• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡೆ ವಿರುದ್ಧ ಗುಟುರು ಹಾಕಿದ ಸಿದ್ದರಾಮಯ್ಯ!

|

ಬೆಂಗಳೂರು, ಮೇ 12: ''ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿದೆ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗುಡುಗಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಜಂಟಿ ಮಾಧ್ಯಮಗೋಷ್ಠಿ ನಡೆಸಿದರು. ಈ ವೇಳೆ ರೋಗದ ವಿಚಾರದಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!

ತಬ್ಲಿಘಿಗಳಿಂದ ರೋಗ ಜಾಸ್ತಿ ಆಗಿದೆ ಎನ್ನುತ್ತಿದ್ದಾರೆ. ಹಾಗಾದರೆ, ಅಮೇರಿಕಾ, ಇಟಲಿ, ಸ್ಪೇನ್ ನಲ್ಲಿ ಯಾವ ತಬ್ಲಿಘಿಗಳಿದ್ದರು.? ಅಲ್ಲೆಲ್ಲಾ ರೋಗ ಹೇಗೆ ಹೆಚ್ಚಾಯ್ತು.? ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಎರಡೂ ಸರ್ಕಾರ ವಿಫಲ

''ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ‌. ಜನವರಿ 30ರಂದು ಕೇರಳದಲ್ಲಿ ಮೊದಲು ಸೋಂಕು ಪತ್ತೆಯಾಯ್ತು. ಎರಡು ತಿಂಗಳಾದ ಮೇಲೆ ಮಾರ್ಚ್ 24ರಂದು ಲಾಕ್ ಡೌನ್ ಘೋಷಿಸಲಾಯ್ತು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯವಿತ್ತು. ಮೊದಲೇ ಅಂತಾರಾಷ್ಟ್ರೀಯ ವಿಮಾನಯಾನ ಹಾಗೂ ದೇಸಿ ವಿಮಾನಯಾನ ಸಂಪೂರ್ಣ ಬಂದ್ ಮಾಡಿದ್ದಿದ್ದರೆ ಈ ರೋಗ ಹರಡುವುದನ್ನು ತಡೆಗಟ್ಟಲು ಸಾಧ್ಯವಿತ್ತು'' - ಸಿದ್ದರಾಮಯ್ಯ

ರಾಜಕೀಯ ಪ್ರೇರಿತ ಹೇಳಿಕೆ

''ರೋಗದ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆ. ತಬ್ಲಿಘಿಗಳಿಂದ ರೋಗ ಜಾಸ್ತಿ ಆಯ್ತು ಅಂತ ಹೇಳ್ತಿದ್ದಾರೆ. ಹಾಗಾದರೆ ಇಟಲಿ, ಅಮೇರಿಕಾ, ಸ್ಪೇನ್ ನಲ್ಲಿ ಯಾವ ತಬ್ಲಿಘಿಗಳಿದ್ದರು.? ಅಲ್ಲೆಲ್ಲಾ ರೋಗ ಹೇಗೆ ಹೆಚ್ಚಾಯ್ತು.? ರೋಗಕ್ಕೆ ರಾಜಕೀಯ ಬಣ್ಣ ಕೊಡುತ್ತಿರುವುದು ಆರ್.ಎಸ್.ಎಸ್ ನವರ ಹುನ್ನಾರ. ತಬ್ಲಿಘಿಗಳು ಸಮಾವೇಶ ಮಾಡಲು ಅನುಮತಿ ಕೊಟ್ಟಿದ್ದು ಯಾರು? ಇದು ಕೇಂದ್ರ ಸರ್ಕಾರದ್ದೇ ತಪ್ಪು'' - ಸಿದ್ದರಾಮಯ್ಯ

ಕೊರೊನಾ ವೈರಸ್ ಲಸಿಕೆಯ ಡೇಟಾ ಹ್ಯಾಕ್: ಚೀನಾ ವಿರುದ್ಧ ಯುಎಸ್ ವಾರ್ನಿಂಗ್

ಪೂರ್ವ ಸಿದ್ಧತೆ ಇಲ್ಲದೆ ಲಾಕ್ ಡೌನ್

''ಮಾರ್ಚ್ 24 ರಂದು ಲಾಕ್ ಡೌನ್ ಮಾಡಿದರು. ಲಾಕ್ ಡೌನ್ ಮುನ್ನ ಪೂರ್ವ ಸಿದ್ಧತೆ ಮಾಡಿಕೊಳ್ಳಲಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಜನರಿಗೆ ತಿಳಿಸಲೂ ಇಲ್ಲ. ಏಕಾಏಕಿ ಲಾಕ್ ಡೌನ್ ಘೋಷಿಸಿದ್ರಿಂದ, ವಲಸೆ ಕಾರ್ಮಿಕರು ಇಡೀ ದೇಶದಲ್ಲಿ ಪರದಾಡುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಫ್ರೀಯಾಗಿ ರೈಲ್ವೆ ಪ್ರಯಾಣ ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕು'' - ಸಿದ್ದರಾಮಯ್ಯ

