ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿಯಲ್ಲಿ ಅಲಿಬಾಬಾ ಮತ್ತು 40 ಕಳ್ಳರು

By Ashwath
|
Google Oneindia Kannada News

ಬೆಂಗಳೂರು, ಜೂ.9: ಸರ್ಕಾರ ಬೆಂಗಳೂರಿನಲ್ಲಿ ಮರಗಳನ್ನು ಕಡಿಯಲು ನಲವತ್ತು ಅಧಿಕಾರಿಗಳನ್ನು ನೇಮಿಸಿದೆ. ಈ ಅಧಿಕಾರಿಗಳು ಅಲಿಬಾಬಾ ಮತ್ತು ನಲುವತ್ತು ಕಳ್ಳರಂತೆ ಬಿಬಿಎಂಪಿಗೆ ಹೊರೆಯಾಗಿದ್ದಾರೆ ಎಂದು ಮೇಯರ್‌ ಬಿ.ಎಸ್‌‌‌ ಸತ್ಯನಾರಾಯಣ ಹೇಳಿದ್ದಾರೆ.

ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಬೆಂಗಳೂರಿನ ಸೆಂಟ್ರಲ್‌ ಕಾಲೇಜ್‌ ಸಭಾಂಗಣದಲ್ಲಿ ಜೂ. 9 ಸೋಮವಾರ ವಿಶ್ವಪರಿಸರ ದಿನಾಚರಣೆ ಮತ್ತು ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಎಲ್ಲೆಂದರಲ್ಲಿ ಮರಗಳನ್ನು ಕಡಿಯುತ್ತಿರುವ ಹಿನ್ನಲೆಯಲ್ಲಿ ಒಬ್ಬರು ಅಧಿಕಾರಿಯನ್ನು ನಿಯೋಜಿಸಲು ಸರ್ಕಾರವನ್ನು ಬಿಬಿಎಂಪಿ ಕೇಳಿತ್ತು. ಸರ್ಕಾರ ಒಬ್ಬರ ಬದಲಾಗಿ ನಲುವತ್ತು ಮಂದಿ ಅಧಿಕಾರಿಗಳನ್ನು ಇದಕ್ಕೆ ನಿಯೋಜಿಸಿದ್ದು ಬಿಬಿಎಂಪಿಗೆ ಬಿಳಿಯಾನೆ ಆಗಿದ್ದಾರೆ. ಸರ್ಕಾರ ಕೂಡಲೇ ಈ ಎಲ್ಲಾ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳಬೇಕೆಂದು ಮೇಯರ್‌ ವಿನಂತಿಸಿಕೊಂಡಿದ್ದಾರೆ.[ಜಾತಿ ವಿಷಯ ಪ್ರಸ್ತಾಪಿಸಿ ಹೆದರಿಸುತ್ತಾರೆ: ಮೇಯರ್‌]

ಮೇಯರ್‌‌‌ ವಿನಂತಿಗೆ ಅರಣ್ಯ ಸಚಿವ ರಾಮನಾಥ ರೈ ಮಾತನಾಡಿ ಸರ್ಕಾರ ನಿಯೋಜಿಸಿದ ಅಧಿಕಾರಿಗಳು ಬಿಬಿಎಂಪಿಯ ನಿಯಂತ್ರಣದಲ್ಲಿ ಇರುತ್ತಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಆ ಅಧಿಕಾರಿಗಳ ಜಾಗದಲ್ಲಿ ಬೇರೆ ಅಧಿಕಾರಿಗಳನ್ನು ನಿಯೋಜಿಲಾಗುವುದು ಪ್ರತಿಕ್ರಿಯೆ ನೀಡಿದರು.

ಪ್ರತಿವರ್ಷ‌ ಪರಿಸರ ಪ್ರಶಸ್ತಿಯನ್ನು ನೀಡುತ್ತಿದ್ದು ಈ ವರ್ಷದಿಂದ ಕ್ಲೀನ್‌ ಸಿಟಿ, ಕ್ಲೀನ್‌‌ ಪುರಸಭೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಸಚಿವ ರಾಮನಾಥ ರೈ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ರಾಜ್ಯದಲ್ಲಿ ಜಾಗೃತಿ ಮೂಡಿಸಿದ ವ್ಯಕ್ತಿ ಮತ್ತು ಸಂಘಟನೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಂದಿನ ಪುಟದಲ್ಲಿ ಪ್ರಶಸ್ತಿ ವಿಜೇತರ ವಿವರಗಳನ್ನು ಮತ್ತು ಚಿತ್ರಗಳನ್ನು ನೀಡಲಾಗಿದೆ.

