SSLC Exam Results: ಕರ್ನಾಟಕದಲ್ಲಿ ಒಟ್ಟು ಪಾಸಾದವರು, ಫಲಿತಾಂಶ ಕುಸಿತ, ಅಂಕಿ-ಸಂಖ್ಯೆ ವಿವರ

ಬೆಂಗಳೂರು, ಮೇ 09: ಕರ್ನಾಟಕದಲ್ಲಿ ಬಹುನಿರೀಕ್ಷೆಯ ಹತ್ತನೇ ತರಗತಿ (SSLC) ಪರೀಕ್ಷೆಯ ಫಲಿತಾಂಶ ಗುರುವಾರ ಬಿಡುಗಡೆ ಆಗಿದೆ. ರಾಜ್ಯದಲ್ಲಿ ಈ ಬಾರಿ ಒಟ್ಟು ಶೇಕಡಾ 73.40 ರಷ್ಟು ವಿದ್ಯಾರ್ಥಿಗಳು ಈ ಭಾರಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಿಸಿದ ಫಲಿತಾಂಶದ ವರದಿ ನೋಡಿದರೆ, ತೇರ್ಗಡೆಯಾದವರ ಜೊತೆ ಫಲಿತಾಂಶ ಕುಸಿತದ ಸಂಖ್ಯೆ ಸಹ ತಿಳಿಯುತ್ತಿದೆ. ಕಳೆದ 2023ಕ್ಕೆ ಹೋಲಿಕೆ ಮಾಡಿದರೆ, ಪ್ರಸಕ್ತ ವರ್ಷ ಶೇಕಡಾ 10.49 ಅಂಕಗಳು ಇಳಿಕೆ ಕಂಡಿದೆ.

SSLC Results Karnataka Total 73 40 Percentage Students Clear SSLC Exam 10 Drop compared 2023

ರಾಜ್ಯದಲ್ಲಿ ಈ ವರ್ಷ ಶೇಕಡಾ 73.40 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಕಳೆದ ಸಾಲಿನಲ್ಲಿ (2022-23) ಉತ್ತೀರ್ಣ ಆದವರ ಸಂಖ್ಯೆ ಶೇಕಡಾ 83.89 ರಷ್ಟಿದೆ. ಈ ಅಂಕಿ ಸಂಖ್ಯೆಗಳೂ ಈ ವರ್ಷ ಫಲಿತಾಂಶದಲ್ಲಿ ಇಳಿಕೆ ಆಗಿರುವುದನ್ನು ತಿಳಿಸುತ್ತವೆ.

ಪರೀಕ್ಷೆ ಬರೆದವರು 8.59 ಲಕ್ಷ ವಿದ್ಯಾರ್ಥಿಗಳು

ರಾಜ್ಯದಲ್ಲಿ ಈ ಭಾರಿ ಒಟ್ಟು 8,59,967 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 6,31,204 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಾಹಿತಿ ನೀಡಿದೆ.

07 ವಿದ್ಯಾರ್ಥಿಗಳು ರಾಜ್ಯಕ್ಕೆ ಎರಡನೇ ಸ್ಥಾನ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿನಿ 'ಅಂಕಿತಾ ಬಸಪ್ಪ ಕೊಣ್ಣೂರ' (Ankitha Basappa konnur) ಎಲ್ಲ 625 ಅಂಕಗಳಿಗೆ 625 ಅಂಕ ಪಡೆದು ಇಡೀ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಎಸ್‌ಎಸ್‌ಎಲ್‌ಸಿ ಯಲ್ಲಿ ಅವರು ಸಾಧನೆ ಮಾಡಿದ್ದಾರೆ. ಅವರ ನಂತರ 07 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿದ್ದಾರೆ.

ಇನ್ನೂ ಕರಾವಳಿ ಭಾಗದ ಜಿಲ್ಲೆಯಲ್ಲಿ ಒಂದಾದ ಉಡುಪಿಯಲ್ಲಿ ಶೇಕಡಾ 94 ರಷ್ಟು ಫಲಿತಾಂಶ ಬರುವ ಮೂಲಕ ಈ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಕ್ರಮವಾಗಿ ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳು ಇವೆ.

ಈ ಮೇಲಿನ ಅಂಕಿಸಂಖ್ಯೆ, ಫಲಿತಾಂಶದ ಪೂರ್ಣ ಮಾಹಿತಿ ಬಗ್ಗೆ ಪರಿಶೀಲಿಸಲು ತಪ್ಪದೇ ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್ http://kseab.karnataka.gov.in ಗೆ ಭೇಟಿ ಕೊಡಬಹದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+