ರೈತ- ಫೋಟೊ ಜರ್ನಲಿಸ್ಟ್ ಜತೆ ಚಾಲಕ ಡಿಶುಂ ಡಿಶುಂ
ಮೈಸೂರು, ಜ.9: ರಸ್ತೆ ಮೇಲೆ ಹುರುಳಿ ಚೆಲ್ಲುತ್ತಿದ್ದ ರೈತ ಎಷ್ಟು ಹೊತ್ತಾದರೂ ದಾರಿ ಬಿಡದೆ ಸತಾಯಿಸಿದ ಎಂದು ಹೇಳಿ ಕರ್ತವ್ಯ ನಿರತ ಸಾರಿಗೆ ಬಸ್ ಚಾಲಕನೊಬ್ಬ ಅಮಾಯಕ ರೈತನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸುದ್ದಿಯನ್ನು ಚಿತ್ರೀಕರಿಸಲು ಮುಂದಾದ ಪತ್ರಿಕಾ ಛಾಯಾಗ್ರಾಹಕನಿಗೂ ಗೂಸಾ ಬಿದ್ದಿರುವ ಘಟನೆ ಮೈಸೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ಪತ್ರಿಕಾ ಛಾಯಾಗ್ರಾಹಕ ಕ್ಯಾಮೆರಾ ಹಾನಿಗೊಂಡಿದೆ. ಸಾರ್ವಜನಿಕರ ಎದುರು ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ ಘಟನೆ ಸುತ್ತೂರು ಸಮೀಪದ ಹೊಸಕೋಟೆ ಬಳಿ ಸಂಭವಿಸಿದೆ. ಬಿಳಲೆ-ಸುತ್ತೂರು-ಮೈಸೂರು ನಡುವೆ ಸಂಚರಿಸುವ ಸಾರಿಗೆ ಬಸ್ ನ ಚಾಲಕ ಮುದ್ದೇಗೌಡ ಹಲ್ಲೆ ಮಾಡಿರುವ ಆರೋಪಿಯಾಗಿದ್ದು, ಸ್ಥಳೀಯ ಆಂದೋಲನ ಪತ್ರಿಕೆಯ ಗ್ರಾಮೀಣ ಛಾಯಾಗ್ರಾಹಕ ಸುತ್ತೂರು ನಂಜುಂಡ ನಾಯಕ ಹಲ್ಲೆಗೊಳಗಾಗಿದ್ದಾರೆ.
ಬಿಳಲೆ-ಸುತ್ತೂರು-ಮೈಸೂರು ನಡುವೆ ಬರುವ ಹೊಸಕೋಟೆ ಬಳಿ ರೈತನೋರ್ವ ರಸ್ತೆಯಲ್ಲಿ ಹುರುಳಿ ಚೆಲ್ಲುತ್ತಿರುವುದನ್ನು ಕಂಡ ಚಾಲಕ ಬಸ್ ನಿಲ್ಲಿಸಿ, ರೈತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಘಟನೆಗಳನ್ನು ಬಸ್ ನಲ್ಲಿಯೇ ಪ್ರಯಾಣಿಸುತ್ತಿದ್ದ ಛಾಯಾಗ್ರಾಹಕ ಸುತ್ತೂರು ನಂಜುಡನಾಯಕ ಸೆರೆ ಹಿಡಿಯಲು ಮುಂದಾದಾಗ, ಚಾಲಕ ಛಾಯಾಗ್ರಹಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಾರಿಗೆ ಇಲಾಖೆಯ ನಗರ ಘಟಕದ ನಿಯಂತ್ರಣಾಧಿಕಾರಿ ರಮೇಶ್ ಅವರಿಗೆ ದೂರು ನೀಡಲಾಗಿದೆ.
