Government Employees: ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತು ಅಪ್‌ಡೇಟ್‌

ಬೆಂಗಳೂರು, ಫೆಬ್ರವರಿ 14: ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳಲ್ಲಿ ಉತ್ತಿರ್ಣರಾಗಲು ಹಲವು ಬಾರಿ ಗಡುವು ವಿಸ್ತರಣೆ ಮಾಡಲಾಗಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣದ ಅವಧಿಯನ್ನು ಡಿಸೆಂಬರ್ 31, 2025ರವರೆಗೆ ಸರ್ಕಾರ ವಿಸ್ತರಿಸಿ ಆದೇಶಿಸಿದೆ. ಅಲ್ಲದೇ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯ ಮಹತ್ವವನ್ನ ತಿಳಿಸಿದೆ.

ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣದ ಅವಧಿಯನ್ನು ಡಿಸೆಂಬರ್ 31, 2025ರವರೆಗೆ ಸರ್ಕಾರ ವಿಸ್ತರಿಸಿ ಆದೇಶಿಸಿದೆ. ಹೀಗಾಗಿ ಸರ್ಕಾರಿ ನೌಕರರು ಈ ಅವಧಿಯೊಳಗೆ ಪರೀಕ್ಷೆ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿಗೆ ಅನರ್ಹವಾಗಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

State Government Has Provided Important Information Regarding Computer Literacy Test

ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 2012 ನ್ನು ರೂಪಿಸಲಾಗಿದೆ. ಈ ನಿಯಮಾವಳಿಗಳ ನಿಯಮ 1(3) ರಲ್ಲಿ ನಿರ್ಧಿಷ್ಟಪಡಿಸಿರುವ ಕೆಲವೊಂದು ಹುದ್ದೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 103 ಸೇವೆನೆ 2024, ದಿನಾಂಕ 06/02/2025 ರಲ್ಲಿ ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್‌ ಸಾಕ್ಷರತಾ) ಪರೀಕ್ಷೆ ನಿಯಮಗಳು 2012 ರ ನಿಯಮ 3(ಬಿ) ಮಾಡಿರುವ ತಿದ್ದುಪಡಿಯನ್ವಯ ದಿನಾಂಕ 31/12/2025ರವರೆಗೆ ರಾಜ್ಯದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿರುತ್ತದೆ.

ಸುತ್ತೋಲೆ ಸಂಖ್ಯೆ: ಸಿಆಸುಇ 29 ಸೇವೆನೆ 2020, ದಿನಾಂಕ: 03-04-2023ರಲ್ಲಿ ದಿನಾಂಕ: 31-12-2023ರೊಳಗೆ ಅಥವಾ ತಮ್ಮ ಪರಿವೀಕ್ಷಣಾ ಅವಧಿಯೊಳಗೆ ಯಾವುದು ನಂತರವೋ ಅದರೊಳಗಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ. ಸದರಿ ಅವಧಿಯೊಳಗಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗಿರುತ್ತಾರೆ. ಆದುದರಿಂದ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇರುವ ಸರ್ಕಾರಿ ನೌಕರರು ದಿನಾಂಕ: 31-12-2025 ರ ಒಳಗೆ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಲು ಸೂಚಿಸಲಾಗಿರುತ್ತದೆ.

ಆದುದರಿಂದ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳುವ / https://clt.karnataka.gov.in ಹಾಗೂ ನಿಗಮದ ವೆಬ್ ಸೈಟ್ / https://nkclt.clt.karnataka.gov.in ವಿವರಗಳನ್ನು ನೋಂದಾಯಿಸಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಮೇಲ್ಕಂಡ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯಬಹುದಾಗಿರುತ್ತದೆ.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅಧಿಕೃತ ರಾಜ್ಯ ಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 2ಕ್ಕೆ ತಿದ್ದುಪಡಿ: ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ನಿಯಮ 2ರಲ್ಲಿ "ದಿನಾಂಕ:31.12.2024 ರೊಳಗೆ" ಎಂಬ ಪದ ಮತ್ತು ಅಂಕಿಗಳ ಬದಲಿಗೆ "ದಿನಾಂಕ: 31.12.2025 ರೊಳಗೆ" ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01.01.2025ರಿಂದ ಜಾರಿಗೆ ಬಂದಿವ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು.

3. ನಿಯಮ 3ಕ್ಕೆ ತಿದ್ದುಪಡಿ : ಸದರಿ ನಿಯಮಗಳ ನಿಯಮ 3ರಲ್ಲಿ. (ಎ) ಉಪ ನಿಯಮ (1)ರಲ್ಲಿ "ದಿನಾಂಕ: 31.12.2024 ರೊಳಗೆ", ಎಂಬ ಪದ ಮತ್ತು ಅಂಕಿಗಳ ಬದಲಿಗೆ "ದಿನಾಂಕ:31.12.2025 ರೊಳಗೆ", ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01.01.2025ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಜ್ಞಾಪಿಸತಕ್ಕದ್ದು ಮತ್ತು (ಬಿ) ಉಪ ನಿಯಮ (2)ರಲ್ಲಿ "ದಿನಾಂಕ: 31.12.2024ರೊಳಗೆ", ಎಂಬ ಪದ ಮತ್ತು ಅಂಕಿಗಳ ಬದಲಿಗೆ "ದಿನಾಂಕ: 31.12.2025ರೊಳಗೆ", ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01.01.2025ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು ಎಂಬುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+