ಪಿಎಂ ಕೇರ್ಸ್ ಫಂಡ್ ಗೆ ಕರ್ನಾಟಕದಿಂದ ಹೋಗಿರುವುದು ಎಷ್ಟು ಹಣ.?

''ಪಿಎಂ ಕೇರ್ಸ್ ಫಂಡ್ ಗೆ 35 ಸಾವಿರ ಕೋಟಿ ರೂಪಾಯಿ ಬಂದಿದೆ. ಕರ್ನಾಟಕದಿಂದಲೇ 3 ಸಾವಿರ ಕೋಟಿ ಹೋಗಿದೆ. ಇದನ್ನ ನರೇಂದ್ರ ಮೋದಿ ಅವರು ಇಲ್ಲಿಗೆ ಕೊಡಲು ಆಗಲ್ವಾ.? ಬರೀ ದೀಪ ಹಚ್ಚಿ, ಚಪ್ಪಾಳೆ ತಟ್ಟಿ, ಜಾಗಟೆ ಹೊಡೆಯಿರಿ ಅಂತಾರೆ ನರೇಂದ್ರ ಮೋದಿ. ಅದರಿಂದ ಜನರ ಕಷ್ಟ ಪರಿಹಾರ ಆಗುತ್ತಾ.?'' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

ಕ್ರಮ ಕೈಗೊಳ್ಳದ ಸಿಎಂ

ಕ್ರಮ ಕೈಗೊಳ್ಳದ ಸಿಎಂ

''ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಲ್ಲಾ ಪಕ್ಷಗಳು ಸೇರಿ ಹಕ್ಕೊತ್ತಾಯಗಳನ್ನು ನೀಡಿದ್ವಿ. ಆದರೆ, ಅವರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕಷ್ಟದಲ್ಲಿ ಇರುವ ಜನರಿಗೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿದೆ. ರೈತರು ತಮ್ಮ ಬೆಳೆಗಳನ್ನು ಬೀದಿಗೆ ಸುರಿಯುತ್ತಿದ್ದಾರೆ. ಎಪಿಎಂಸಿ, ಹಾಪ್ ಕಾಮ್ಸ್ ಮೂಲಕ ಕೊಂಡುಕೊಂಡು ಜನರಿಗೆ ತಲುಪಿಸಿ ಅಂತ ಹೇಳಿದ್ವಿ. ಆದರೆ, ಆ ಬಗ್ಗೆ ಸರ್ಕಾರ ಏನೂ ಮಾಡಿಲ್ಲ'' - ಸಿದ್ದರಾಮಯ್ಯ

ಹೋರಾಟದ ಹಾದಿ ಹಿಡಿಯುತ್ತೇವೆ

ಹೋರಾಟದ ಹಾದಿ ಹಿಡಿಯುತ್ತೇವೆ

''ನಾನಂತೂ ದೀಪ ಹಚ್ಚಲಿಲ್ಲ. ದೀಪ ಹಚ್ಚುವುದರಿಂದ ಕಾಯಿಲೆ ಹೋಗುತ್ತಾ.? ಅದರ ಬದಲು ಬಡವರಿಗೆ ಹಣ ಕೊಡ್ರಯ್ಯಾ.. ಬಡವರ ಜೀವನ ಉಳಿಸಿ.. ಕಾರ್ಮಿಕರ ಮತ್ತು ರೈತರನ್ನು ರಕ್ಷಣೆ ಮಾಡಿ. ಸರ್ಕಾರ ಬೇಜವಾಬ್ದಾರಿತನ ಬಿಟ್ಟು, ಕಾರ್ಮಿಕರು, ರೈತರು, ಬಡವರ ರಕ್ಷಣೆ ಮಾಡಬೇಕು. ಇಲ್ಲಾ ಅಂದ್ರೆ, ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯುತ್ತೇವೆ'' ಎಂದಿದ್ದಾರೆ ಸಿದ್ದರಾಮಯ್ಯ.

English summary
State and Central Government have failed to control Covid-19 says Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X