ಕ್ರೈಂ: ಮೆಡಿಕಲ್ ವಿದ್ಯಾರ್ಥಿ ಭೀಕರ ಆತ್ಮಹತ್ಯೆ, ಇನ್ನಷ್ಟು

ಬೆಂಗಳೂರು, ಅ. 22: ಬಾಗಲಕೋಟೆಯ ಕುಮಾರೇಶ್ವರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ನವೀನ್ ಕುಮಾರ್ (21) ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ. ದ್ವಿತೀಯ ವರ್ಷದ ವಿದ್ಯಾರ್ಥಿ ನವೀನ್ ಡೆತ್ ನೋಟ್ ಬರೆದಿಟ್ಟಿದ್ದಾನೆ.

ವೈದ್ಯಕೀಯ ವಿದ್ಯಾರ್ಥಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜನತೆಯನ್ನು ಬೆಚ್ಚಿ ಬೀಳಿಸಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮರವಳ್ಳಿಯವನಾದ ನವೀನ್ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ 2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾನೆ.

ಕಾಲೇಜಿನ ವಸತಿ ನಿಲಯದಲ್ಲಿದ್ದ ಈತ ಮುಂಜಾನೆ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾನೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.

ಶಿವಮೊಗ್ಗ, ತುಮಕೂರು,ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಯಾದಗಿರಿ ಜಿಲ್ಲೆ

ಯಾದಗಿರಿ ಜಿಲ್ಲೆ

ಯಾದಗಿರಿ ಜಿಲ್ಲೆಯ ಎಕ್ಕಿಗಡ್ಡಿಯಲ್ಲಿ ಬಾದಣ್ಣ ನಾಗಮ್ಮ ದಂಪತಿಗಳು ದುರಂತ ಸಾವನ್ನಪ್ಪಿದ್ದಾರೆ.

ಬಾದಣ್ಣ ಅವರು ತಮ್ಮ ಜಮೀನಿನ ಸುತ್ತ ಹಾಕಿದ್ದ ಬೇಲಿ ತಂತಿಗೆ ಹಸು ಸಿಕ್ಕಿ ಬೀಳುವುದನ್ನು ತಪ್ಪಿಸಲು ಹೋಗಿದ್ದಾರೆ. ಆಗ ತಂತಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಹರಿದಿದೆ. ಪತಿ ಕಿರುಚುವುದನ್ನು ಕಂಡು ಹತ್ತಿರ ಬಂದ ಪತ್ನಿ ನಾಗಮ್ಮ ಅವರಿಗೂ ವಿದ್ಯುತ್ ಹರಿದಿದೆ. ಈ ಮಧ್ಯೆ ಹಸು ಕೂಡಾ ಇಬ್ಬರ ಜತೆ ವಿದ್ಯುತ್ ಸಂಪರ್ಕ ಹೊಂದಿ ಸಾವನ್ನಪ್ಪಿದೆ.

ಬೆಂಗಳೂರು ನಗರ

ಬೆಂಗಳೂರು ನಗರ

ಬೆಂಗಳೂರು ನಗರದ ಮೈಸೂರು ರಸ್ತೆ ಬಳಿ ಇರುವ ರೈಲ್ವೆ ಹಳಿ ಮೇಲೆ ಶವವೊಂದು ಸೋಮವಾರ(ಅ.28) ಬೆಳಗ್ಗೆ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಬನಶಂಕರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಗ ಗಿರೀಶ್ ಎಂದು ಗುರುತಿಸಲಾಗಿದೆ.

ನಿನ್ನೆ ತಡರಾತ್ರಿ ಗಿರೀಶ್ ಅವರು ತಮ್ಮ ಗೆಳೆಯರ ಜತೆಗೆ ಬೈಕ್ ಸವಾರಿ ಮಾಡಲು ನಗರದ ಹೊರವಲಯಕ್ಕೆ ಹೋಗಿದ್ದರು ಎನ್ನಲಾಗಿದೆ. ಆದರೆ, ಬೆಳಗ್ಗೆ ಮನೆಗೆ ಹಿಂತಿರುಗಿರಲಿಲ್ಲ. ಈಗ ಗಿರೀಶ್ ಅವರ ಸಾವು ಆತ್ಮಹತ್ಯೆಯೊ ಕೊಲೆಯೋ ಇನ್ನೂ ಸ್ಪಷ್ಟವಾಗಿಲ್ಲ. ಕುಂಬಳಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪೇಪರ್ ಟೌನ್ : ಕಳ್ಳತನ ಪ್ರಕರಣ

