• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿ.9ರೊಳಗೆ ಕೋರ್ಟಿನ ಮುಂದೆ ಇಶಿಕಾ ಹಾಜರು

By Mahesh
|

ಉಡುಪಿ,ಡಿ.7: ಇಲ್ಲಿನ ಕುಂಜಿಬೆಟ್ಟುವಿನ ಶಾರದಾ ವಸತಿ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿನಿ ಏಳಿಂಜೆ ಮೂಲದ ಇಶಿಕಾ ಶೆಟ್ಟಿ(13) ಕೆಲವು ದಿನಗಳ ಹಿಂದೆ ಮುಂಬೈಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಉಡುಪಿ ಪೊಲೀಸರು ನಗರಕ್ಕೆ ಕರೆತಂದಿದ್ದು ರಿಮಾಂಡ್ ಹೋಂ ವಶಕ್ಕೆ ಒಪ್ಪಿಸಿದ್ದಾರೆ. ಆಕೆಯನ್ನು ಡಿ.9ರೊಳಗೆ ಕೋರ್ಟಿನ ಮುಂದೆ ಹಾಜರುಪಡಿಸುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಸೀರಿಯಲ್ ನಟ ಫೈಝಲ್ ಖಾನ್ ಎಂಬಾತನನ್ನು ಇಷ್ಟಪಟ್ಟಿದ್ದು, ಆತನನ್ನು ಭೇಟಿಯಾಗಲು ತೆರಳುತ್ತಿದ್ದೇನೆ ಎಂದು ಇಶಿಕಾ ಶೆಟ್ಟಿ ಲೆಟರ್ ಬರೆದಿಟ್ಟು ತೆರಳಿದ್ದಳು. ಆನಂತರ ಪೊಲೀಸರು ಮುಂಬೈ ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದು, ಇಶಿಕಾಳನ್ನು ಮುಂಬೈಯಲ್ಲಿ ಪತ್ತೆಹಚ್ಚಿದ್ದರು.

ಮುಂಬೈನಲ್ಲಿ ಇಶಿಕಾ ಪತ್ತೆಯಾಗಿದ್ದಾಳೆ ಎಂದು ಮುಂಬೈ ಪೊಲೀಸರು ಉಡುಪಿ ಪೊಲೀಸರಿಗೆ ಮತ್ತು ಇಶಿಕಾ ಪೋಷಕರಿಗೆ ಶುಕ್ರವಾರ ರಾತ್ರಿ ಮಾಹಿತಿ ನೀಡಿದ್ದರು. ಆಕೆಯನ್ನು ಕರೆ ತರಲು ಇಶಿಕಾ ತಾಯಿ ಕೂಡಾ ತೆರಳಿದ್ದರು.[ನಾಪತ್ತೆಯಾಗಿದ್ದ ಇಶಿಕಾ ಮುಂಬೈನಲ್ಲಿ ಪತ್ತೆ]

ಅದರೆ, ಇಶಿಕಾ ಶೆಟ್ಟಿ ಮನೆಮಂದಿಯ ಜೊತೆ ತೆರಳಲು ಹಿಂದೇಟು ಹಾಕಿದ ಕಾರಣ ಆಕೆಯನ್ನು ರಿಮಾಂಡ್ ಹೋಂ ಸೇರಿಸಲಾಗಿದೆ. ಆಕೆ ಮುಂಬೈಗೆ ತೆರಳಿದ್ದು ಹೇಗೆ, ಆಕೆ ಎಲ್ಲಿದ್ದಳು ಎಂಬ ಬಗ್ಗೆ ಪೊಲೀಸರು ದಿನಕ್ಕೊಂದು ಕಥೆ ಕಟ್ಟುತ್ತಿರುವ ಕಾರಣ ಪ್ರಕರಣ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

ಘಟನೆ ಹಿನ್ನೆಲೆ: ಉಡುಪಿಯ ಕು೦ಜಿಬೆಟ್ಟುವಿನ ಶಾರದಾ ಇ೦ಗ್ಲೀಷ್ ಮೀಡಿಯ೦ ವಸತಿ ನಿಲಯ ಶಾಲೆಯಿ೦ದ 8ನೇ ವಿದ್ಯಾರ್ಥಿನಿ ಇಶಿಕಾ ಎಸ್.ಶೆಟ್ಟಿ ನ.15ರಂದು ನಾಪತ್ತೆಯಾಗಿದ್ದಳು. [ನಟ ಫೈಜಲ್ ನನಗಿಷ್ಟ : ಇಶಿಕಾ ಪತ್ರ]

ಆಕೆಯ ಪೋಷಕರು ಈ ಬಗ್ಗೆ ತಮಗೆ ಶಾಲೆಯ ಆಡಳಿತ ಮಂಡಳಿ ಮಾಹಿತಿ ನೀಡಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಇಶಿಕಾ ತಾಯಿ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ರಿಟ್ ಪಿಟೀಷನ್ ಹಾಕಿದ್ದರು. ಇಶಿಕಾ ಪತ್ತೆ ಹಚ್ಚಿ ಕೋರ್ಟಿಗೆ ಹಾಜರುಪಡಿಸುವಂತೆ ಪೊಲೀಸರಿಗೆ ಕೋರ್ಟ್ ಆದೇಶಿಸಿತ್ತು.

"ನನಗೆ ಹೆತ್ತವರ ಪ್ರೀತಿ ಸರಿಯಾಗಿ ಸಿಗುತ್ತಿಲ್ಲ. ನಾನು ಏಕಾಂಗಿಯಾಗಿರುವೆ. ಮಹಾರಾಣಾ ಪ್ರತಾಪ್‌ ಎನ್ನುವ ಹಿಂದಿ ಧಾರಾವಾಹಿಯ ನಟ ಫೈಜಲ್‌ ಖಾನ್‌ನನ್ನು ತುಂಬಾ ಮೆಚ್ಚಿಕೊಂಡಿದ್ದೇನೆ" ಎಂದು ಪತ್ರ ಬರೆದಿಟ್ಟ ಇಶಿಕಾ ಉಡುಪಿಯಿಂದ ಮುಂಬೈಗೆ ಹಾರಿದ್ದಳು.

ಮುಂಬೈನ ಶಿವಾಜಿ ಟರ್ಮಿನಸ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ ಇಶಿಕಾಳನ್ನು ಕರೆದು ವಿಚಾರಿಸಿದ ರೈಲ್ವೆ ಪೊಲೀಸರು ನಂತರ ಈ ಬಗ್ಗೆ ಸಮೀಪದ ಠಾಣೆಗೆ ವರದಿ ಮಾಡಿದ್ದಾರೆ. ಅಲ್ಲಿಂದ ಮಾಹಿತಿ ಉಡುಪಿ ಪೊಲೀಸರಿಗೆ ತಲುಪಿದೆ. ಉಡುಪಿಗೆ ಬಂದ ಇಶಿಕಾ ತನ್ನ ಪೋಷಕರನ್ನು ನಿರ್ಲಕ್ಷಿಸಿ ರಿಮಾಂಡ್ ಹೋಂನಲ್ಲೇ ನೆಲೆಸಿದ್ದಾರೆ. ಪ್ರಕರಣ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬೀಳಬೇಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eshika Shetty, who went missing for couple of weeks, found in Mumbai been brought to Udupi will be remain in remand home till Monday. Udupi police likely to produce her before High Court on Dec 9 following the completion of the formalities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more