ರಾಜ್ಯದಲ್ಲಿ ನೈಟ್ ಕರ್ಫ್ಯೂ ಹಿಂಪಡೆದ ಸರ್ಕಾರ; ಕುದುರೆ ರೇಸ್‌ಗೂ ಅನುಮತಿ

ಬೆಂಗಳೂರು, ನವೆಂಬರ್ 5: ಕರ್ನಾಟಕ ರಾಜ್ಯಾದ್ಯಂತ ವಿಧಿಸಿದ್ದ ರಾತ್ರಿ ಕರ್ಫ್ಯೂ ಹಿಂಪಡೆದು ರಾಜ್ಯ ಸರ್ಕಾರ ಇಂದು (ನವೆಂಬರ್ 5) ಆದೇಶ ಹೊರಡಿಸಿದೆ.

ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ವಿಧಿಸಿದ್ದ ಆದೇಶ ವಾಪಸ್​ ಪಡೆಯಲಾಗಿದೆ. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹಾಗೂ ದೇಶಾದ್ಯಂತ ಇಳಿಮುಖವಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಆದೇಶ ವಾಪಸ್ ಪಡೆಯಲಾಗಿದೆ.

ಅದರಂತೆ ಕೊರೊನಾ ಸೋಂಕು ಹಿನ್ನೆಲೆ ಜಾರಿಯಲ್ಲಿದ್ದ ನೈಟ್ ಕರ್ಫ್ಯೂ ಇಂದಿನಿಂದ (ಶುಕ್ರವಾರ) ಇರುವುದಿಲ್ಲ. ಗುರುವಾರ (ನವೆಂಬರ್ 4) ಎಲ್​ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಭೌತಿಕವಾಗಿ ನಡೆಸುವುದಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ನವೆಂಬರ್ 8 ರಿಂದ ಎಲ್​ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಲಿವೆ.

State Government Withdrawing Night Curfew In Karnataka; Horse Race Also Allowed

ಇದಕ್ಕೂ ಮೊದಲು ಅಕ್ಟೋಬರ್ 25ರಂದು ಶಾಲೆ ಪುನಾರಂಭಿಸುವಂತೆ ಆದೇಶ ನೀಡಲಾಗಿತ್ತು. ಈಗಾಗಲೇ ಶಾಲೆ ಕಾಲೇಜುಗಳು ಆಫ್​ಲೈನ್ ವಿಧಾನದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿವೆ. ಸಿನಿಮಾ ಹಾಲ್, ಈಜುಕೊಳಗಳಿಗೂ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿದ್ದ ನೈಟ್ ಕರ್ಫ್ಯೂ ಆದೇಶವನ್ನು ಇಂದು ಹಿಂಪಡೆಯಲಾಗಿದೆ.

ಕುದುರೆ ರೇಸ್​ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರ
ಕುದುರೆ ರೇಸ್​ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರ ಇಂದು (ನವೆಂಬರ್ 5) ಆದೇಶ ಹೊರಡಿಸಿದೆ. ಕೋವಿಡ್-19 ಕಾರ್ಯವಿಧಾನ ಪಾಲಿಸುವಂತೆ ಸರ್ಕಾರ ಷರತ್ತು ಹಾಕಿದೆ. ರೇಸ್ ಕೋರ್ಸ್​​ಗೆ ಪ್ರವೇಶಿಸುವವರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಸ್ಥಳಾವಕಾಶದ ಸಾಮರ್ಥ್ಯ ಆಧರಿಸಿ ಜನರು ರೇಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

State Government Withdrawing Night Curfew In Karnataka; Horse Race Also Allowed

Recommended Video

      ಸ್ಪೋಟಕ ಜಯದ ನಂತರ ಗೇಮ್ ಪ್ಲಾನ್ ಬಗ್ಗೆ ಹೇಳಿದ Virat Kohli | Oneindia Kannada

      ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳು ನಿಂತು ಹೋಗಿದ್ದವು. ಇದೀಗ, ಮತ್ತೆ ಜನಜೀವನ ಯಥಾಸ್ಥಿತಿಗೆ ಮರಳಲು ಆರಂಭಿಸಿದೆ. ಶಾಲಾ ಕಾಲೇಜುಗಳು ಆರಂಭವಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+