ಪೇಪರ್ ಟೌನ್ : ಕಳ್ಳತನ ಪ್ರಕರಣ

ಪಿರ್ಯಾದಿ ಜಯಲಕ್ಷ್ಮಿ 58 ವರ್ಷ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೆ.ಪಿ.ಎಸ್. ಕಾಲೋನಿ ಇಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದು ದಸರಾ ರಜೆಯ ನಂತರ ಶಾಲೆ ಬಾಗಿಲು ತೆಗೆದು ನೋಡಿದಾಗ ರೂಂನ ಕಿಟಕಿ ಸರಳುಗಳನ್ನು ಯಾವುದೋ ಆಯುಧದಿಂದ ಮುರಿದು ಯಾರೋ ಕಳ್ಳರು ಅಕ್ರಮವಾಗಿ ಒಳಪ್ರವೇಶಮಾಡಿ ಅಕ್ಷರದಾಸೋಹದ 50 ಕೆಜಿ ಯ 4 ಅಕ್ಕಿ ಚೀಲ ಹಾಗು ಇತರೆ ಅಡುಗೆ ಸಾಮಗ್ರಿಗಳನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ.

ವಂಚನೆ ಪ್ರಕರಣ

ವಂಚನೆ ಪ್ರಕರಣ

ಅ.27ರಂದು ಪಿರ್ಯಾದಿ ರಾಜೇಂದ್ರಕುಮಾರ್ ಜನರ ‌ಮ್ಯಾನೇಜರ್, ಅಕ್ಷರ ಮೋಟರ್ಸ್, ಶಿರಾ ರಸ್ತೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರು: ಅಕ್ಷರ ಮೋಟರ್ಸ್ ನಲ್ಲಿ ಸೇಲ್ಸ್ ಮೇನೆಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್.ಎ ಎಂಬುವರು ಗ್ರಾಹಕರಿಂದ ವಾಹನಗಳ ಖರೀದಿಗಾಗಿ ಮುಂಗಡ ಪಡೆದ ಹಣ ಹಾಗೂ ವಾಹನಗಳ ನೊಂದಣಿಗೆ ಸಲುವಾಗಿ ನೀಡಿದ ಡಿಡಿಗಳ ಹಣವನ್ನು ಸುಮಾರು 8 - 9 ಲಕ್ಷ ರೂಗಳನ್ನು ವಸೂಲಿ ಮಾಡಿ ಕಂಪನಿಯ ಪರವಾಗಿ ಪಡೆದುಕೊಂಡಿದ್ದಾರೆ. ಈ ಹಣವನ್ನು ಕಂಪನಿಗೆ ಕಟ್ಟದೇ ಹಣವನ್ನು ದುರುಪಯೋಗ ಪಡಿಸಿಕೊಂಡು ನಂಬಿಕೆ ದ್ರೋಹವೆಸಗಿ ಮೋಸ ಮಾಡಿರುತ್ತಾರೆ. ಇತ್ಯಾದಿ ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ.

