ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ ರೌಂಡಪ್: ಹೊಟ್ಟೆನೋವಿಗೆ ಗೃಹಿಣಿ ಬಲಿ, ಇತ್ಯಾದಿ

By Mahesh
|
Google Oneindia Kannada News

ಬೆಂಗಳೂರು, ಅ.9: ಹೊಟ್ಟೆ ನೋವು ತಾಳಲಾರದೆ ಗೃಹಿಣಿಯೊಬ್ಬರು ನೇನುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶದ ಚಿತ್ತೂರಿನ ಶಶಿಧರ್ ಎಂಬುವರ ಪತ್ನಿ 32 ವರ್ಷದ ದಿವ್ಯಾ ಎಂಬುವರು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಅಶೋಕನಗರದ ಬಾಡಿಗೆ ಮನೆಯೊಂದರಲ್ಲಿ ದಂಪತಿ ನೆಲೆಸಿದ್ದರು. ಇವರಿಗೆ 8 ವರ್ಷದ ಮಗನೊಬ್ಬನಿದ್ದಾನೆ. ಮನೆ ಸಮೀಪದಲ್ಲೇ ಶಶಿಧರ್ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ.

ಆರು ತಿಂಗಳ ಹಿಂದೆ ದಿವ್ಯಾ ಅವರಿಗೆ ಗರ್ಭಪಾತವಾಗಿತ್ತು. ಇದಾದ ನಂತರ ಆಕೆ ಅಸಾಧ್ಯ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಗಂಡ ಶಶಿಧರ್ ಹಾಗೂ ಮಗ ಚಿತ್ತೂರಿಗೆ ಹೋಗಿದ್ದ ಸಂದರ್ಭದಲ್ಲಿ ದಿವ್ಯಾ ನೇಣಿಗೆ ಶರಣಾಗಿದ್ದಾರೆ.

ಪತ್ನಿ ಫೋನ್ ಕರೆ ಸ್ವೀಕರಿಸದಿದ್ದಾಗ ತ್ಯಾಗರಾಜನಗರದಲ್ಲಿರುವ ಆಕೆ ತವರು ಮನೆಗೆ ಕರೆ ಮಾಡಿದ್ದಾರೆ. ದಿವ್ಯಾ ಅವರ ತಂದೆ ಇಂದುಶೇಖರ್ ಗಾಬರಿಗೊಂಡು ಅಶೋಕನಗರಕ್ಕೆ ಬಂದು ನೋಡಿದಾಗ ಮಗಳು ಸಾವಿಗೆ ಶರಣಾಗಿರುವುದು ಕಂಡು ಬಂದಿದೆ. ತಕ್ಷಣವೇ ಹತ್ತಿರವಿರುವ ಹನುಮಂತನಗರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ತುರುವೇಕೆರೆ ಪೊಲೀಸ್‌ ಠಾಣೆ

ತುರುವೇಕೆರೆ ಪೊಲೀಸ್‌ ಠಾಣೆ

ಮೊ.ಸಂ 202/13 , ಕಲಂ 323, 504, 327, 506, R/W 34 IPC:ಸುರೇಶ್‌ ಥಾವರೇಕೆರೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ :ಅ.9 ಸಂಜೆ 5-30 ರಲ್ಲಿ ನಮ್ಮ ಗ್ರಾಮದ ಚೌಡಪ್ಪ, ಗಂಗಮ್ಮ ಮತ್ತು ಶಂಕರ ಹೆಂಡತಿ ಸುದಾ ನಮ್ಮ ಮನೆ ಹತ್ತಿರ ಬಂದು ನಮ್ಮ ತಾಯಿಯನ್ನು ಹೊಡೆದು 30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡಿರುತ್ತಾರೆ ಮತ್ತು ದಿನ ನಿಮ್ಮನ್ನು ಸಾಯಿಸುತ್ತೇನೆ ಎಂದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸುತ್ತಾರೆ.

ನಾವು ಬೆಂಗಳೂರಿನಲ್ಲಿ ವಾಸವಿದ್ದು ನಮ್ಮ ತಾಯಿ ಮಾತ್ರ ನಮ್ಮ ಗ್ರಾಮದಲ್ಲಿ ವಾಸವಾಗಿದ್ದಾರೆ. ನಮ್ಮ ತಾಯಿಗೆ ಹೊಡೆದು ಬೆದರಿಕೆ ಹಾಕಿರುವ ಇವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಕೋಲಾರ ಜಿಲ್ಲೆ

ಕೋಲಾರ ಜಿಲ್ಲೆ

ದೊಂಬಿ ಮತ್ತು ಹಲ್ಲೆ: ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.