 ನಗರದಲ್ಲಿ ವಿಶ್ಯೂವಲ್‌ ಪೊಲ್ಯೂಶನ್‌

ನಗರದಲ್ಲಿ ವಿಶ್ಯೂವಲ್‌ ಪೊಲ್ಯೂಶನ್‌

ನಗರಗಳಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ಶಬ್ದಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯದ ಬಗ್ಗೆ ತಲೆಕೆಡಿಸುತ್ತಿದ್ದ ನಾವು ಈಗ ದೃಷ್ಟಿಗೋಚರ ಮಾಲಿನ್ಯ(visual pollution) ಬಗ್ಗೆ ಚಿಂತೆ ಮಾಡಬೇಕಾಗಿದೆ.

ನಗರದಲ್ಲಿ ಕಸದ ಸಮಸ್ಯೆ ನಿಜವಾದ ಸಮಸ್ಯೆಯೇ ಅಲ್ಲ. ಅದನ್ನು ಸರಿಯಾಗಿ ವಿಲೇವಾರಿ ಮಾಡದ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ. ಸಿಮೆಂಟ್‌ ಕಂಪೆನಿಗಳು ಈ ಕಸವನ್ನು ತೆಗೆದುಕೊಳ್ಳಲು ಸಿದ್ದವಾಗಿದೆ.
ಸರ್ಕಾರದ ಸರಿಯಾದ ಯೋಜನೆ ರೂಪಿಸಿದ್ದಲ್ಲಿ ಸಮಸ್ಯೆಯನ್ನು ನಿವಾರಿಸಬಹುದು.

ವಾಮನ ಆಚಾರ್ಯ,ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ

 ಡಾ.ವಸುಂಧರಾ ಭೂಪತಿ, ಬೆಂಗಳೂರು

ಡಾ.ವಸುಂಧರಾ ಭೂಪತಿ, ಬೆಂಗಳೂರು

ಕಳೆದ 28 ವರ್ಷ‌ಗಳಿಂದ ಪರಿಸರ ಜಾಗೃತಿ, ಪರಿಸರ ಲೇಖನಗಳನ್ನು ಬರೆದಿರುವ ಇವರಿಗೆ 2007ನೇ ಸಾಲಿನ ಯೂನಿಸೆಫ್‌‌-ಎಚ್‌ಐವಿ ಏಡ್ಸ್‌‌ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದಿದ್ದಾರೆ.

 ಟಿ.ಜಿ.ಪ್ರೇಮ್‌ಕುಮಾರ್‌‌.

ಟಿ.ಜಿ.ಪ್ರೇಮ್‌ಕುಮಾರ್‌‌.

ವಿಜ್ಞಾನ ಶಿಕ್ಷಕರು, ಪ್ರೌಢ ಶಾಲಾ ವಿಭಾಗ, ಸರ್ಕಾರಿ ಪದವಿ ಪೂರ್ವ‌ ಕಾಲೇಜು ಸುಂಠಿಕೊಪ್ಪ, ಕೊಡಗು ಜಿಲ್ಲೆ

 ಬಿ.ಡಿ. ನೇಮಗೌಡ

ಬಿ.ಡಿ. ನೇಮಗೌಡ

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಚಿಮ್ಮಡ,ಜಮಖಂಡಿ ತಾಲೂಕು, ಬಗಲಕೋಟೆ ಜಿಲ್ಲೆ.

 ಪರಿಸರ ಸಂರಕ್ಷಣಾ ಒಕ್ಕೂಟ

ಪರಿಸರ ಸಂರಕ್ಷಣಾ ಒಕ್ಕೂಟ

ಕೋಟಿ ಮಠದ ಬೀದಿ, ಚೆನ್ನಪಟ್ಟಣ, ರಾಮನಗರ ಜಿಲ್ಲೆ

 ಹುಸೂರು ಗ್ರಾಮ ಅರಣ್ಯ ಸಮಿತಿ

ಹುಸೂರು ಗ್ರಾಮ ಅರಣ್ಯ ಸಮಿತಿ

ವಿಲೇಜ್‌ ಫಾರೆಸ್ಟ್‌‌ ಕಮಿಟಿ, ಹುಸೂರು, ಸಿದ್ದಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ

 ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ

ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ

ನೌನಾಥ ತಂದೆ ಬಸಪ್ಪ ಗೌಡ, ಬಸವರಾಜ್‌‌ ಎಂ, ಗಾಂಧಿನಗರ ಕಾಲೋನಿ, ಮೈಲೂರು ರೋಡ್‌‌, ಬೀದರ್‌ ತಾಲೂಕ್‌‌ ಮತ್ತು ಜಿಲ್ಲೆ

English summary
Department of forest, Ecology and Enviornment and Karnataka State Poluttion Control Board celebrate the world Environment Day on Monday 9th June 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X