ಪ್ಲೀಸ್‌ ಸರ್‌.. ನನ್ನ ಪಾಸ್‌ ಮಾಡಿ, ಇಲ್ಲದಿದ್ರೆ ಹುಡುಗಿ ಕೈ ಕೊಡ್ತಾಳೆ; ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಬೇಡಿಕೆ

SSLC Results 2025: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ 21ರಿಂದ ಏಪ್ರಿಲ್‌ 4ರವರೆಗೆ ನಡೆದಿದ್ದವು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏಪ್ರಿಲ್‌ 15ರಿಂದ ಆರಂಭವಾಗಿದ್ದು, ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಬರೆದಿರುವ ಉತ್ತರ ಮಾತ್ರ ಆಶ್ಚರ್ಯ ಹುಟ್ಟುಹಾಕಿದೆ. ಇದು ಮೌಲ್ಯಮಾಪನದ ವೇಳೆ ಬಹಿರಂಗವಾಗಿದೆ. ಹಾಗಾದ್ರೆ ಅದರಲ್ಲಿ ಏನು ಬರೆಯಲಾಗಿದೆ ಹಾಗೂ ಯಾವ ಜಿಲ್ಲೆಯಲ್ಲಿ ನಡೆದಿದೆ ಎಂದು ಇಲ್ಲಿ ತಿಳಿಯಿರಿ.

ಏಪ್ರಿಲ್‌ 4ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಗಿದಿದ್ದು, ಏಪ್ರಿಲ್‌ 15ರಿಂದ ಮೌಲ್ಯಮಾಪನ ಆರಂಭವಾಗಿದೆ. ಆಯಾ ಜಿಲ್ಲಾವಾರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಈ ನಡುವೆಯೇ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ವಿಚಿತ್ರ ಉತ್ತರವೊಂದನ್ನು ಬರೆದು ಇಡೀ ರಾಜ್ಯದ ಗಮನ ಸೆಳೆದಿದ್ದಾನೆ.

SSLC Results 2025 A Student Writes Pass Me for girlfriend in Exam answer Paper

ನಾನು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣ ಆದರೆ ಮಾತ್ರ ಲವ್ ಮಾಡುತ್ತೇನೆ ಅಂತಾ ನನ್ ಹುಡುಗಿ ಹೇಳಿದ್ದಾಳೆ. ದಯವಿಟ್ಟು ನನ್ನ ಪಾಸ್ ಮಾಡಿಬಿಡಿ ಎಂದು ಬರೆಯುವ ಮೂಲಕ ಉತ್ತರ ಪತ್ರಿಕೆಯಲ್ಲಿ 500 ರೂಪಾಯಿ ಇಟ್ಟಿರುವುದು ಮೌಲ್ಯಪಾಪಮನದ ವೇಳೆ ಬೆಳಕಿದೆ ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಎಸ್ಎಸ್‌ಎಲ್‌ಸಿ ಪರೀಕ್ಷಾ ಮೌಲ್ಯಮಾಪನದ ವೇಳೆ ಈ ವಿಚಿತ್ರ ಉತ್ತರ ಪತ್ರಿಕೆ ಪತ್ತೆಯಾಗಿದೆ. ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ನನ್ನನ್ನು ಉತ್ತೀರ್ಣ ಮಾಡುವಂತೆ ಬರೆದಿದ್ದಾನೆ. ಅಷ್ಟೇ ಅಲ್ಲದೆ, 500 ರೂಪಾಯಿ ಇಡುವ ಮೂಲಕ ಬೇಡಿಕೊಂಡಿರುವುದು ಬೆಳಕಿದೆ ಬಂದಿದೆ.

ನನ್ನ ಗರ್ಲ್ಫ್ರೆಂಡ್, ನೀನು ಪಾಸ್ ಆದರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಿದ್ದಾಳೆ. ಆದ್ದರಿಂದ ದಯವಿಟ್ಟು ನನ್ನನ್ನು ಪಾಸ್ ಮಾಡಿ. ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ ಎಂದು ಬರೆದು, ಅದರ ಜೊತೆಗೆ 500 ರೂಪಾಯಿ ನೋಟು ಇಟ್ಟು ಮನವಿ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಈ ಹಣ ಇಟ್ಟುಕೊಂಡು ನೀವು ಚಹಾ ಕುಡಿಯಿರಿ ಸರ್. ನನ್ನ ಪಾಸ್ ಮಾಡಿ, ನೀವು ಪಾಸ್ ಮಾಡದಿದ್ರೆ ನನ್ನಪ್ಪ, ಅಮ್ಮ ನನ್ನನ್ನು ಕಾಲೇಜಿಗೆ ಕಳಿಸುವುದಿಲ್ಲ ಅಂತಲೂ ಬರೆದು ಗಮನ ಸೆಳೆದಿದ್ದಾನೆ.

ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಪ್ರತಿ ವರ್ಷವೂ ಸಹ ಮೌಲ್ಯ ಮಾಪನದ ವೇಳೆ ಇಂತಹ ವಿಚಿತ್ರ ಬೇಡಿಕೆಗಳನ್ನು ವಿದ್ಯಾರ್ಥಿಗಳು ಇಟ್ಟಿರುವುದು ಮೌಲ್ಯಮಾಪನದ ವೇಳೆ ಬಟಾಬಯಲಾಗಿರುವ ಘಟನೆಗಳು ನಡೆದಿವೆ. ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಗೆ ಸಂಬಂಧಿಸಿದ ಉತ್ತರವೂ ಇರುವುದಿಲ್ಲ. ಬದಲಾಗಿ ಬರೀ ಬೇಡಿಕೆಗಳನ್ನೇ ಉತ್ತರ ಪ್ರತಿಕೆಯಲ್ಲಿ ಉತ್ತರದ ರೀತಿ ತುಂಬಿಸಿರುವ ಉದಾಹರಣೆಗಳಿವೆ.

ಫಲಿತಾಂಶ ಪ್ರಕಟದ ಅಪ್ಡೇಟ್‌: ಈ ಬಾರಿ 8,96,447 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 15,881 ಶಾಲೆಗಳ ಈ ವಿದ್ಯಾರ್ಥಿಗಳು 2,818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಇನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಕಳೆದ ವರ್ಷದಂತೆಯೇ ಈ ಬಾರಿಯೂ ಮೇ 2ನೇ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಫಲಿತಾಂಶ ಪ್ರಕಟದ ನಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಮಂಡಳಿಯ ಅರ್ಜಿ ನಮೂನೆಯನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅಗತ್ಯ ಶುಲ್ಕದೊಂದಿಗೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+