Darshan-Sumalatha: ಕೊನೆ ಉಸಿರು ಇರುವವರೆಗೂ ಅವನು ನನ್ನ ಮಗ: ದರ್ಶನ್ ಅನ್ಫಾಲೋ ವಿಚಾರ ಸುಮಲತಾ ಸ್ಪಷ್ಟನೆ
ಬೆಂಗಳೂರು, ಮಾರ್ಚ್ 12: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇನ್ಸ್ಟಾದಲ್ಲಿ ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಅವರನ್ನು ಅನ್ಫಾಲೋ ಮಾಡಿರುವುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರೇ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್ ಶೇರ್ ಮಾಡಿದ ಬೆನ್ನಲ್ಲೇ ಮಾಜಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪೋಸ್ಟ್ಗಳಿಗೂ- ದರ್ಶನ್ಗೂ ಯಾವುದೇ ಸಂಬಂಧವಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡೋದು ಅವರ ವೈಯಕ್ತಿಕ ವಿಚಾರ. ತಾಯಿ- ಮಗನ ಸಂಬಂಧ ನಮ್ಮದು. ಇದರಲ್ಲಿ ಅನಗತ್ಯ ವಿವಾದ ಬೇಡ ಅಂತಾ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ನನ್ನ ಹಿಂದಿನ ಒಂದು ಪೋಸ್ಟ್ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ. ನನ್ನ ಪೋಸ್ಟ್ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ. ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ.

ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು. ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ, ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ ಎಂದು ಸುಮಲತಾ ಅವರು ತಿಳಿಸಿದ್ದಾರೆ.
ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ ಎಂದು ಸುಮಲತಾ ಅವರು ಸ್ಪಷ್ಟನೆ ನೀಡಿದ್ದಾರೆ.
ನಾನು ಸೋಶಿಯಲ್ ಮೀಡಿಯಾಗಳಿಗೆ ಅಷ್ಟು ಬೆಲೆ ಕೊಡಲ್ಲ. ನಾನು ಎಲ್ಲಾದರಲ್ಲೂ ದರ್ಶನ್ ನ ಫಾಲೋ ಮಾಡಿದ್ದೇನೆ. ನನ್ನನ್ನ ಸ್ಪೆಷನ್ ಆಗಿ ಅನ್‌ಫಾಲೋ ಮಾಡಿದ್ದಾರೆ ಅಂತ ಅನಿಸುತ್ತಿಲ್ಲ. ದರ್ಶನ್ ಅವರ ಮಗನನ್ನು ಅನ್ ಫಾಲೋ ಮಾಡಿದ್ದಾರೆ. ಇದು ಸಿಲಿ ವಿಚಾರ. ದರ್ಶನ್ ನನ್ನ ಮಗ, ಕೊನೆ ಉಸಿರು ಇರುವವರೆಗೂ ದರ್ಶನ್ ನನ್ನ ಮಗ. ದರ್ಶನ್ ಕೇವಲ ಮಂಡ್ಯ ಚುನಾವಣೆ ಸಂದರ್ಭದಿಂದ ಮಾತ್ರ ಪರಿಚಯವಲ್ಲ. ನಮ್ಮ ಸಂಬಂಧ 25 ವರ್ಷಕ್ಕಿಂತ ಹೆಚ್ಚು. ಮೆಜೆಸ್ಟಿಕ್ ಚಿತ್ರದ ಸಂದರ್ಭದಿಂದ ನಮ್ಮ ಜರ್ನಿ ಶುರುವಾಗಿದೆ. ನಮ್ಮ ಸಂಬಂಧವನ್ನ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆ ಫೋಸ್ಟ್ ಗೂ ದರ್ಶನ್ ಅವರಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ನಾನು ಹಾಕಿರುವ ಫೋಸ್ಟ್ ಯಾರು ಗಮನಿಸಲ್ಲ ಅಂದು ಕೊಟ್ಟಿದೆ. ಮೆಜಸ್ಟಿಕ್ ಸಿನಿಮಾದಿಂದಲೂ ನಮ್ಮ ಸಂಬಂಧವಿದೆ. ಯಾರೋ ಇಲ್ಲಿ ವಿವಾದ ಕ್ರಿಯೇಟ್ ಮಾಡಿದ್ದಾರೆ. ನನ್ನಲ್ಲಿ ಯಾವುದೇ ನೆಗೆಟಿವ್ ವಿಚಾರ ಇಲ್ಲ. ತಾಯಿ ಮಗ ಸಂಬಂಧವನ್ನ ಯಾರು ಹಾಳು ಮಾಡಲು ಆಗಲ್ಲ. ದರ್ಶನ್ ಕರೆಯದೆ ನಾವು ಯಾವ ಕಾರ್ಯಕ್ರಮವನ್ನ ಮಾಡಿಲ್ಲ, ಮಾಡಲ್ಲ ಎಂದು ಸುಮಲತಾ ಅವರು ದರ್ಶನ್ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications