ಪಡಿತರ ಸಾಗಣೆ ವೆಚ್ಚಕ್ಕಾಗಿ ಮುಷ್ಕರ; 2082.99 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ

ಬೆಂಗಳೂರು, ಜುಲೈ 08: ಅನ್ನ ಭಾಗ್ಯ ಯೋಜನೆಯಡಿ ಆಹಾರ ಧಾನ್ಯ ಸಾಗಣೆ ವೆಚ್ಚದ ಬಿಲ್‌ ಬಾಕಿಯನ್ನ ಬರೋಬ್ಬರಿ ಐದು ತಿಂಗಳಿನಿಂದ ಪಾವತಿ ಮಾಡದೇ ಇರುವುದನ್ನು ಖಂಡಿಸಿ, ರಾಜ್ಯ ಪಡಿತರ ಆಹಾರ ಧಾನ್ಯಗಳು ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘವು ಆಹಾರಧಾನ್ಯ ಪೂರೈಕೆಯನ್ನು ಸೋಮವಾರದಂದು ಸ್ಥಗಿತಗೊಳಿಸಿತ್ತು.

ಪಡಿತರ ಆಹಾರ ಧಾನ್ಯಗಳು ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘವು ಕೈಗೊಂಡ ಲಾರಿ ಮುಷ್ಕರದಮುಂದಿಟ್ಟುಕೊಂಡು ವಿಪಕ್ಷಗಳ ನಾಯಕರು ಸಹ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿಯನ್ನ ನಡೆಸಿದ್ದರು. ಇದೀಗ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪಡಿತರ ಸಾಗಿಸಿದ್ದ ಲಾರಿ ಮುಷ್ಕರದ ಬೆನ್ನಲ್ಲೇ ಪಡಿತರ ಸಾಗಿಸಿದ್ದಕ್ಕಾಗಿ ಪಾವತಿ ಮಾಡಬೇಕಿದ್ದ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

State government orders release of money due for transporting rations

ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಮೇ-2025ರ ಮಾಹೆಗಳಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಗಾಗಿ ಮತ್ತು ಇತರ ಪ್ರಾಸಂಗಿಕ ಶುಲ್ಕಗಳಾದ ಸಗಟು ಮತ್ತು ಚಿಲ್ಲರೆ ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗೆ ಉಂಟಾಗುವ ವೆಚ್ಚವನ್ನು ಭರಿಸಲು ರೂ.2082.99 ಕೋಟಿಗಳಅ ನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿಲಾಗಿದೆ.

ಮೇಲ್ಕಂಡಂತೆ ಬಿಡುಗಡೆಗೊಳಿಸಿದ ಅನುದಾನದಲ್ಲಿ ರೂ.21.79 ಕೋಟಿಗಳು ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮ ನಿಗಮಿತ, ಬೆಂಗಳೂರು ಇವರಲ್ಲಿ ಉಳಿಕೆಯಾಗಿರುತ್ತದೆ. ಹಾಗಾಗಿ ಫೆಬ್ರವರಿ-2025 ರಿಂದ ಮೇ- 20250 ಮಾಹವರೆಗೂ ಸಗಟು/ಚಿಲ್ಲರೆ ಲಾಭಾಂಶ ಸಾಗಾಣಿಕೆ ವೆಚ್ಚಕ್ಕಾಗಿ ಬಿಡುಗಡೆಗೊಳಿಸಲು ಕೊರತೆಯಾಗುತ್ತದೆ ಎಂದು ತಿಳಿಸಿರುತ್ತಾರೆ.

ಮುಂದುವರೆದು, ಫೆಬ್ರವರಿ-2025 ರಿಂದ ಮೇ-2025ರ ಮಾಹೆವರೆಗೂ ಸಗಟು/ಚಿಲ್ಲರೆ ಲಾಭಾಂಶ, ಸಾಗಾಣಿಕೆ ವೆಚ್ಚಕ್ಕಾಗಿ ಅನುದಾನವು ಕೊರತೆಯಾಗಿದ್ದು, ಈ ಕೆಳಕಂಡ ಪಟ್ಟಿಯಲ್ಲಿ ವಿವರಿಸಿರುವಂತೆ ಸಗಟು/ಚಿಲ್ಲರೆ ಲಾಭಾಂಶ, ಸಾಗಾಣಿಕೆ ವೆಚ್ಚಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೋರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದೆ.

ಮೇಲ್ಕಂಡ ಪುಸ್ತಾವನೆಯನ್ನು ಪರಿಶೀಲಿಸಲಾಗಿ ಫೆಬ್ರವರಿ-2025ರಿಂದ ಮೇ-2025ರ ಮಾಹೆಯವರೆಗೂ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಯನ್ನು ಹೊರತುಪಡಿಸಿ ಪ್ರಾಸಂಗಿಕ ಶುಲ್ಕಗಳಾದ ಸಗಟು ಮತ್ತು ಚಿಲ್ಲರೆ ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗೆ ಪಾವತಿಸಬೇಕಾದ ರೂ.24410.22ಲಕ್ಷಗಳನ್ನು ಈ ಕೆಳಕಂಡ ಕೋಷ್ಟಕದನ್ವಯ 2025-26ನೇ ಸಾಲಿನ ಲೆಕ್ಕ ಶೀರ್ಷಿಕ:2408-01-196-0-01 (2408-00-101-0-01) DBT under Annabhagya Schemeರಡಿ ಬಿಡುಗಡೆ ಮಾಡಲು ಸರ್ಕಾರವು ನಿರ್ಧರಿಸಿ, ಖಜಾನೆ-2 ತಂತ್ರಾಂಶದ ಮೂಲಕ ಆಡಳಿತ ಇಲಾಖೆಯ ಹಂತದಿಂದ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತಿ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಫೆಬ್ರವರಿ-2025ರಿಂದ ಮೇ-2025ರ ಮಾಹೆಯವರೆಗೂ ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಯನ್ನು ಹೊರತುಪಡಿಸಿ ಪ್ರಾಸಂಗಿಕ ಶುಲ್ಕಗಳಾದ ಸಗಟು ಮತ್ತು ಚಿಲ್ಲರ ಲಾಭಾಂಶ, ಸಾಗಾಣಿಕೆ ಶುಲ್ಕಗಳಿಗೆ ಪಾವತಿಸಬೇಕಾದ ರೂ.24410.22ಲಕ್ಷಗಳನ್ನು ಈ ಕೆಳಕಂಡ ಕೋಷ್ಟಕದನ್ವಯ 2025-26 Bear:2408-01-196-0-01(2408-00-101-0-01)DBT under Annabhagya Schemeರಡಿ ಖಜಾನೆ-2 ತಂತ್ರಾಂಶದ ಮೂಲಕ ಆಡಳಿತ ಇಲಾಖೆಯ ಹಂತದಿಂದ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತಿ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಬಿಡುಗಡೆ ಮಾಡಿ ಆದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+