗಳು ಮಾತ್ರ ನಿಲುಗಡೆಗೊಳ್ಳಲಿವೆ. 6 ರೈಲುಗಳ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ. ಲಾಕ್ ಡೌನ್ ಪರಿಣಾಮ ಸದ್ಯ ರೈಲು ಸಂಚಾರವಿಲ್ಲ. ಸಂಚಾರ ಆರಂಭವಾದ ಬಳಿಕ ಹೊಸ ಆದೇಶ ಜಾರಿಗೆ ಬರಲಿದೆ.

ಕರ್ನಾಟಕ; ಅಂತರ ಜಿಲ್ಲಾ ರೈಲು, ವೇಳಾಪಟ್ಟಿ ಕರ್ನಾಟಕ; ಅಂತರ ಜಿಲ್ಲಾ ರೈಲು, ವೇಳಾಪಟ್ಟಿ

ಯಾವ-ಯಾವ ನಿಲ್ದಾಣ: ಯಡಿಯೂರು, ಪಾಂಡವಪುರ, ಮದ್ದೂರು, ಚಾಮರಾಜಪುರಂ, ಕೊಡಕೋಳ, ನಾಗೇನಹಳ್ಳಿ ನಿಲ್ದಾಣಗಳಲ್ಲಿ ಎಲ್ಲಾ ರೈಲುಗಳು ಇನ್ನು ಮುಂದೆ ನಿಲುಗಡೆಗೊಳ್ಳುವುದಿಲ್ಲ.

ರೈಲು ಸಂಚಾರ; ಟಿಕೆಟ್‌ ಬುಕ್ ಮಾಡಲು ಕೌಂಟರ್ ಆರಂಭ ರೈಲು ಸಂಚಾರ; ಟಿಕೆಟ್‌ ಬುಕ್ ಮಾಡಲು ಕೌಂಟರ್ ಆರಂಭ

ಹೊಸ ಆದೇಶದ ಪ್ರಕಾರ ಮಂಡ್ಯದ ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ಮೂರು ಮೆಮು ರೈಲು ಸೇರಿದಂತೆ ಬೆಂಗಳೂರು-ಚಾಮರಾಜನರ ರೈಲು ಮಾತ್ರ ನಿಲುಗಡೆಗೊಳ್ಳಲಿದೆ.

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರ ವೇದಿಕೆ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದೆ. ಹಲವಾರು ಜನರು ಪಾಸು ಪಡೆದಿರುತ್ತಾರೆ. ಪ್ರತಿದಿನ ಸಂಚಾರ ನಡೆಸುವವರು ಇರುತ್ತಾರೆ. ರೈಲು ನಿಲ್ಲುವುದನ್ನು ರದ್ದುಪಡಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಹೇಳಿದೆ.

English summary
Bengaluru division of South Western Railway decided to cancel halts of select trains at several stations. The notification will come into effect after rail service starts lockdown ends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X