ನದಿಯಲ್ಲಿ ನೋರೋನ್ಹಾ, ಸಂತ ಲಾರೆನ್ಸರ ಪ್ರತಿಮೆ ಪತ್ತೆ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಉಡುಪಿ, ಜುಲೈ 06 : ಫಾದರ್ ನೋರೋನ್ಹಾ ಅವರ ಮರದ ಪ್ರತಿಮೆ ಸಾಸ್ತಾನ ಕೋಡಿ ಸಮೀಪದ ಸೀತಾ ನದಿಯಲ್ಲಿ ಪತ್ತೆಯಾಗಿದೆ. ಸೋಮವಾರ ಮೀನುಗಾರಿಕೆಗೆ ತೆರಳಿದ್ದವರಿಗೆ ಪ್ರತಿಮೆ ಸಿಕ್ಕಿದ್ದು, ಅದನ್ನು ದಡಕ್ಕೆ ತಂದಿದ್ದಾರೆ.

ಬ್ರಹ್ಮಾವರದಿಂದ 10 ಕಿ.ಮೀ ದೂರದಲ್ಲಿ ಸಿಕ್ಕ ಸುಮಾರು 6 ಅಡಿ ಎತ್ತರದ ಪ್ರತಿಮೆಯನ್ನು ಹಲಸಿನ ಮರದಿಂದ ತಯಾರಿಸಲಾಗಿದೆ. ಮಂಗಳವಾರ ಎಸ್.ಎಂ.ಎಸ್. ಚರ್ಚ್‌ಗೆ ಸಂಬಂಧ ಪಟ್ಟವರು ಸ್ಥಳಕ್ಕೆ ತೆರಳಿ ಗುರುಗಳ ಪ್ರತಿಮೆಯನ್ನು ಗುರುತಿಸಿದ್ದಾರೆ. [ಕ್ರಿಶ್ಚಿಯನ್ ರ ಆರಾಧ್ಯ ದೈವ ಏಸುವನ್ನು ಶಿಲುಬೆಗೆ ಏರಿಸಿರಲಿಲ್ಲವಂತೆ!]

christian

ಅನಂತರ ಚರ್ಚ್‌ನ ಪ್ರಸ್ತುತ ಧರ್ಮಗುರುಗಳಾದ ಸಿ.ಎ.ಐಸಾಕ್ ಅವರ ನೇತೃತ್ವದಲ್ಲಿ ಲಾರೆನ್ಸ್ ಡಿಸೋಜಾ, ಅಬ್ರಾಹಂ ಕುರಿಯೋಕೋಸ್, ನಾವೆಲ್ ಲುವಿಸ್ ಹಾಗೂ ಭಕ್ತರ ಉಪಸ್ಥಿತಿಯಲ್ಲಿ ನೋರೋನ್ಹ ಅವರ ಪ್ರತಿಮೆಯನ್ನು ಎಸ್. ಎಂ.ಎಸ್. ಕೆಥೆಡ್ರಲ್‌ಗೆ ತಂದು ಶುದ್ಧೀಕರಿಸಲಾಯಿತು. [ಕಡಿಮೆ ಸಂಬಳ ಎಂದು ಚರ್ಚಿಗೆ ಕಲ್ಲೆಸೆದ]

1889ರಲ್ಲಿ ಎಸ್.ಎಂ.ಎಸ್ ಚರ್ಚ್‌ನ ಸ್ಥಾಪಕ ಧರ್ಮ ಗುರುಗಳಾದ ನೋರೋನ್ಹಾ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಸಿ.ಎಚ್.ಪಿ ಶಾಲೆ ಆರಂಭಿಸುವ ಮೂಲಕ ಸಾವಿರಾರು ಮಂದಿಗೆ ವಿದ್ಯಾದಾನ ಮಾಡಿದ್ದರು. ಜಾತಿ, ಮತ, ಧರ್ಮದ ಭೇದವಿಲ್ಲದೆ ಜನರು ಅವರನ್ನು ಗೌರವಿಸುತ್ತಿದ್ದರು.

udupi

2015ರ ಡಿಸೆಂಬರ್ 6 ರಂದು ಭಾರತೀಯ ಮಲಂಕರ ಒರ್ಥೊಡಕ್ಸ್ ಪವಿತ್ರ ಸಭೆಯ ಪರಮಾಧ್ಯಕ್ಷ ಪರಮ ಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ 2 ಅವರು ನೋರೋನ್ಹಾ ಅವರನ್ನು ಪರಿಶುದ್ಧ ಪ್ರಾದೇಶಿಕ ಸಂತರಾಗಿ ಘೋಷಣೆ ಮಾಡಿದ್ದರು.

1936ರ ಜುಲೈ 23 ರಂದು ನಿಧನ ಹೊಂದಿದ ನೋರೋನ್ಹಾ ಅವರ ಸಂಸ್ಕರಣೆ ಪ್ರತಿ ವರ್ಷ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದ್ದು, ಪ್ರಾದೇಶಿಕ ಸಂತರಾಗಿ ಘೋಷಿಸಲ್ಪಟ್ಟ ಅನಂತರದ ಪ್ರಥಮ ಸಂಸ್ಕರಣೆ ಸಮಯದಲ್ಲೇ ಪ್ರತಿಮೆ ಸಿಕ್ಕಿರುವುದು ಆಶ್ಚರ್ಯಮೂಡಿಸಿದೆ.

Roque Noronha

ಅಂದಹಾಗೆ ಹಂಗಾರಕಟ್ಟೆ ಸಮೀಪದ ಸಮುದ್ರದಲ್ಲಿ ಮಂಗಳವಾರ ಪವಾಡ ಪುರುಷ ಸಂತ ಲಾರೆನ್ಸ್ ಅವರ ಪ್ರತಿಮೆಯೂ ಪತ್ತೆಯಾಗಿದೆ. ಸುಮಾರು 5 ಅಡಿ ಎತ್ತರದ 40 ಕೆಜಿ ತೂಕದ ಪ್ರತಿಮೆ ಇದಾಗಿದ್ದು, ಒಂದು ಕೈ ಭಗ್ನಗೊಂಡಿದೆ. ಪ್ರಸ್ತುತ ಅದನ್ನು ಸಾಸ್ತಾನದ ಸಂತ ಆಂಥೋನಿ ಇಗರ್ಜಿಯಲ್ಲಿ ಇಡಲಾಗಿದೆ.

St Lawrence

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two statues of historical figures were found by fishermen in Sita river Brahmavar, Udupi. The wooden statues were those of St Lawrence and Fr Roque Zephrin Noronha.
Please Wait while comments are loading...