ಕೊಲೆ ಬೆದರಿಕೆ

ಕೊಲೆ ಬೆದರಿಕೆ

ಪಿರ್ಯಾದುದಾರರು ಮಂಜುನಾಥ್‌ ಮೂಡಿಗೆರೆ ವಾಸಿ ಇವರು ಹಾಲು ತೆಗೆದುಕೊಳ್ಳಲು ಹೋದಾಗ ಆರೋಪಿ ರಮೇಶ್‌ ಈತನು ಹಳೆಯ ದ್ವೇಷದಿಂದ ಪಿರ್ಯಾದಿ ಮುಖಕ್ಕೆ ಉಗಿದಿದ್ದು, ಈ ಬಗ್ಗೆ ಪಿರ್ಯಾದಿ ಆರೋಪಿಗೆ ಕೇಳಿದಾಗ ಆರೋಪಿಯು ಹೊ** ಸೂ* ಮಗನೇ ನಿನಗೆ ಎಷ್ಟು ಕೊಬ್ಬು ಎಂದು ಜಾತಿ ನಿಂದನೆ ಮಾಡಿ ಕೈಯಿಂದ ಮುಖಕ್ಕೆ ಹೊಡೆದು, ಕಲ್ಲನ್ನು ತೆಗೆದುಕೊಂಡು ಪಿರ್ಯಾದಿ ಹಣೆಯ ಎಡಭಾಗಕ್ಕೆ ಹೊಡೆದು, ಹೊ** ಸೂ*ಮಗನೇ ನಿನಗೆ ಮದುವೆಯಾಗಲು ತನ್ನ ತಂಗಿಯೇ ಬೇಕಾಗಿತ್ತಾ ಎಂದು ಬೈದು, ನೆಲಕ್ಕೆ ಉರುಳಿಸಿಕೊಂಡು ಹೊಟ್ಟೆಯ ಬಲಭಾಗಕ್ಕೆ ಕಾಲಿನಿಂದ ಒದ್ದು, ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾನೆ.

 ಬ್ರಹ್ಮಾವರ

ಬ್ರಹ್ಮಾವರ

ದಿನಾಂಕ 25/10/2013 ರಂದು ಬೆಳಗ್ಗೆ 7:30 ಗಂಟೆಗೆ ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಕನ್ನಾರಿನಲ್ಲಿರುವ ಪಿರ್ಯಾದಿದಾರರಾದ ಶಂಕರಯ್ಯ ಆಚಾರ್ಯ (70) ತಂದೆ ಸೋಮಯ್ಯ ಆಚಾರ್ಯ, ವಾಸ ಕನ್ನಾರು , ಪೇತ್ರಿ ಅಂಚೆ , ಚೇರ್ಕಾಡಿ ಗ್ರಾಮ ಇವರ ಮಗನಾದ ಸುರೇಶ (28) ಎಂಬವರು ಮನೆಯಿಂದ ಕೆಜಿ ರೋಡಿಗೆ ಕೆಲಸಕ್ಕೆ ಹೋಗಿದ್ದು ಅದೇ ದಿನ ಸಂಜೆ 7 ಗಂಟೆಗೆ ಬ್ರಹ್ಮಾವರದಲ್ಲಿ ಬಾವ ರಾಮುರವರೊಂದಿಗೆ ಮಾತನಾಡಿ ಮನೆಗೆ ಹೋಗುವುದಾಗಿ ಹೇಳಿ ಹೋದವರು ಈತನಕ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬುದಾಗಿ ಶಂಕರಯ್ಯ ಆಚಾರ್ಯ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 269/13 ಕಲಂ ಹುಡುಗ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಹೊನ್ನಾಳಿ

ಹೊನ್ನಾಳಿ

ಹೊನ್ನಾಳಿ ಪೊಲೀಸ್ ಠಾಣೆ ಗುನ್ನೆ ನಂ: 299/2013 ಕಲಂ 279,337,304(ಎ), ಐಪಿಸಿ: ನನ್ನ ತಂದೆ ಮಹ್ಮದ್ ಇಬ್ರಾಹಿಂ ಸದರಿ ಲಾರಿಯನ್ನು ಚಾಲನೆಮಾಡಿಕೊಂಡು ಮತ್ತು ನಾನು ಅದೇ ಲಾರಿಯಲ್ಲಿ ದುಗ್ಗತ್ತಿಷುಗರ್ ಪ್ಯಾಕ್ಟರಿಗೆ ಕಬ್ಬನ್ನು ಆನ್ಲೋಡ್ಮಾಡಿಬರಲು ಹೊನ್ನಾಳಿ ಮಾರ್ಗವಾಗಿ ಹೋಗುತ್ತೀರುವಾಗ ಸಂಜೆ ಸುಮಾರು 07.30ರ ಸಮಯದಲ್ಲಿ ಹೊನ್ನಾಳಿ ತಾಲ್ಲೂಕ್ ದಿಡಗೂರು ಹರಳಹಳ್ಳಿ ಗ್ರಾಮದ ಹತ್ತಿರ ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ ಹೊನ್ನಾಳಿ ಕಡೆಯಿಂದ ಎಂ ಹೆಚ್ 10/ ಎ ಕ್ಯೂ -9963 ನೇ ಲಾರಿ ಚಾಲಕನು ಲೋಡ್ ಲಾರಿಯನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆಮಾಡಿಕೊಂಡು ನಾವು ಹೋಗುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ, ಲಾರಿಯನ್ನ ಚಾಲನೆಮಾಡುತ್ತಿದ್ದ ನನ್ನ ತಂದೆ ಮಹ್ಮದ್ ಇಬ್ರಾಹಿಂಗೆ ತಲೆಗೆ ಬಲಗಾಲಿಗೆ ಮತ್ತು ಇತರೆಕಡೆಗಳಿಗೆ ಪಟ್ಟುಬಿದ್ದು, ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತು ನನಗೆ ಬಲಭಾಗದ ಎದೆಯ ಹತ್ತಿರ, ತುಟಿಯ ಹತ್ತಿರ ಬಲತೊಡೆಗೆ ಪೆಟ್ಟುಬಿದ್ದು ಸಣ್ಣಪುಟ್ಟ ರಕ್ತಗಾಯಗಳಾಗಿರುತ್ತವೆ.

