ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೊರೊನಾ ಇಳಿಕೆ; 13,800 ಪ್ರಕರಣಗಳು ದಾಖಲು

|
Google Oneindia Kannada News

ಬೆಂಗಳೂರು, ಜೂನ್ 05: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 13,800 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. 365 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಂದು ದಿನದಲ್ಲಿ 25346 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ಪ್ರಕಾರ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2683314 ಆಗಿದೆ. ಒಟ್ಟು ಗುಣಮುಖರಾದವರ ಸಂಖ್ಯೆ 2383758 ಆಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 268275 ಆಗಿದ್ದು, ಇದುವರೆಗೂ ಒಟ್ಟು 31260 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

State Reports 13800 New Covid 19 Cases on June 5

ಬೆಂಗಳೂರು ನಗರ ಪ್ರದೇಶದಲ್ಲಿ 2686 ಪ್ರಕರಣಗಳು ದಾಖಲಾಗಿದ್ದು, ನಂತರ ಮೈಸೂರಿನಲ್ಲಿ 1155 ಕೊರೊನಾ ಪ್ರಕರಣಗಳು ದಾಖಲಾಗಿವೆ. ಕೋವಿಡ್ ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 9.66 ಆಗಿದೆ. ಸೋಂಕಿನಿಂದ ಮೃತ ಪಟ್ಟವರ ಶೇಕಡಾವಾರು ಪ್ರಮಾಣ 2.64 ಆಗಿದೆ.

ಏಪ್ರಿಲ್ 15ರ ನಂತರ ಇದೇ ಮೊದಲ ಬಾರಿ ಪಾಸಿಟಿವಿಟಿ ಪ್ರಮಾಣ ಶೇ 10ಕ್ಕಿಂತ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ; 24 ಗಂಟೆಯಲ್ಲಿ 16,068 ಹೊಸ ಕೋವಿಡ್ ಪ್ರಕರಣ ದಾಖಲು

ಜಿಲ್ಲಾವಾರು ಕೊರೊನಾ ಪ್ರಕರಣಗಳು:
ಬಾಗಲಕೋಟೆ 175, ಬಳ್ಳಾರಿ 345, ಬೆಳಗಾವಿ 847, ಬೆಂಗಳೂರು ಗ್ರಾಮಾಂತರ 326, ಬೆಂಗಳೂರು ನಗರ 2686, ಬೀದರ್ 23, ಚಾಮರಾಜನಗ 340, ಚಿಕ್ಕಬಳ್ಳಾಪುರ 432, ಚಿಕ್ಕಮಗಳೂರು 378, ಚಿತ್ರದುರ್ಗ 449, ದಕ್ಷಿಣ ಕನ್ನಡ 714, ದಾವಣಗೆರೆ 529, ಧಾರವಾಡ 247, ಗದಗ 152, ಹಾಸನ 568, ಹಾವೇರಿ 88, ಕಲಬುರಗಿ 69, ಕೊಡಗು 255, ಕೋಲಾರ 424, ಕೊಪ್ಪಳ 279, ಮಂಡ್ಯ 562, ಮೈಸೂರು 1155, ರಾಯಚೂರು 110, ರಾಮನಗರ 57, ಶಿವಮೊಗ್ಗ 710, ತುಮಕೂರು 695, ಉಡುಪಿ 552, ಉತ್ತರ ಕನ್ನಡ 325, ವಿಜಯಪುರ 254, ಯಾದಗಿರಿ 54 ಪ್ರಕರಣಗಳು ದಾಖಲಾಗಿವೆ.

Recommended Video

Mysuru ಜಿಲ್ಲಾಧಿಕಾರಿ Rohini Sindhuri ಯನ್ನು ವರ್ಗಾವಣೆ ಮಾಡಿದ ಸರ್ಕಾರ | Oneindia Kannada

English summary
Karnataka reported 13,800 new COVID-19 cases, 365 deaths and 25346 recoveries in the last 24 hours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X