ಕಂಬಳಕ್ಕೆ ಪ್ರತ್ಯೇಕ ಕಾನೂನಿಗೆ ರಾಜ್ಯ ಸರ್ಕಾರ ಚಿಂತನೆ -ಜಯಚಂದ್ರ

Subscribe to Oneindia Kannada

ಬೆಂಗಳೂರು, ಜನವರಿ 25: 'ಕಂಬಳ ಉಳಿಸಿ' ಪ್ರತಿಭಟನೆ ಜೋರಾದ ಬೆನ್ನಿಗೆ ಕರ್ನಾಟಕ ರಾಜ್ಯ ಸರಕಾರ ಪರ್ತಯೇಕ ಕಾನೂನು ರಚನೆಗೆ ಚಿಂತನೆ ನಡೆಸಿದೆ. "ಫೆಬ್ರವರಿ 6ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆಯೆಂದು," ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ನಿಷೇಧಿತ ಕಂಬಳ ಆಚರಣೆಯನ್ನು ಕಾನೂನು ಬದ್ಧಗೊಳಿಸುವ ಸಂಬಂಧ ಬುಧವಾರ ಮಹತ್ವದ ಸಭೆ ನಡೆಯಿತು. ಸಭೆಯ ನಂತರ ಮಾತನಾಡಿದ ಸಚಿವರು "ಕಂಬಳ ಅಧಿಕೃತಗೊಳಿಸುವ ಕಾನೂನನ್ನು ಜಾರಿಗೆ ತರುವ ಸಂಬಂಧ ಪಶುಸಂಗೋಪನಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಈ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲು ಕ್ರಮಕೈಗೊಳ್ಳಲಾಗುವುದು," ಎಂದರು.

State govt thinking over separate law for Kambala - Jayachandra

"ಕಂಬಳ ಗ್ರಾಮೀಣ ಕ್ರೀಡೆಯಾಗಿದ್ದು ಇದರಲ್ಲಿ ಪ್ರಾಣಿ ಹಿಂಸೆ ಇರುವುದಿಲ್ಲ, ಸಾಮಾಜಿಕ ಮತ್ತು ಧಾರ್ಮಿಕ ಭಾವನೆಗಳು ಈ ಕ್ರೀಡೆ ಜೊತೆ ತಳುಕು ಹಾಕಿಕೊಂಡಿವೆ. ಜತೆಗೆ ಪ್ರಾಣಿಗಳಿಗೆ ತೊಂದರೆಯಾಗದಂತೆ ಕಂಬಳ ನಡೆಸಲು ಸರ್ಕಾರ ಈ ಹಿಂದೆಯೇ ಅನುಮತಿ ನೀಡಿತ್ತು," ಎಂದು ಸಚಿವರು ತಿಳಿಸಿದರು.

ಕಂಬಳಕ್ಕೆ ಮಾನ್ಯತೆ ನೀಡುವ ಕಾನೂನು ತರಲು ಸರ್ಕಾರ ನಿರ್ಧರಿಸಿದ್ದು, ಪ್ರಾಣಿ ಹಿಂಸೆ ತಡೆ ಕಾನೂನು ಅಡಿ ತಿದ್ದುಪಡಿ ತರುವ ಮೂಲಕ ಕಂಬಳದ ಜೊತೆ ಎತ್ತಿನ ಗಾಡಿ ಸ್ಪರ್ಧೆಗೂ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ಕಾನೂನು ಇಲಾಖೆಯ ತಜ್ಞರು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸೇರಿದಂತೆ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government is interested to come up with separate law for allowing Kambala said Law Minister T.B Jayachandra.
Please Wait while comments are loading...