ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ಕೋರ್ಟ್ ಕಾವೇರಿ ತೀರ್ಪಿಗೆ ಯಾರು, ಏನೆಂದರು?

|
Google Oneindia Kannada News

ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕದ ಪರ ವಕೀಲರೂ ಹೇಳುವಂತೆ ಈ ತೀರ್ಪಿನಿಂದ ಕರ್ನಾಟಕ ಒಂದಿಷ್ಟು ನಿರಾಳ ಆಗಬಹುದಾಗಿದೆ. ಹದಿನಾಲ್ಕು ಟಿಎಂಸಿ ಅಡಿ ನೀರು ರಾಜ್ಯದ ಪಾಲಿಗೆ ಉಳಿತಾಯ ಆಗಲಿದ್ದು, ಬೆಂಗಳೂರಿಗೆ ಹೆಚ್ಚುವರಿಯಾಗಿ ನಾಲ್ಕು ಟಿಎಂಸಿ ಅಡಿ ನೀರು ದೊರೆಯಲಿದೆ.

ಈ ತೀರ್ಪಿನ ಬಗ್ಗೆ ರಾಜ್ಯದಲ್ಲಿ ಸಂತೋಷ ವ್ಯಕ್ತವಾಗುತ್ತಿದೆ. ತನ್ನ ಪಾಲಿನ ನೀರಿನ ಪ್ರಮಾಣ ಕಡಿಮೆ ಆಗಿರುವುದಕ್ಕೆ ತಮಿಳುನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದು, ತೀರ್ಪಿನ ಬಗ್ಗೆ ತಮ್ಮ ಅಸಮಾಧಾನ ತೋರಿಸಿಕೊಳ್ಳುತ್ತಿದ್ದಾರೆ. ಇನ್ನು ಅಲ್ಲಿನ ರಾಜಕೀಯ ಮುಖಂಡರು ಪರಸ್ಪರ ಆರೋಪದಲ್ಲಿ ತೊಡಗಿದ್ದಾರೆ.

ಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿಕಾವೇರಿ ಅಂತಿಮ ತೀರ್ಪು: ತಮಿಳನಾಡಿಗೆ ಕಹಿ, ಕರ್ನಾಟಕಕ್ಕೆ ಸಿಹಿ

ಇನ್ನು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕರ್ನಾಟಕದಲ್ಲಿ ಸಂತಸ ವ್ಯಕ್ತವಾಗಿದ್ದು, ಈ ಬಗ್ಗೆ ರಾಜಕಾರಣಿಗಳು, ಮುಖಂಡರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಯಾರು- ಏನು ಹೇಳಿದರು ಎಂಬುದನ್ನು ತಿಳಿಯಲು ಇಲ್ಲಿ ಅಭಿಪ್ರಾಯಗಳನ್ನು ಹಾಕಲಾಗಿದೆ. ಅವುಗಳೇನು ಎಂದು ತಿಳಿಯಲು ಮುಂದೆ ಓದಿ.

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಬೆಂಗಳೂರು ಬೆಳೆಯುತ್ತಿರುವ ನಗರ. ಆದ್ದರಿಂದ ಹೆಚ್ಚಿನ ನೀರಿನ ಅಗತ್ಯವಿದೆ. ತೀರ್ಪನ್ನು ಪೂರ್ತಿಯಾಗಿ ಓದದೆ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಬೆಂಗಳೂರು ನಗರದ ನೀರಿನ ಅಗತ್ಯವನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ. ತೀರ್ಪು ಸಮಾಧಾನಕರವಾಗಿದೆ.

ಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧ

ಬ್ರಿಜೇಶ್ ಕಾಳಪ್ಪ, ಕರ್ನಾಟಕ ಪರ ವಕೀಲ, ಕಾಂಗ್ರೆಸ್ ಮುಖಂಡ

ಬ್ರಿಜೇಶ್ ಕಾಳಪ್ಪ, ಕರ್ನಾಟಕ ಪರ ವಕೀಲ, ಕಾಂಗ್ರೆಸ್ ಮುಖಂಡ

ಕರ್ನಾಟಕದ ಪಾಲಿನ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ತಮಿಳುನಾಡಿನ ಪ್ರಮಾಣ ಇಳಿಸಲಾಗಿದೆ. ಬೆಂಗಳೂರಿಗೆ ಹೆಚ್ಚುವರಿ ನೀರು ಸಿಗಲಿದೆ. ಇದರಿಂದ ಬೆಂಗಳೂರಿನ ಜನರಿಗೆ ದೊಡ್ಡ ಮಟ್ಟದ ನಿರಾಳ.

ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಬಿಗ್ ರಿಲೀಫ್ : ಬ್ರಿಜೇಶ್ ಕಾಳಪ್ಪಸುಪ್ರೀಂ ತೀರ್ಪು ಕರ್ನಾಟಕಕ್ಕೆ ಬಿಗ್ ರಿಲೀಫ್ : ಬ್ರಿಜೇಶ್ ಕಾಳಪ್ಪ

ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ

ಜಗದೀಶ್ ಶೆಟ್ಟರ್, ವಿಪಕ್ಷ ನಾಯಕ

ಮೇಲ್ನೋಟಕ್ಕೆ ನಾವು ಈ ತೀರ್ಪನ್ನು ಸ್ವಾಗತಿಸುತ್ತೇವೆ. ಆದರೆ ತೀರ್ಪಿನ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಿದ್ದರಾಮಯ್ಯ, ಮುಖ್ಯಮಂತ್ರಿ

ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದೆ. ಇದರಿಂದಾಗಿ ರಾಜ್ಯಕ್ಕೆ ಅನುಕೂಲವಾಗಿದೆ. ವಿವರಗಳನ್ನು ನೋಡಿ ಮುಂದಿನ ಪ್ರತಿಕ್ರಿಯೆ ನೀಡುತ್ತೇನೆ.

ಕಾವೇರಿ ತೀರ್ಪು : ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆಕಾವೇರಿ ತೀರ್ಪು : ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಸಮ್ಮತವಾಗಿದೆ. ಎರಡು ರಾಜ್ಯಗಳ ಮಧ್ಯದ ರಾಜಕೀಯ ವ್ಯಾಜ್ಯ ಹಾಗೂ ನೀರು ನಿರ್ವಹಣೆ ಮಾಡಬೇಕು ಎಂಬ ಒತ್ತಡಕ್ಕೆ ಶಾಶ್ವತ ಪರಿಹಾರ ಮಾರ್ಗ ಇದಾಗಿದೆ. ಬೆಂಗಳೂರಿನಲ್ಲಿ ನೀರು ಉಳಿಸುವ ಪದ್ಧತಿ ಮುಂದುವರಿಯಲಿ. ನಾವು ಆ ದಿಕ್ಕಿನಲ್ಲಿ ಸಾಗೋಣ.

English summary
Supreme court pronounced Cauvery verdict on Friday. It favors Karnataka to some extent. Here is the reaction of political leaders reaction to verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X