ರಾಜ್ಯದ ವಿವಿಧೆಡೆ ಸುರಿದ ಬೇಸಿಗೆ ಮಳೆ, ಇನ್ನೂ ಎರಡು ದಿನ ಮಳೆ ಸಂಭವ
ಬೆಂಗಳೂರು, ಏ.25: ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಬುಧವಾರ ಮಳೆಯಾಗಿದೆ.
ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ 4 ಸೆಂ.ಮೀ, ಉತ್ತರ ಕನ್ನಡದ ಮಂಚಿಕೇರಿ, ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ, ಜಯಪುರ, ಕಮ್ಮರಡಿಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಉತ್ತರ ಕನ್ನಡದ ಮುಂಡಗೋಡು, ಕೊಡಗಿನ ಪೊನ್ನಂಪೇಟೆ, ಕುಶಾಲನಗರ, ಶಿವಮೊಗ್ಗದ ಲಿಂಗನ ಮಕ್ಕಿ, ಆಗುಂಬೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 42.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಫ್ಯಾನಿ ಚಂಡ ಮಾರುತ ಈ ವಾರದ ಅಂತ್ಯಕ್ಕೆ ಅಪ್ಪಳಿಸಲಿದ್ದು ಅದರ ಪ್ರಭಾವ ಕರ್ನಾಟಕದ ಮೇಲೂ ಉಂಟಾಗಲಿದೆ. ಶ್ರೀಲಂಕಾದಿಂದ ಭಾನುವಾರದಷ್ಟರೊಳಗೆ ಚಂಡ ಮಾರುತ ತಮಿಳುನಾಡನ್ನು ಪ್ರವೇಶಿಸಲಿದೆ. ಬಳಿಕ ಆಂಧ್ರಪ್ರದೇಶ, ಕೇರಳ, ಕರ್ನಾಟಕವನ್ನೂ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications