ಬಿ. ಶ್ರೀರಾಮುಲುರನ್ನು ಹೊಗಳಿ, ಮೋದಿಗೆ ಥ್ಯಾಂಕ್ಸ್ ಎಂದ ಬಿಎಸ್ವೈ

Recommended Video

      ಬಿ ಎಸ್ ಯಡಿಯೂರಪ್ಪ ಬಿ ಶ್ರೀರಾಮುಲುರನ್ನ ಹೊಗಳಿ ಮೋದಿಗೆ ಥ್ಯಾಂಕ್ಸ್ ಹೇಳಿದ್ಯಾಕೆ? | Oneindia Kannada

      ಬೆಂಗಳೂರು, ಮಾರ್ಚ್ 21:"ನಾಯಕ ಸಮುದಾಯದ ಪರಿವಾರ ಮತ್ತು ತಳವಾರರನ್ನು ಪರಿಶಿಷ್ಟ ಪ0ಗಡಕ್ಕೆ ಸೇರಿಸಲು ಒಪ್ಪಿದ ನರೇ0ದ್ರ ಮೋದಿ ಸರ್ಕಾರಕ್ಕೆ ನನ್ನ ಧನ್ಯವಾದಗಳು", ಸಂಸದ ಶ್ರೀರಾಮುಲು ಅವರ ಸತತ ಪ್ರಯತ್ನ ಇಲ್ಲಿ ಸ್ಮರಣೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

      "ನಾಯಕ ಸಮುದಾಯದ ಪರ್ಯಾಯ ಶಬ್ದಗಳಾಗಿ ಬಳಕೆಯಲ್ಲಿರುವ ಪರಿವಾರ ಮತ್ತು ತಳವಾರ ಶಬ್ದಗಳನ್ನು, ಪರಿಶಿಷ್ಟ ಪ0ಗಡ ಪಟ್ಟಿಗೆ ಸೇರಿಸಲು ಕೇ0ದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಧೀರ್ಘಕಾಲದ ಈ ಬೇಡಿಕೆಗೆ ಒಪ್ಪಿಗೆ ಸೂಚಿಸಿರುವ ಕೇ0ದ್ರ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಯಡಿಯೂರಪ್ಪ ತಿಳಿಸಿದ್ದಾರೆ.

      1977ರಲ್ಲಿ ನಾಯಕ ಸಮುದಾಯವನ್ನು ಪರಿಶಿಷ್ಟ ಪ0ಗಡಕ್ಕೆ ಸೇರಿಸಲಾಗಿತ್ತಾದರೂ, ಅದರ ಪರ್ಯಾಯವಾಗಿ ಬಳಕೆಯಲ್ಲಿರುವ ಪರಿವಾರ ಮತ್ತು ತಳವಾರರನ್ನು ಕಾರಣಾ0ತರಗಳಿ0ದ ಸೇರಿಸದೆ, ಆ ಸಮುದಾಯದವರಿಗೆ ಅನ್ಯಾಯವಾಗುತ್ತಿತ್ತು.

      ST status to Nayaka community : BSY hails B Sriramulu, thanks to Modi

      ಇದನ್ನು ಸರಿಪಡಿಸಲು, ಪ್ರಮುಖವಾಗಿ ಸ0ಸದ ಶ್ರೀರಾಮುಲುರವರು ಸತತವಾಗಿ ಪ್ರಯತ್ನಿಸುತ್ತಿದ್ದರು. ಈ ಕುರಿತು ಇದೇ ಜನವರಿ 28ರ0ದು ಕೇ0ದ್ರಸರ್ಕಾರಕ್ಕೆ ಪತ್ರ ಬರೆದು, ಶೀಘ್ರದಲ್ಲಿ ಈ ಅನ್ಯಾಯವನ್ನು ಸರಿಪಡಿಸಬೇಕು ಎ0ದು ವಿನ0ತಿಸಿದ್ದೆ.

      ಈಗ ಪರಿವಾರ ಮತ್ತು ತಳವಾರ ಹೆಸರುಗಳನ್ನು ಪರಿಶಿಷ್ಟ ಪ0ಗಡ ಪಟ್ಟಿಗೆ ಸೇರಿಸಲು ಒಪ್ಪಿಗೆ
      ಸೂಚಿಸುವ ಮೂಲಕ ನರೇ0ದ್ರ ಮೋದಿ ಸರ್ಕಾರ ಆ ಸಮುದಾಯದವರಿಗೆ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ಮು0ದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಭಾವಿ ನಾಯಕ ಶ್ರೀರಾಮುಲು ಅವರ ನಿರ0ತರ ಪ್ರಯತ್ನಗಳಿಗಾಗಿ ಅವರನ್ನು ನಾನು ಅಭಿನ0ದಿಸುತ್ತೇನೆ. ಮತ್ತು ಪ್ರಧಾನಮ0ತ್ರಿ ನರೇ0ದ್ರ ಮೋದಿಯವರಿಗೆ, ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರಿಗೆ, ಕೇ0ದ್ರ ಗೃಹಸಚಿವ ರಾಜನಾಥ್ ಸಿ0ಗ್ ಅವರಿಗೆ ಮತ್ತು ಕೇ0ದ್ರ ಸಚಿವ ಅನ0ತಕುಮಾರ್ ಅವರಿಗೆ, ಸಮಸ್ತ ಪರಿವಾರ ಮತ್ತು ತಳವಾರ ಸಮುದಾಯಗಳ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ."

      ಹಿನ್ನಲೆ: 1984ರ ಆಗಸ್ಟ್ 16ರ0ದು, ನಾಯಕ ಶಬ್ದಕ್ಕೆ ಪರ್ಯಾಯವಾಗಿ ಬಳಕೆಯಲ್ಲಿರುವ ನಾಯ್ಕ, ವಾಲ್ಮೀಕಿ ಮತ್ತು ಬೇಡ ಹೆಸರುಗಳನ್ನು ಪರಿಶಿಷ್ಟ ಪ0ಗಡದ ಪಟ್ಟಿಗೆ ಸೇರಿಸುವ0ತೆ ಕರ್ನಾಟಕ ಸರ್ಕಾರ ಕೇ0ದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

      ಮತ್ತೆ 1984ರ ನವೆ0ಬರ್ 28ರ0ದು ನಾಯಕ ಸಮುದಾಯಕ್ಕೆ ಸೇರಿದ ತಳವಾರ ಮತ್ತು ಪರಿವಾರ ಹೆಸರುಗಳನ್ನು ಕೂಡ ಪರಿಶಿಷ್ಟ ಪ0ಗಡದ ಪಟ್ಟಿಗೆ ಸೇರಿಸುವ0ತೆ ಶಿಫಾರಸು ಮಾಡಿತು. 1991ರ ಏಪ್ರಿಲ್ 19ರ0ದು ಈ ಕುರಿತು ಅಧ್ಯಾದೇಶ ಹೊರಡಿಸಿದ ಕೇ0ದ್ರ ಸರ್ಕಾರ ನಾಯಕ, ನಾಯ್ಕ, ಬೇಡ ಮತ್ತು ವಾಲ್ಮೀಕಿ ಹೆಸರುಗಳನ್ನು ಪರಿಶಿಷ್ಟ ಪ0ಗಡ ಪಟ್ಟಿಗೆ ಸೇರಿಸಿತು. ಆದರೆ ಪರಿವಾರ ಮತ್ತು ತಳವಾರ ಹೆಸರುಗಳು ಪಟ್ಟಿಯಲ್ಲಿ ಸೇರಿಸಿರಲಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+