ದೇವೇಗೌಡರ ಹೇಳಿಕೆಗೆ ಸುರೇಶ್ ಕುಮಾರ್ ಕೊಟ್ಟ ಪ್ರತಿಕ್ರಿಯೆ

ಬೆಂಗಳೂರು, ಏಪ್ರಿಲ್ 21 : 'ನನ್ನ ಜೊತೆಯಲ್ಲಿದ್ದುಕೊಂಡು ರಾಜಕೀಯವಾಗಿ ನನ್ನ ಘನತೆಗೆ ಕುಂದು ತರಲು ಯತ್ನಿಸಿದ ಪುಣ್ಯಾತ್ಮರು ಈಗ ಸ್ವರ್ಗದಲ್ಲಿದ್ದಾರೆ' ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ.

ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ವಿಜಯಪುರದಲ್ಲಿ ಮಾತನಾಡಿದ್ದ ದೇವೇಗೌಡರು, 'ನನ್ನನ್ನು ವಿರೋಧಿಸಿದವರೆಲ್ಲ ಸ್ವರ್ಗದಲ್ಲಿದ್ದಾರೆ. ನನ್ನೊಂದಿಗೆ ದೈವಶಕ್ತಿ ಇರುವುದರಿಂದ ನಾನಿನ್ನೂ ಬದುಕಿದ್ದೇನೆ' ಎಂದು ಹೇಳಿದ್ದರು.

Suresh Kumar tweet about HD Deve Gowda statement

ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಸೋ ಸಿಂಪಲ್, ಯಾರು ಸ್ವರ್ಗಕ್ಕೆ ತಲುಪಲು ಇಚ್ಛಿಸುತ್ತಾರೋ ಅವರು ದೇವೇಗೌಡರನ್ನು ವಿರೋಧಿಸಿದರೆ ಸಾಕು' ಎಂದು ಟ್ವೀಟ್ ಮಾಡಿದ್ದಾರೆ.‌

ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಎಚ್.ಡಿ.ದೇವೇಗೌಡರು ,'ಮೋದಿ ತನ್ನ ಸ್ಥಾನದ ಗೌರವ ಬಿಟ್ಟು ಮಾತನಾಡುತ್ತಾರೆ. ಸುಮ್ಮನೆ ಬಂಬಡಾ ಹೊಡೆಯೋದರಲ್ಲಿ ಅರ್ಥವಿಲ್ಲ. ನನ್ನ ಅವಧಿಯಲ್ಲಿ ಇದಕ್ಕಿಂತಲೂ ಸುಭ್ರ ಆಡಳಿತ ನೀಡಿದ್ದೆ. ಇತಿಹಾಸ ತಿರುಚಲು ಆಗಲ್ಲ' ಎಂದು ಹೇಳಿದ್ದರು.

'ಜೆಡಿಎಸ್‌ ಎಂದೂ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಲ್ಲ, ಇದೊಂದು ಕುತಂತ್ರ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬರಬಾರದೆಂಬ ಕಾರಣಕ್ಕೆ ಹಣೆದ ಕುತಂತ್ರ' ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+