ಮಲ್ಲೇಶ್ವರಂ, ಚಿತ್ರದುರ್ಗ, ದಾವಣಗೆರೆ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಕರ್ನಾಟಕ ರಾಜ್ಯ ಕ್ರೈಂ ನ್ಯೂಸ್ ಕವರೇಜ್
ಬೆಂಗಳೂರು : ಮಲ್ಲೇಶ್ವರಂ ಪೊಲೀಸರು ಕಾರ್ಯಾಚರಣೆ ನಡೆಸಿ ಇಂಡಿಯನ್ ಬ್ಯಾಂಕ್ ಎ.ಟಿ.ಎಂ ನಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿ ನಂತರ ಪರಾರಿಯಾಗಿದ್ದ ಆರೋಪಿಗಳಾದ ಸತೀಶ(23), ಸಿದ್ದೇಶ(26) ರನ್ನು ಬಂಧಿಸಲಾಗಿದೆ.
ಸತೀಶ ಎಂಬುವನು ಮಲ್ಲೇಶ್ವರಂ ಇಂಡಿಯನ್ ಬ್ಯಾಂಕ್ ಎ.ಟಿ.ಎಂ ಸೆಂಟರ್‍ನಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದು, ಈತನು ತನ್ನ ಸಂಬಂಧಿಯಾದ ಸಿದ್ದೇಶ ಎಂಬುವನ ಜೊತೆ ಸೇರಿ ಒಂದೇ ಬಾರಿಗೆ ಹಣಗಳಿಸಿ ಮೋಜಿನ ಜೀವನ ನೆಡೆಸಲು ಉದ್ದೇಶಿಸಿದ್ದು, ಅದರಂತೆ ತಾನು ಕೆಲಸ ಮಾಡುತ್ತಿದ್ದ ಎ.ಟಿ.ಎಂ ಸೆಂಟರ್‍ನಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿ, ದಿನಾಂಕ: 24-12-2013 ರಂದು ಮದ್ಯರಾತ್ರಿ ಇಬ್ಬರು ಸೇರಿ ಎ.ಟಿ.ಎಂ ಮೆಷಿನ್‍ನ್ನು ಜಕಂಗೊಳಿಸಿ ಕಳ್ಳತನ ಮಾಡುವಾಗ ರಸ್ತೆಯಲ್ಲಿ ರಾತ್ರಿ ಗಸ್ತು ಪೊಲೀಸರ ಶಬ್ದ ಕೇಳಿ ಓಡಿಹೋಗಿದ್ದರು.
ಈ ಸಂಬಂಧ ಮಲ್ಲೇಶ್ವರಂ ಪೊಲೀಸರು ಬಲೆ ಬೀಸಿ ಮೇಲ್ಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಆರೋಪಿಗಳು ಈ ಹಿಂದೆ ನೆಲಮಂಗಲ ಪೊಲೀಸ್ ಠಾಣಾ ಸರಹದ್ದಿನ ಬ್ಯಾಂಕ್‍ವೊಂದರಲ್ಲಿ ಹಾಗೂ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದರು.

ಮಾಲೂರು : ಕೊಲೆ ಪ್ರಕರಣ
ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು-ಹೊಸಕೋಟೆ ರಸ್ತೆ, ಮಾಲೂರು ತಾಲ್ಲೂಕು, ಯಶವಂತಪುರ ಗ್ರಾಮದ ಬಳಿಯ ಶ್ರೀ.ಆಂಜನೇಯಸ್ವಾಮಿ ದೇವಾಲಯದ ಬಳಿ ಸಂಭವಿಸಿರುತ್ತದೆ. ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯ ವಾಸಿ ಪಚ್ಚಿ ರವರನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಕೊಲೆ ಮಾಡಿ, ಪರಾರಿಯಾಗಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ದಾವಣಗೆರೆ ಕ್ರೈಂ ನ್ಯೂಸ್
ಬಸವನಗರ ಪೊಲೀಸ್ ಠಾಣೆ ಗುನ್ನೆ ನಂ: 06/2014, ಕಲಂ: 454.457.380 ಐ.ಪಿ.ಸಿ.