ಸೇತುವೆಗೆ ಲಾರಿ ಡಿಕ್ಕಿ ಪಲ್ಟಿ

ಸೇತುವೆಗೆ ಲಾರಿ ಡಿಕ್ಕಿ ಪಲ್ಟಿ

ಮೊಳಕಾಲ್ಮೂರು, ಅಕ್ಟೋಬರ್. 27 :: ನಂ: ಕೆಎ-16/ಎ-7889 ನೇ ಲಾರಿಯ ಚಾಲಕ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆ ಬದಿಯ ಸೇತುವೆಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾದ ಕಾರಣ ಚಾಲಕ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕ್ಲೀನರ್ ಹಾಗೂ ಮತ್ತೊಬ್ಬ ಗಾಯಗೊಂಡಿರುವ ಘಟನೆ ಈ ದಿನ ಬೆಳಗಿನಜಾವ ತಾಲ್ಲೂಕಿನ ರಾಜಾಪುರ ಗೇಟ್ ಬಳಿ ಎಸ್‍ಹೆಚ್-19 ರಸ್ತೆಯಲ್ಲಿ ನಡೆದಿದೆ. ಚಿತ್ರದುರ್ಗ ತಾಲ್ಲೂಕ್ ಮದಕರಿಪುರ ವಾಸಿ ಪರಮೇಶ್ವರಪ್ಪ (40) ಮೃತಪಟ್ಟ ಚಾಲಕನಾಗಿದ್ದು, ಕ್ಲೀನರ್ ನಾಗರಾಜ್ ಮತ್ತು ಚಂದ್ರಶೇಖರ್ ಗಾಯಗೊಂಡಿರುತ್ತಾರೆ ಎಂದು ದೂರು ಇದ್ದ ಮೇರೆಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಮರಕ್ಕೆ ಆಟೋ ಡಿಕ್ಕಿ

ಮರಕ್ಕೆ ಆಟೋ ಡಿಕ್ಕಿ

ಹಾಸನ ತಾಲೂಕು, ದುದ್ದ ಹೋಬಳಿ, ಮೈಲನಹಳ್ಳಿ ಗ್ರಾಮದ ಲಿಂಗರಾಜು ರವರ ಬಾಬ್ತು ಕೆಎ-21-7912 ರ ಆಟೋದಲ್ಲಿ ̧ಸಂಬಂಧಿಕರ ಮನೆಯಾದ ಉದ್ದೂರಹಳ್ಳಿ ಗ್ರಾಮಕ್ಕೆ ಹೋಗಲು ಮಾಯಸಮುದ್ರದ ಹತ್ತಿರ ಶಾಂತಿಗ್ರಾಮ ಮತ್ತು ದುದ್ದ ರಸ್ತೆಯಲ್ಲಿ ಆಟೋವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಆಕೇಶಿಯಾ ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ̧ಸ್ವರೂಪದ ರಕ್ತಗಾಯಗಳಾಗಿ ಲಿಂಗರಾಜು ಬಿನ್ ಲೇಟ್ ರಂಗೇಗೌಡ, 40 ವರ್ಷ,
ಮೈಲನಹಳ್ಳಿ ಗ್ರಾಮ ರವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಕಷ್ಣಮೂರ್ತಿ ರವರು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆಯಲ್ಲಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+