ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಒಪ್ಪಿಕೊಂಡ ವೈದ್ಯರ ಬೇಡಿಕೆಗಳು ಯಾವವು?

|
Google Oneindia Kannada News

ಬೆಂಗಳೂರು, ಅ. 30: ವೈದ್ಯರ ರಾಜೀನಾಮೆ ಪ್ರಹಸನಕ್ಕೆ ಬುಧವಾರ ತೆರೆಬಿದ್ದಿದೆ. ವೈದ್ಯರ 14 ಬೇಡಿಕೆಗಳ ಪೈಕಿ 10ನ್ನು ನೆರವೇರಿಸಲು ಸರ್ಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ರಾಜೀನಾಮೆ ಹಿಂಪಡೆಯುವ ನಿರ್ಧಾರ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ರಾಜೀನಾಮೆ ಬೆದರಿಕೆ ಹಾಕಿದ ವೈದ್ಯರ ತಂಡಕ್ಕೆ ಇದು ಪ್ರಾಥಮಿಕ ಹಂತದ ಜಯ ಎಂದೇ ಹೇಳಲಾಗಿದೆ.

karnataka

ಸರ್ಕಾರ ಒಪ್ಪಿಕೊಂಡ ವೈದ್ಯರ 10 ಬೇಡಿಕೆಗಳು

* ಗುತ್ತಿಗೆ ವೈದ್ಯರ ಮೂಲ ವೇತನದಲ್ಲಿನ ವ್ಯತ್ಯಾಸ ಸರಿಪಡಿಸುವುದು.
* ಸೇವೆಯಲ್ಲಿ ಮೂರು ವರ್ಷ ಪೂರೈಸಿದ 350 ವೈದ್ಯರ ಕಾಯಂ
* ಸ್ನಾತಕೋತ್ತರ ಅವಧಿಯಲ್ಲಿ ಸಕಾಲಕ್ಕೆ ವೇತನ, ಭತ್ಯೆ ನೀಡಲು ಒಪ್ಪಿಗೆ
* ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧ ಪೂರೈಕೆ[ಸಂಧಾನ ಸಭೆ ಯಶಸ್ವಿː ವೈದ್ಯರ ಮುಷ್ಕರ ಅಂತ್ಯ]
* ವೈದ್ಯಕೀಯ ಸೇವೆಗೆಳ ಕೈಪಿಡಿ ರಚನೆಗೆ ಒಪ್ಪಿಗೆ
* ಖಾಲಿಯಿರುವ ದಂತ ವೈದ್ಯರ ಹುದ್ದೆ ಭರ್ತಿಗೆ ಕ್ರಮ
* ಸಮರ್ಪಕ ಪ್ರಯೋಗಾಲಯ ಸೌಲಭ್ಯ
* ವರ್ಗಾವಣೆ ಕಾಯ್ದೆ ತಿದ್ದುಪಡಿಗೆ ಕ್ರಮ
* ಅನುಷ್ಠಾನ ಅಧಿಕಾರಿಗಳ ಮುಂದುವರಿಕೆಗೆ ಒಪ್ಪಿಗೆ
* ಹೊಸ ದಂತ ವೈದ್ಯ ನೀತಿ ತಯಾರಿಕೆ ಅನುವು
ಈ ಮೇಲಿನ ಬೇಡಿಕೆಗಳಿಗೆ ಸರ್ಕಾರ ಬುಧವಾರದ ಸಂಧಾನ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ಸರ್ಕಾರ ತಿರಸ್ಕರಿಸಿದ ಬೇಡಿಕೆಗಳು
* ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಆಸ್ಪತ್ರೆ ವೈದ್ಯರಿಗೆ ನೇರ ವೇತನ ಪಾವತಿ ಮಾಡಲು ಅಸಾಧ್ಯ[ರಾಜೀನಾಮೆ ನೀಡಿದ ಸರಕಾರಿ ವೈದ್ಯರ ಅಳಲುಗಳು]
* ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಹಸ್ತಾಂತರ ಮಾಡಬಾರದು ಎಂಬ ಬೇಡಿಕೆ ಸರಿಯಲ್ಲ
* ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಯನ್ನು ವೈದ್ಯರಿಗೆ ನೀಡಲು ಸಾಧ್ಯವಿಲ್ಲ
* ಖಾಲಿ ಇರುವ ಎಲ್ಲ ಸಿಬ್ಬಂದಿ ಶೀಘ್ರ ನೇಮಕ ಸದ್ಯಕ್ಕಾಗದು.

English summary
Karnataka Government concedes Doctors demands. List of demands met by CM Siddaramaiah. Here a look of approved demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X