ಬಿಎಸ್ ದೊಡ್ಡೆ ಗೌಡ್ರು ಸ.ಮಾ.ಹಿ.ಪ್ರಾಥಮಿಕ ಪಾಠ ಶಾಲೆ ಹೊಂಡದ ರಸ್ತೆ ದೇವರಾಜ್ ಅರಸ್ ಬಡಾವಣೆ ದಾವಣಗೆರೆ ರವರು ಠಾಣೆಗೆ ಹಾಜರಾಗಿ ನೋಡಿದ ದೂರಿನ ಸಾರಾಂಶ
ಶಾಲೆಯ ಪಾಠ ಪ್ರವಚನಗಳನ್ನು ಮುಗಿಸಿಮಕೊಂಡು ಶಾಲಾ ಕೊಠಡಿಗಳಿಗೆ ಮತ್ತು ಮುಂಬಾಗ ಗೇಟ್ಗೆ ಬೀಗ ಹಾಕಿ ಶಾಲೆಯ ಆಯಾದವರಾದ ಶ್ರೀಮತಿ ಶಾಂತಮ್ಮ ಇವರಿಗೆ ಶಾಲೆಯ ಕೊಠಡಿಯ ಬೀಗದ ಕೀ ಗಳನ್ನು ಕೊಟ್ಟು ಮನೆಗೆ ಹೋಗಿದ್ದು ಸರಿಯಷ್ಟೆ, ನಂತರ ಶಾಂತಮ್ಮ ನವರು ಶಾಲೆಗೆ ಬಂದು ಶಾಲಾ ಕೊಠಡಿಗಳನ್ನು ಸ್ವಚತೆ ಮಾಡಲು ಗಣಕ ಯಂತ್ರ ಕೊಠಡಿಯ ಬೀಗ ತೆಗೆದು ನೋಡಲಾಗಿ ಕಿಟಕಿ ಸಮೀಪ ಟೇಬಲ್ ಮೇಲಿದ್ದ ಕಂಪ್ಯೂಟರ ಮಾನಿಟರ್ ಮತ್ತು ಸರ್ವರ್ ಕಾಣದೆ ಇದ್ದು ಶಾಂತಮ್ಮನವರು ಪಿರ್ಯಾದಿ ತಿಳಿಸಿದಾಗ ಪರಿಶೀಲಿಸಿ ನೋಡಲಾಗಿ ಟೇಬಲ್ ಮೇಲಿದ್ದ ಕಂಪ್ಯೂಟರ್ ಮಾನಿಟರ್ ಮತ್ತು ಸರ್ವರ್ ಇರಲಿಲ್ಲ ಇದರ ಬೆಲೆ ಸುಮಾರು 9 ರಿಂದ 10 ಸಾವಿರ ಆಗಬಹುದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಪತ್ತೆ ಹಚ್ಚಿ ಕ್ರಮಕ್ಕೆ ಇದ್ದ ಮೇರೆಗೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಮಣಿಪಾಲ : ಜೀವನದಲ್ಲಿ ಜಿಗುಪ್ಸೆ ಸಾವು
ಮಣಿಪಾಲ: ಮಾಲತಿ ನಾಯ್ಕ ತಂದೆ: ಬಾಬು ನಾಯ್ಕ, ವಾಸ : ಮಾಲತಿ ನಿಲಯ ,ಮೂಡು ಅಲೆವೂರು ಪಾನ್ಸೆ, ಅಲೆವೂರು ಗ್ರಾಮ, ಉಡುಪಿ ತಾಲೂಕು ರವರ ತಂದೆ ಬಾಬು ನಾಯ್ಕ (65) ಇವರಿಗೆ ಬೆನ್ನು ನೋವಿನ ಬಗ್ಗೆ ಆಪರೇಶನ್ ಆಗಿ ಸೊಂಟದಲ್ಲಿ ಬಲಹೀನವಾಗಿದ್ದು ನಡೆದಾಡಲು ಕಷ್ಟವಾಗಿದ್ದು ಅಲ್ಲದೆ ಮೂತ್ರ ತೊಂದರೆ ಕೂಡ ಇದ್ದು ಇದೇ ವಿಚಾರದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 08/01/2014 ರಂದು ಬೆಳಿಗ್ಗೆ 09:00 ಗಂಟೆಯಿಂದ 10:15 ಗಂಟೆ ಮದ್ಯೆ ಅವಧಿಯಲ್ಲಿ ತನ್ನ ಮನೆಯ ಬಾವಿಯ ರಾಟೆಗೆ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮಾಲತಿ ನಾಯ್ಕ ರವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 01/14 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮೊಳಕಾಲ್ಮೂರು : ಮೂರು ಎತ್ತುಗಳ ಕಳವು
ಮೂರು ಎತ್ತುಗಳ ಕಳವು : ಮೊಳಕಾಲ್ಮೂರು, ಜನವರಿ 08 : ತೋಟದ ಮನೆಯ ಮುಂಭಾಗ ಕಟ್ಟಿ ಹಾಕಿದ್ದ ನಾಲ್ಕು ಎತ್ತುಗಳಲ್ಲಿ ಮೂರು ಎತ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ತಾಲ್ಲೂಕಿನ ತುಮಕೂರ್ಲಹಳ್ಳಿ ಗ್ರಾಮದ ಎಸ್‍ಹೆಚ್-19 ರಸ್ತೆ ಪಕ್ಕದ ತೋಟವೊಂದರಲ್ಲಿ ನಿನ್ನೆ ಬೆಳಿಗ್ಗೆ ಮಧ್ಯದ ಅವಧಿಯಲ್ಲಿ ನಡೆದಿದೆ.
ಗ್ರಾಮದ ತಿಪ್ಪೇಸ್ವಾಮಿ ಎಂಬುವವರು ತಮ್ಮ ನಾಲ್ಕು ಎತ್ತುಗಳನ್ನು ಮೊನ್ನೆ ರಾತ್ರಿ ತೋಟದ ಮನೆಯ ಮುಂಭಾಗ ಕಟ್ಟಿ ಹಾಕಿ ಮಲಗಿಕೊಂಡಿದ್ದು, ನಂತರ ಬೆಳಿಗ್ಗೆ ಎದ್ದು ನೋಡಿದಾಗ ಯಾರೋಕಳ್ಳರು ಮೂರು ಎತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅವುಗಳ ಬೆಲೆ ಸುಮಾರು 40,000/- ರೂಪಾಯಿಗಳು, ಎತ್ತುಗಳನ್ನು ಎಲ್ಲಾ ಕಡೆ ಹುಡುಕಾಡಿ ಈ ದಿನ ದೂರು ನೀಡಿದ ಮೇರೆಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ದೊಡ್ಡಪೇಟೆ ಅಸ್ವಾಭಾವಿಕ ಸಾವು ಪ್ರಕರಣ
ಮೃತ ರಾಮರಾವ್ 77 ವರ್ಷ ನವರತ್ನ ಲಾಡ್ಜ್ ನಲ್ಲಿ ಬಾಡಿಗೆಗೆ ರೊಂ ಪಡೆದಿದ್ದು ಹೃದಯಘಾತದಿಂದ ಮೃತಪಟ್ಟಿರಬಹುದೆಂದು ಪಿರ್ಯಾಧಿದಾರರಾದ ವಿಶ್ವನಾಥ್ ಮ್ಯಾನೇಜರ್ ನವರತ್ನ ಲಾಡ್ಜ್ ಶಿವಮೊಗ್ಗ ವಾಸ ಚಿಕ್ಕಮಗಳೂರು ರವರು ದೂರು ನೀಡಿರುತ್ತಾರೆ












Click it and Unblock the Notifications