Brahmanda Guruji: ಸ್ಟಾರ್ ನಟರ ಸಾವು, ಡಿಕೆಶಿಗೆ ಉನ್ನತ ಸ್ಥಾನ, ಮೋದಿ ರಾಜೀನಾಮೆ: ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ

ಬೆಂಗಳೂರು, ಜನವರಿ 20: 2025 ರ ವರ್ಷ ಆರಂಭದಲ್ಲೇ ಗಂಡಾಂತರ ಕಾದಿದೆ ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ. ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಪಾದ ಸ್ಪರ್ಶ ಮಾಡದ ಹಿನ್ನೆಲೆಯಲ್ಲಿ ದೇಶ ಮತ್ತು ರಾಜ್ಯಕ್ಕೆ ಭಾರೀ ಗಂಡಾಂತರ ಕಾದಿದೆ ಎಂದು ನರೇಂದ್ರ ಶರ್ಮ ಅಲಿಯಾಸ್ ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಈ ಕುರಿತು 2025ನೇ ವರ್ಷದ ಬಗ್ಗೆ ವಿಶ್ಲೇಷಣೆ ಮಾಡಿದ ಬ್ರಹ್ಮಾಂಡ ಗುರೂಜಿ, 2025ರಿಂದ 2027ರವರೆಗೆ ದೇಶಾದ್ಯಾಂತ ಹಾಗೂ ಜಾಗತಿಕ ಮಟ್ಟದಲ್ಲೇ ಭಾರಿ ಬದಲಾವಣೆಗಳು ನಡೆಯಲಿವೆ ಎಂದು ಸೂಚಿಸಿದ್ದಾರೆ. 'ಈ ಬಾರಿ ಸೂರ್ಯ ರಶ್ಮಿ ಗಂಗಾಧರೇಶ್ವರನನ್ನು ಸ್ಪರ್ಶಿಸಲಿಲ್ಲ, ಕರೋನಾ ವ್ಯವಸ್ಥೆಯ ಸಮಯದಲ್ಲೂ ಈ ರಶ್ಮಿ ಸ್ಪರ್ಶವಾಗಿರಲಿಲ್ಲ. ಈ ಬಾರಿಯೂ ಈಶ್ವರನನ್ನು ಸೋಕೋದು ಇರಲಿಲ್ಲ, ಇದು ಗಂಡಾಂತರದ ಸೂಚನೆಯಾಗಿದೆ. ಮೋಡ ಬಂದಿದ್ದರೂ ಕೂಡ ಈಶ್ವರನನ್ನು ಸ್ಪರ್ಶಿಸಲಿಲ್ಲ ಎಂದು ಹೇಳುವುದು ತಪ್ಪು. ಗಂಡಾಂತರ ಬಹುಶಃ ಇದೇ ಸಮಯದಲ್ಲಿ ಆಗಬಹುದು ಎಂದು ತಿಳಿಸಿದ್ದಾರೆ.

Star Actress Death Brahmanda Guruji Has Made A Surprising Prediction

ಇನ್ನೂ 2025ನೇ ಸಾಲಿನಲ್ಲಿ ಇಬ್ಬರು ಖ್ಯಾತ ನಟಿಯರು, ಒಬ್ಬ ಖ್ಯಾತ ನಟನ ಸಾವಾಗಲಿದೆ. ಈ ವರ್ಷದಲ್ಲಿ ಕರ್ನಾಟಕದ 2 ಸ್ಟಾರ್ ನಟಿಯರು ಹಾಗೂ 1 ಸ್ಟಾರ್ ನಟರಿಗೆ ಮ್ಯತ್ಯು ಗಂಡಾಂತರವಿದೆ. ಈ ಹಿಂದೆ ನಾನು ತಿರುಪತಿಯಲ್ಲಿ ಕಾಲ್ತುಳಿತದ ಬಗ್ಗೆ ಭವಿಷ್ಯ ಹೇಳಿದ್ದೇನೆ, ಅದು ಈಗ ನಿಜವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ 7 ದೇಶಗಳು ನಶಿಸಿ ಹೋಗಲಿವೆ. ಇನ್ನೊಂದೆಡೆ ಸುನಾಮಿ ಉಂಟಾಗುವ ಮೂಲಕ ಭಾರೀ ಗಂಡಾಂತರಗಳು ಸಂಭವಿಸಲಿದೆ ಎಂದು ನರೇಂದ್ರ ಶರ್ಮ ಅಲಿಯಾಸ್ ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.

ಇನ್ನೂ ರಾಜ್ಯ ರಾಜಕೀಯದಲ್ಲಿ ಆಗುವ ಬದಲಾವಣೆ ಕುರಿತು ಬ್ರಹ್ಮಾಂಡ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ. ಮಿಥುನ ರಾಶಿಯಲ್ಲಿ ಹೆಸರಾಂತ ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಅವರ ಸಂಬಂಧಗಳು ಬಹಿರಂಗವಾಗಲಿವೆ. ಡೈವರ್ಸ್ ಕೇಸ್ ಗಳ ಸಂಖ್ಯೆ ಹೆಚ್ಚಾಗಲಿವೆ. . ಮಾರ್ಚ್ ತಿಂಗಳಲ್ಲಿ ಶನಿ, ಏಪ್ರಿಲ್‌ನಲ್ಲಿ ಗುರು, ಮೇ ತಿಂಗಳಲ್ಲಿ ರಾಹು-ಕೇತು ಗ್ರಹಗಳು ಬದಲಾಗುವುದರಿಂದ, ದೊಡ್ಡ ಗ್ರಹಗಳ ಪ್ರಭಾವದಿಂದ 2025 ರಿಂದ 2027 ರವರೆಗೆ ರಾಜಕೀಯ ಸನ್ನಿವೇಶದಲ್ಲಿ ಮಹತ್ವಪೂರ್ಣ ತಿರುವುಗಳನ್ನು ಕಾಣಬಹುದು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಅಲ್ಲದೇ 2025 ರಿಂದ 2027 ರವರೆಗೆ ಡಿ ಕೆ ಶಿವಕುಮಾರ್ ಅವರಿಗೆ ಹೊಸ ಅವಕಾಶಗಳು ಬರಲಿವೆ. ಮುಂದಿನ ಮೂರು ವರ್ಷಗಳಲ್ಲಿ ಮೂರು ಸಿಎಂ ಅಥವಾ ಮೂರು ಗವರ್ನರ್‌ಗಳು ನೇಮಕವಾಗುವ ಮೂಲಕ ರಾಜ್ಯವು ಮೂರು ಭಾಗವಾಗುವ ಸಾಧ್ಯತೆ ಇದೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ರಧಾನಿ ನರೇಂದ್ರ ಮೋದಿ ರಾಜಿನಾಮೆ ನೀಡುವ ಸಾಧ್ಯತೆ ಹೆಚ್ಚಿನದಾಗಿದೆ. ಶೇ.80ರಷ್ಟು ಮೋದಿ ರಾಜಿನಾಮೆ ನೀಡುವ ಭವಿಷ್ಯವು ಗ್ಯಾರಂಟಿಯಾಗಿದೆ. ಮುಂದಿನ 2 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಲಿದ್ದು, 11 ದೇಶಗಳು ಸೇರಿ ಭಾರತದ ಮೇಲೆ ಯುದ್ಧ ಮಾಡಲಿವೆ ಎಂದು ನರೇಂದ್ರ ಶರ್ಮ ಅಲಿಯಾಸ್ ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+