ಹನಿಟ್ರ್ಯಾಪ್‌ಗೆ ಒಳಗಾಗಿದ್ರಾ ರಾಜಣ್ಣ?; ಆ ಮಂತ್ರಿ ಮೇಲೆ 2 ಸಲ ಹನಿಟ್ರ್ಯಾಪ್: ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ!

ಬೆಂಗಳೂರು, ಮಾರ್ಚ್‌ 20: ಹನಿಟ್ರ್ಯಾಪ್ ಕುರಿತು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಪ್ರಭಾವಿ ಸಚಿವರೊಬ್ಬರ ಹನಿಟ್ರ್ಯಾಪ್‌ ಕುರೊತು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿತ್ತು. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರ ಬಹಿರಂಗಗೊಂಡಿತ್ತು. ಕರ್ನಾಟಕದ ಆ ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿರುವ ಕುರಿತು ಸಚಿವ ಸತೀಶ್‌ ಜಾರಕಿಹೊಳಿ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಆಗಿದೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಆಗಿದೆ. ಸಚಿವರಿಗೆ ಹನಿಟ್ರ್ಯಾಪ್ ಆಗಿರುವುದು ನಿಜ. ಈ ಒಂದು ಹನಿಟ್ರ್ಯಾಪ್ ನಲ್ಲಿ ನಮ್ಮವರು ಅಷ್ಟೇ ಅಲ್ಲದೆ ಬೇರೆ ಪಕ್ಷದ ನಾಯಕರು ಕೂಡ ಹನಿಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು.

State Ministers Honey Trap Twice Says Minister Satish Jarkiholi

ಕೆಲವರು ಹನಿಟ್ರ್ಯಾಪ್ ಅನ್ನು ಬಂಡವಾಳ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೇನೆ. ಇದಕ್ಕೆ ಕಡಿವಾಣ ಹಾಕಬೇಕು. ಅಲ್ಲದೆ ನಮ್ಮಲ್ಲಿ ಒಬ್ಬ ಸಚಿವರ ವಿಕೆಟ್ ಬೀಳಿಸಲು ಯತ್ನಿಸಲಾಗುತ್ತಿದೆ ಎಂದು ಸ್ಪೋಟಕವಾದ ಹೇಳಿಕೆಯನ್ನ ಸತೀಶ್‌ ಜಾರಕಿಹೊಳಿ ಅವರು ನೀಡಿದ್ದಾರೆ. ಈ ಕುರಿತು ಗೃಹ ಸಚಿವರ ಜೊತೆಗೆ ಮಾತನಾಡಿ ಸೂಕ್ತವಾದಂತಹ ಕ್ರಮ ಕೈಗೊಳ್ಳುವಂತೆ ಹೇಳುತ್ತೇನೆ ಎಂದು ತಿಳಿಸಿದರು.

ಈ ಕುರಿತು ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಅವರು ಮಾತನಾಡಿ, ಒಂದು ಪಕ್ಷ ಸುದ್ದಿ ನಿಜವೇ ಆಗಿದ್ದರೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ, ನಾಯಕನಾದವನಿಗೆ ಬಾಯಿ ಮತ್ತು ಕಚ್ಚೆ ಭದ್ರವಾಗಿರಬೇಕೆಂದು ಹಿರಿಯ ರಾಜಕಾರಣಿಗಳು ಹೇಳಿದ್ದು ನೆನಪಾಗುತ್ತಿದೆ. ಹನಿಟ್ರ್ಯಾಪ್‌ ವಿಚಾರವನ್ನ ಸಂಪೂರ್ಣವಾಗಿ ತಿಳಿದುಕೊಳ್ಳದೆ ಮಾತನಾಡುವುದು ಒಳ್ಳೆಯದಲ್ಲ. ಇದು ಬಹಳ ಸೂಕ್ಷ್ಮವಾದ ವಿಚಾರ, ಅವರಿಗೆ ಧಕ್ಕೆ ತರುವಂತೆ ನಾವ್ಯಾರು ನಡೆದುಕೊಳ್ಳಬಾದರು. ರಾಜಕಾರಣ ಜೀವನದಲ್ಲಿ ನಾವು ತುಂಬಾ ಹುಷಾರಾಗಿ ಇರಬೇಕು. ರಾಜಕಾರಣಕ್ಕೆ ಬರುವವರು ಬಾಯಿ ಹಾಗೂ ಕಚ್ಛೆ ಎರಡು ಶುದ್ಧವಾಗಿ ಇಟ್ಟುಕೊಳ್ಳಬೇಕು ಎಂದರು.

ಅನಾವಶ್ಯಕವಾಗಿ ಏನಾದ್ರೂ ಆಗಿದ್ದರೇ ಅದನ್ನ ಸರಿಪಡಿಸಿಕೊಳ್ಳಬೇಕು. ಬೇರೆಯವರನ್ನ ತೇಜೋವಧೆ ಮಾಡುವುದು ಒಳ್ಳೆಯದಲ್ಲ. ಗೌರವಯುತವಾಗಿದ್ದರೇ ಯಾರು ಟಾರ್ಗೆಟ್‌ ಆಗಲ್ಲ. ನಮ್ಮ ಕೆಲಸವನ್ನ ನಾವು ಮಾಡಿಕೊಂಡು ಇದ್ರೆ ಯಾರು? ಯಾಕೆ ನಮ್ಮನ್ನ ಟಾರ್ಗೆಟ್‌ ಮಾಡುತ್ತಾರೆ. ನಾವು ನಮ್ಮ ರಾಜಕಾರಣವನ್ನ ಬುದ್ಧಿವಂತಿಕೆಯಿಂದ ಮಾಡಬೇಕು. ಇದು ಸಾರ್ವಜನಿಕವಾದ ಜೀವನ. ಸಾರ್ವಜನಿಕರಿಗೆ ಮಧ್ಯ ನಾವು ಜೀವನವನ್ನ ನಡೆಸುತ್ತೀದ್ದೇವೆ. ದಾಖನೆ ಇಲ್ಲದ ಚರ್ಚೆಗೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಅವರು ತಿಳಿಸಿದರು.

ಸದನದಲ್ಲಿ ಗುಡುಗಿದ ಕೆ ಎನ್‌ ರಾಜಣ್ಣ

ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪಿಸಿದ ಕೆಎನ್ ರಾಜಣ್ಣ, ಹನಿಟ್ರ್ಯಾಪ್‌ ಬಗ್ಗೆ ಈ ಬಗ್ಗೆ ದೂರು ನೀಡುತ್ತೇನೆ ಅಂತ ಘೋಷಿಸಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಎಲ್ಲರಿಗೂ ಗೊತ್ತಾಗಲಿ, ಇದರ ಹಿಂದೆ ಯಾರಿದ್ದಾರೆ, ಪ್ರೊಡ್ಯೂಸರ್ ಯಾರು, ಡೈರೆಕ್ಟರ್ ಯಾರು ಅಂತ ಗೊತ್ತಾಗಲಿ ಅಂತ ರಾಜಣ್ಣ ಗುಡುಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+