ಓಮಿಕ್ರಾನ್ ತಡೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಡಾ.ಸುಧಾಕರ್
ಬೆಂಗಳೂರು ಡಿಸೆಂಬರ್ 26: ರಾಜ್ಯದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್‌ನ ಆತಂಕ ಹೆಚ್ಚುತ್ತಿದೆ. ಹೀಗಾಗಿ ಜನ ಸಂದಣಿಯನ್ನು ತಡೆಗಟ್ಟಲು ರಾತ್ರಿ ಕರ್ಫ್ಯೂ ಜೊತೆಗೆ, ರಾಜ್ಯ ಸರ್ಕಾರವು ಹೊಸ ವರ್ಷಕ್ಕೆ ಸಂಬಂಧಿಸಿದ ಕೂಟಗಳಿಗೆ ಕೆಲವು ನಿರ್ಬಂಧಗಳನ್ನು ಘೋಷಿಸಿದೆ. ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, "ಡಿಸೆಂಬರ್ 28 ರಿಂದ ಹತ್ತು ದಿನಗಳ ಕಾಲ, ರಾತ್ರಿ ಕರ್ಫ್ಯೂಗೆ ಆದೇಶಿಸಲಾಗಿದೆ. ನಾವು ರಾತ್ರಿ 10 ರಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ CrPC ಸೆಕ್ಷನ್ 144 ಅನ್ನು ಆಹ್ವಾನಿಸುತ್ತೇವೆ" ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರು, ಅಧಿಕಾರಿಗಳು ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷದ ಕಾರ್ಯಕ್ರಮಗಳು ಮತ್ತು ಸಭೆಗಳಿಗೆ ಕಡಿವಾಣ ಹಾಕಲಾಗಿದೆ. ಬೇರೆ ರಾಜ್ಯಗಳ ಸ್ಥತಿಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ಪ್ರಧಾನಿ ಮೋದಿ ಪ್ರಕಟಸಿದ ವಿಚಾರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
"ಬಾಹ್ಯ ಆವರಣದಲ್ಲಿ ಯಾವುದೇ ಸಮಾರಂಭಗಳು, ಪಾರ್ಟಿಗಳು ಇರುವುದಿಲ್ಲ. ವಿಶೇಷವಾಗಿ ಡಿಜೆಗಳು ಮತ್ತು ದೊಡ್ಡ ಸಭೆಗಳನ್ನು ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ" ಎಂದು ಅವರು ಹೇಳಿದರು. ತಿನಿಸುಗಳ ಅಂಗಡಿ, ಹೋಟೆಲ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ಸ್ಥಳಗಳಲ್ಲಿ ಆವರಣದ ಆಸನ ಸಾಮರ್ಥ್ಯ ಶೇಕಡಾ 50 ರಷ್ಟು ಇರಬಹುದೆಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಮೊದಲನೇ ಡೋಸ್ ಶೇ.97 ರಷ್ಟು ಪಡೆದುಕೊಂಡಿದ್ದಾರೆ ಮತ್ತು ಶೇ.75ರಷ್ಟು ಜನ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಕರ್ನಾಟಕ ಎರಡನೇ ಲಸಿಕೆ ನೀಡಿರುವ ಸಾಧನೆಯಲ್ಲಿದೆ. ನಾಲ್ಕು ಸಾವಿರ ಐಸಿಯು ಬೆಡ್ ಮಾಡಿದ್ದೇವೆ, ಇನ್ನೂ ಬೆಡ್ ಗಳನ್ನು ಮೇಲ್ದರ್ಜಗೆ ಏರಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮೂರನೇ ಡೋಸ್ ಪ್ರವೆಂಟಿವ್ ಡೋಸ್ ನ್ನು ಜನವರಿ ಹತ್ತರಿಂದ ಅರವತ್ತು ಮೇಲ್ಪಟ್ಟವರಿಗೆ ನೀಡಲು ಆದೇಶಿಸಿದ್ದಾರೆ. ಅದನ್ನು ನಮ್ಮ ರಾಜ್ಯದಲ್ಲಿ ಚಾಲನೆಯಾಗುತ್ತದೆ. 43 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.
7,500 ಬೆಡ್‌ಗಳು ICU ಬೆಡ್‌ಗಳಾಗಿ ಮೇಲ್ದರ್ಜೆ ಮಾಡಲಾಗುವುದು. ಜನವರಿ 10ರಿಂದ ಬೂಸ್ಟರ್ ಡೋಸ್ ನೀಡುತ್ತೇವೆ. ರಾಜ್ಯಾದ್ಯಂತ ಬೂಸ್ಟರ್ ಡೋಸ್ ನೀಡಲಾಗುವುದು. ಆಯಾ ಕ್ಷೇತ್ರಗಳಲ್ಲಿ ಸಚಿವರು ಚಾಲನೆ ನೀಡಲಿದ್ದಾರೆ. ಸಿಎಂ, ಆಯಾ ಕ್ಷೇತ್ರಗಳಲ್ಲಿ ಸಚಿವರು ಚಾಲನೆ ನೀಡುತ್ತಾರೆ ಎಂದು ತಿಳಿಸಿದ ಸುಧಾಕರ್, ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರದಿಂದ ಗೈಡ್‌ಲೈನ್ಸ್ ಬಂದ ಬಳಿಕ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಸಭೆಯಲ್ಲಿ ಕಂದಾಯ ಸಚಿವ R.ಅಶೋಕ್, ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.
ಭಾರತದಲ್ಲಿ ಇದುವರೆಗೆ 422 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ, ಹೆಚ್ಚಾಗಿ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕಂಡುಬಂದಿದೆ. ನಿನ್ನೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಡರಾತ್ರಿ ರಾಷ್ಟ್ರದ ಭಾಷಣದಲ್ಲಿ ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಗಳನ್ನು ಘೋಷಿಸಿದರು. ಜೊತೆಗೆ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜನವರಿ 10 ರಿಂದ ಬೂಸ್ಟರ್ ಶಾಟ್‌ಗಳನ್ನು ಘೋಷಿಸಿದರು.












Click it and Unblock the Notifications