ಮಂಡ್ಯದ ಅಯ್ಯಪ್ಪ ಸ್ವಾಮಿ ಭಕ್ತರ ಬಸ್ಸಿಗೆ ಕಲ್ಲೆಸೆತ

Posted By:
Subscribe to Oneindia Kannada

ಕಾಸರಗೋಡು, ಡಿಸೆಂಬರ್ 7: ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರ ಬಸ್ಸಿಗೆ ದುಷ್ಕರ್ಮಿಗಳು ಕಲ್ಲೆಸೆದಿರುವ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.

ಶಬರಿಮಲೆಗೆ ಕೆಎಸ್ಸಾರ್ಟಿಸಿಯಿಂದ ರಾಜಹಂಸ ಸೇವೆ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ನಡುವೆ ಮಂಡ್ಯದಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರ ಬಸ್ಸಿಗೂ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ.

Stone pelted on Mandya Ayyappa Swamy devotees bus at Kasaragod

ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಬಸ್ಸಿನ ಮುಂದುಗಡೆಯ ಗಾಜು ಸಂಪೂರ್ಣವಾಗಿ ಪುಡಿಪುಡಿಯಾಗಿದೆ. ಮಂಗಳೂರಿನಿಂದ ಕಾಸರೋಡಿಗೆ ಸಂಚರಿಸುತ್ತಿದ್ದ ಕೆಎಎಸ್ ಆರ್‌ಟಿಸಿ ಬಸ್ಸು,ಲಾರಿ, ಖಾಸಗಿ ಬಸ್ ಮೇಲೆಯೂ ಕಲ್ಲೆಸೆತ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Miscreants Stone pelted on Ayyappa Sway devotees bus from Mandya district at Kasaragod district Manjeshwara police station limits.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