ಕಳೆದ ರಾತ್ರಿ ಕೋಲಾರ ತಾಲ್ಲೂಕು ವೆಲಗಲಬೂರೆ ಗ್ರಾಮದ ವಾಸಿ ರಾಮಪ್ಪ ಮತ್ತು ಅವರ ಕುಟುಂಬದವರನ್ನು ಅವರ ತಮ್ಮ ಆಂಜಿನಪ್ಪ ಮತ್ತು ಇತರರು ಸೇರಿ ಜಗಳ ಮಾಡಿ, ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ. ಕ್ಷುಲಕ ಕಾರಣದಿಂದಾಗಿ ಈ ಘಟನೆ ಸಂಭವಿಸಿರುತ್ತದೆ. ಈ ಬಗ್ಗೆ ಕೇಸು ಮತ್ತು ಪ್ರತಿಕೇಸುಗಳು ದಾಖಲಾಗಿರುತ್ತದೆ.
ವಂಚನೆ ಪ್ರಕರಣ

ವಂಚನೆ ಪ್ರಕರಣ

ಚಿಕ್ಕಮಗಳೂರಿನ ಎಸ್ ವಿಪಿಎಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಚೈನ್ ಲಿಂಗ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ಆದರೆ, 21 ವರ್ಷ ಬಿಕಾಂ ಪದವಿಧರ ನಿತಿನ್ ಅನೇಕ ವಿದ್ಯಾರ್ಥಿಗಳಿಂದ ಹಣ ಪಡೆದು ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.

ನಿತಿನ್ ಮನೆಗೆ ನುಗ್ಗಲು ವಿದ್ಯಾರ್ಥಿ ಸಮೂಹ ಗುರುವಾರ ಯತ್ನಿಸಿದ್ದಾರೆ. ಆದರೆ, ನಿತಿನ್ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿಗಳ ನಂಬಿಕೆಗೆ ಪಾತ್ರವಾಗಿದ್ದ ನಿತಿನ್ ಗೂ ಕಂಪ್ಯೂಟರ್ ಸೆಂಟರ್ ನವರು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಸಮೂಹ ಕಂಪ್ಯೂಟರ್ ಸೆಂಟರ್ ಗೆ ತೆರಳಿ ಕಂಪ್ಯೂಟರ್, ಕುರ್ಚಿ, ಮೇಜುಗಳನ್ನು ಕುಟ್ಟಿ ಪುಡಿ ಮಾಡಿರುವ ಘಟನೆ ನಡೆದಿದೆ.
ಉಡುಪಿ

ಉಡುಪಿ

ಕೋಟಾ: ಗಂಗಾಧರ ತಂದೆ: ಮಂಜುನಾಥ ಹರಿಜನ ವಾಸ: "ಪಿತ್ರಕೃಪಾ" ಐರೋಡಿ ಗ್ರಾಮ ಕುಂದಾಪುರ, ಉಡುಪಿ ತಾಲೂಕು ಐರೋಡಿ ಗ್ರಾಮದ ಸಾಸ್ತಾನ ಎಂಬಲ್ಲಿರುವ ಪ್ರವೀಣ್ ಕುಮಾರ್ ಎಂಬವರ ಅಂಗಡಿಯಲ್ಲಿರುವಾಗ ಪ್ರವೀಣ್ ಕುಮಾರವರ ಅಂಗಡಿಗೆ ನುಗ್ಗಿ ಅವರಿಗೆ ದೊಣ್ಣೆಯಿಂದ ಹಲ್ಲೆ ನಡೆಸುತ್ತಿದ್ದಾಗ ಗಂಗಾಧರ ಹಲ್ಲೆಯನ್ನು ತಪ್ಪಿಸಲು ಹೋದಾಗ ಆರೋಪಿ 1. ಗೌತಮ್ ತಂದೆ: ಸದಾಶಿವ ದೇವಾಡಿಗ 2. ಸುಧೀರ ತಂದೆ: ಕುಷ್ಟ ಪೂಜಾರಿ 3. ಮಂಜುನಾಥ ತಂದೆ: ಬೇಡು ಪೂಜಾರಿ 4. ಕಿರಣ್ ತಂದೆ: ಬೇಡು ಪೂಜಾರಿ 5.ನಾಗರಾಜ ತಂದೆ: ಲಕ್ಷ್ಮಣ ಪೂಜಾರಿ 6.ರಾಘವೇಂದ್ರ ತಂದೆ: ಲಕ್ಷ್ಮಣ ಪೂಜಾರಿ 7.ರಾಜೇಂದ್ರ ತಂದೆ: ಲಕ್ಷ್ಮೀ ಪೂಜಾರ್ತಿ 8.ವಿಜಯ ತಾಯಿ: ಗುಲಾಭಿ ದೇವಾಡಿಗರ ಅವ್ಯಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಗಂಗಾಧರರವರಿಗೆ ಕೂಡ ದೊಣ್ಣೆಯಿಂದ ಹಲ್ಲೆ ನಡೆಸಿ ನಿಮ್ಮ ಯಾರನ್ನೂ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ

ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 222/2013 ಕಲಂ 3 (I) (x) SC/ST ACT & 143 147 148 324 448 504 506 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಶಿವಮೊಗ್ಗ ಕ್ರೈಂ

