Karnataka Dam Water Level Today: ಉತ್ತಮ ಮುಂಗಾರು, ವಿವಿಧ ಜಲಾಶಯಗಳ ಒಳಹರಿವು ಭಾರೀ ಹೆಚ್ಚಳ
ಬೆಂಗಳೂರು, ಜೂನ್ 09: ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆ ಹಾಗೂ ಮುಂಗಾರು ಮಳೆ ಎರಡು ಉತ್ತಮವಾಗಿವೆ. ಈ ವರ್ಷ ಅಧಿಕ ಮಳೆ ಮುನ್ಸೂಚನೆ ನೀಡಿದ್ದು, ಅದಕ್ಕೆ ಪೂರಕವಾಗಿ ಕಳೆದೊಂದು ತಿಂಗಳಲ್ಲಿ ಆಗಾಗ ಸಾಧಾರಣ, ಕೆಲವೆಡೆ ಭಾರೀ ಮಳೆ ಆಗುತ್ತಿದೆ. ರಾಜ್ಯದ ಅಣೆಕಟ್ಟುಗಳ ಸುತ್ತಮುತ್ತಲಿನ ಜಿಲ್ಲೆಗಳು, ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದೆ. ಪರಿಣಾಮ ಡ್ಯಾಂಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.
ಕೊಡಗು, ಮಡಿಕೇರಿ, ಬಾಗಮಂಡಲ, ಸೋಮವಾರಪೇಟೆಯಲ್ಲಿ ಮಳೆ ಮುಂದುವರಿದಿದೆ. ಇದರಿಂದಾಗಿ ಕಾವೇರಿ ಹಾಗೂ ಉಪನದಿಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ. ಬಾಗಮಂಡಲದಲ್ಲಿ ಇಂದು ಬೆಳಗ್ಗೆವರೆಗೆ 39 ಮಿಲಿ ಮೀಟರ್ ಮಳೆ ದಾಖಲಾಗಿದೆ. ಡ್ಯಾಂಗಳಲ್ಲಿ ಒಳಹರಿವು ಹೆಚ್ಚಾಗುತ್ತಿದ್ದಂತೆ ನೀರಾವರಿ, ನದಿ, ಕಾಲವೆಗಳಿಗೂ ನೀರು ಹರಿಸಲಾಗುತ್ತಿದೆ. ನಿತ್ಯ ನೂರಾರು ಕ್ಯೂಸೆಕ್ ನೀರು ಹೊರಬೀಡಲಾಗುತ್ತಿದೆ. ಜೂನ್ 09 ರಂದು ಕರ್ನಾಟಕದ ಪ್ರಮುಖ ಅಣೆಕಟ್ಟುಗಳ ಒಳಹರಿವು, ಒಟ್ಟು ನೀರು ಸಂಗ್ರಹ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಉತ್ತಮ ಮಳೆ: ಅಣೆಕಟ್ಟುಗಳ ಇಂದಿನ ನೀರಿನ ಮಟ್ಟ
* KRS ಡ್ಯಾಂ ನೀರಿನ ಮಟ್ಟ
ಕೆಆರ್‌ಎಸ್ ಡ್ಯಾಂ ಒಟ್ಟು ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರಿನ ಮಟ್ಟ: 30.008
ಇಂದಿನ ಒಳಹರಿವು: 2304 ಕ್ಯೂಸೆಕ್
ಹೊಸ ಹರಿವು : 880 ಕ್ಯೂಸೆಕ್ಸ್
ಲೈವ್ ಸಾಮರ್ಥ್ಯ (ಹೂಳು ಪರಿಗಣಿಸಿ): 21.629 ಟಿಎಂಸಿ
* ಮೆಟ್ಟೂರು ಜಲಾಶಯ ವಿವರ
ಡ್ಯಾಂ ಒಟ್ಟು ಎತ್ತರ : 114.160 ಅಡಿ
ಡ್ಯಾಂ ಒಟ್ಟು ನೀರಿನ ಸಂಗ್ರಹ: 84461 Mcft
ಅಣಕೆಟ್ಟಿನ ಒಳಹರಿವು :5980 ಕ್ಯೂಸೆಕ್
* ಹಾರಂಗಿ ಜಲಾಶಯದಲ್ಲಿ ಎಷ್ಟಿದೆ ನೀರು?
ಅಣೆಕಟ್ಟಿನ ಒಟ್ಟು ಎತ್ತರ: 2859
ಹಾರಂಗಿ ಡ್ಯಾಂ ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 8.5 ಟಿಎಂಸಿ
ಇಂದಿನ ನೀರಿನ ಸಂಗ್ರಹ: 6.298 ಟಿಎಂಸಿ
ಒಳಹರಿವು: 1491 ಕ್ಯೂಸೆಕ್
ಹೊರಹರಿವು: 1029 ಕ್ಯೂಸೆಕ್
* ಕಬಿನಿ ಡ್ಯಾಂ ನೀರಿನ ಮಟ್ಟ
ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ: 16.43 ಟಿಎಂಸಿ
ಡ್ಯಾಂ ಒಳಹರಿವು : 2236 ಕ್ಯೂಸೆಕ್
ಹೊರ ಹರಿವು: 5000 ಕ್ಯೂಸೆಕ್












Click it and Unblock the Notifications