• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದ ಸಮ್ಮಿಶ್ರ ಸರ್ಕಾರ

|

ಬೆಂಗಳೂರು, ಅಕ್ಟೋಬರ್ 8: ಇಷ್ಟುದಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಸಂಸ್ಥೆಗಳು ರಸ್ತೆಯನ್ನು ನಿರ್ಮಿಸಿ ಟೋಲ್ ಸಂಗ್ರಹ ಮಾಡುತ್ತಿತ್ತು ಆದರೆ ಇದೀಗ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ಸಮ್ಮಿಶ್ರ ಸರ್ಕಾರ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏರ್‌ಪೋರ್ಟ್‌ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್‌ ಕಟ್ಟಬೇಕಿಲ್ಲ

ರಾಜ್ಯ ಹೆದ್ದಾರಿಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ 68 ಕೋಟಿ ವೆಚ್ಚ ಮಾಡುತ್ತಿದೆ ಆದರೆ ಗುತ್ತಿಗೆದಾರರು ಎಷ್ಟು ವರ್ಷ ಬೇಕಾದರೂ ಟೋಲ್ ಪಡೆಯಬಹುದು, ರಾಜ್ಯದ ಜನರ ದುಡ್ಡಲ್ಲೇ ರಸ್ತೆ ನಿರ್ಮಿಸಿ ಅವರಿಂದಲೇ ಟೋಲ್ ವಸೂಲಿ ಮಾಡುವುದು ಎಲ್ಲಿಯ ನ್ಯಾಯ ಎಂದು ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

8 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಮೊದಲ ಕರಾವಳಿ ಭಾಗದಲ್ಲಿ ಇದನ್ನು ಆರಂಭಿಸಲಾಗುತ್ತದೆ ನಂತರ ರಾಜ್ಯದ ಉಳಿದ 7 ಕಡೆಗಳಲ್ಲಿ ಟೋಲ್ ವಸೂಲಿ ಕೇಂದ್ರವನ್ನು ಸ್ಥಾಪಿಸಲಾಗು್ತತದೆ. ಅಕ್ಟೋಬರ್ 15ರಿಂದ ಟೋಲ್ ವಸೂಲಿ ಮಾಡಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿಗಳು ಉನ್ನತ ಮೂಲಗಳಿಂದ ಲಭ್ಯವಾಗಿದೆ.

ಟೋಲ್ ಸಂಗ್ರಹದ ಕುರಿತು ಕೆಆರ್‌ಡಿಸಿಎಲ್ ಇಂದ ಗುತ್ತಿಗೆದಾರರಿಗೆ ಪತ್ರ ಬರೆದಿದೆ, ಇಂಧನ ದರ ಏರಿಕೆ ಬೆನ್ನಲ್ಲೇ ಇದೀಗ ಜನರಿಗೆ ದೊಡ್ಡ ಶಾಕ್ ಇದಾಗಿದೆ. ಅವೈಜ್ಞಾನಿಕವಾಗಿ ಟೋಲ್ ಸಂಗ್ರಹಣೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

English summary
Kumaraswamy govt started to impelment siddaramaih govt project to start toll collection in state highways,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X