ಶಿವಮೊಗ್ಗ ಕ್ರೈಂ

ಪಿರ್ಯಾದಿ ಶ್ರೀಮತಿ ಹನ್ನಾ ಜಯಂತಿ ಕೋಂ ಮಾರ್ಟಿನ್ ವಿಜಯ ಕುಮಾರ್ ಅಮ್ಮನ್ನ ವಾಸ ಎಎ ಕಾಲೋನಿ ಶಿವಮೊಗ್ಗ ಆರೋಪಿಗಳಾದ ಮಾರ್ಟಿನ್ ವಿಜಯ ಕುಮಾರ್ ಅಮ್ಮನ್ನ ಹಾಗೂ 3 ಜನರು ವಾಸ ಎಎ ಕಾಲೋನಿ ಶಿವಮೊಗ್ಗ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದು ಹಾಗೂ ನಿನ್ನ ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬರಬೇಕು ಹಾಗೂ ಪಿರ್ಯಾದಿದಾರರಿಗೆ ಅರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕೋಲಿಂದ ಹೊಡೆದು ಮತ್ತು ಪ್ರಾಣ ಬೆದರಿಕೆ ಹಾಕಿರುತ್ತಾರೆ

ಚಿತ್ರದುರ್ಗ ನಗರ

ಚಿತ್ರದುರ್ಗ ನಗರ

ಕಳೆದ ರಾತ್ರಿ 07-15 ಗಂಟೆ ಸಮಯದಲ್ಲಿ ಕೋಟೆ ಪೊಲೀಸ್ ಠಾಣೆಯ ಪಿಎಸ್‍ಐ ಇಮ್ರಾನ್ ಬೇಗ್ ಸಿಪಿಐ ಉಮಾಪತಿಯವರಿಗೆ ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ನಗರದ ಚೋಳುಗುಡ್ಡದ ಆಟೋ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಕೆಳಗೆ ಮಟ್ಕಾ ಜೂಜಾಟ ನಡೆಸುತ್ತಿದ್ದ ಇಮ್ರಾನ್ (21), ಆಸೀಫ್‍ಖಾನ್ (29) ಎಂಬ ಇಬ್ಬರನ್ನು ಬಂಧಿಸಿದ್ದು, ಬಂಧಿತರಿಂದ 2,405/- ರೂಪಾಯಿ ನಗದು ಹಣ, ಮಟ್ಕಾ ನಂಬರ್ ಬರೆದ ಎರಡು ಚೀಟಿಗಳು, ಒಂದು ಲೆಡ್‍ಪೆನ್ನನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಅಪರಿಚಿತ ವ್ಯಕ್ತಿ ಶವ ಪತ್ತೆ

ಹಾಸನ ತಾಲ್ಲೂಕು, ಕಸಬಾ ಹೋಬಳಿ, ಕುದುರುಗುಂಡಿ ಗ್ರಾಮದ ಶ್ರೀಮತಿ ಸುಶೀಲಮ್ಮ ಕೊಂ ಬಸವಯ್ಯ ವೇದಾವತಿ ಗ್ರಾಮರವರು ಗ್ರಾಮದ ಕೆರೆಯ ಏರಿ ಹಿಂಭಾಗದಲ್ಲಿರುವ ತಮ್ಮ ಬಾಬ್ತು ಗದ್ದೆಯಲ್ಲಿ ಯಾರೋ ಅಪರಿಚಿತ ಗಂಡಸು ಸುಮಾರು 25-30 ವರ್ಷ ವಯಸ್ಸಿನ ಗಂಡಸು ಈಗ್ಗೆ 3-4 ದಿವಸದ ಹಿಂದೆ ಮೃತಪಟ್ಟಿದ್ದು ದೇಹ ಊದಿಕೊಂಡು ವಾಸನೆ ಬರುತ್ತಿದ್ದು ಶವದ ಪಕ್ಕದಲ್ಲಿ ಒಂದು ಮದ್ಯದ ಖಾಲಿ ಸೀಸೆ, ಒಂದು ನೀರಿನ ಸೀಸೆ ಹಾಗೂ ಒಂದು ಪ್ಲಾಸ್ಟಿಕ್ ಲೋಟ ಸಹ ಬಿದ್ದಿದ್ದು ಆತ ಮದ್ಯದ ಅಮಲಿನಲ್ಲಿ ಜಮೀನಿನಲ್ಲಿ ಸುಧಾರಿಸಿಕೊಳ್ಳುವಾಗ ಮೃತಪಟ್ಟಿರುವಂತೆ ಕಂಡು ಬಂದಿರುತ್ತದೆ ಎಂದು ಶ್ರೀಮತಿ ಸುಶೀಲಮ್ಮ ರವರು ಕೊಟ್ಟ ದೂರಿನ ಮೇರೆಗೆ ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ

English summary
Karnataka Crime news Coverage : A 32 year housewife resident of Ashok nagar committed suicide in Hanumanthanagar police station limits. Divya a native of Chittor was suffering from stomach ache said her husband Shashidhar and many more crime related news from across the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X