SSLC Result: ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳೇ.. ದುಡುಕಬೇಡಿ.!-ಅವಕಾಶದ ದಾರಿ ಇಲ್ಲಿವೆ
SSLC Rusult: ಈಗಾಗಲೇ ರಾಜ್ಯದಲ್ಲಿ ಮೇ 09 ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಯಾಗಿದ್ದು, ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಜೂನ್ 07ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024-2 ಆರಂಭವಾಗಲಿದೆ. ಆದ್ದರಿಂದ ಫೇಲ್ ಆದ ವಿದ್ಯಾರ್ಥಿಗಳು ದುಡುಕಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳದೇ ಮುಂದಿನ ಪರೀಕ್ಷೆಗೆ ತಯಾರಾಗಿ.
ಇತ್ತಿಚೀಗಷ್ಟೇ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನ ಪಡೆದುಕೊಂಡಿದೆ. ಇತ್ತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹೊಸದುರ್ಗ ಕೊಬ್ಬರಿಪೇಟೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಾಲ್ಕು ವಿಷಯಗಳಲ್ಲಿ ವಿಧ್ಯಾರ್ಥಿನಿ ಫೇಲ್ ಆಗಿದ್ದರು. ಬಳಿಕ ಮಗಳು ಫೇಲ್ ಆದರೂ ಪೋಷಕರು ಆತ್ಮಸ್ಥೈರ್ಯ ತುಂಬಿದ್ದರು.
ಆದರೂ ಮನನೊಂದ ವಿಧ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಇನ್ನೂ ಘಟನಾ ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅದೇನೇ ಪರೀಕ್ಷೆಗಳು ಇರಲಿ ಹೆದರಿಸುತ್ತೇನೆ ಎನ್ನುವ ಧೈರ್ಯ ವಿದ್ಯಾರ್ಥಿಗಳಲ್ಲಿ ಬರಬೇಕು. ಅದರಲ್ಲೂ ಪರೀಕ್ಷೆಗಳಲದಲಿ ಫೇಲ್ ಆದ ವಿದ್ಯಾರ್ಥಿಗಳು ಎದೆಗುಂದದೇ ಮತ್ತೊಂದು ಅವಕಾಶವನ್ನು ಬಳಸಿಕೊಂಡು ಉತ್ತಮ ದಾರಿಯಲ್ಲಿ ಸಾಗುವ ಛಲವನ್ನು ಹೊಂದಿರಬೇಕು.
ಸಾಧಿಸುವ ಛಲವೊಂದೇ ತಲೆಯಲ್ಲಿ ಇರಬೇಕೇ ಹೊರತು, ಪರೀಕ್ಷೆಯಲ್ಲಿ ಫೇಲ್ ಆದೆನೆಂದು ಕೊರಗಬಾರದು. ಮುಂದಿನ ಸಾಧನೆಯ ದಾರಿಯನ್ನು ಕಂಡುಕೊಳ್ಳುವ ದೈರ್ಯದಲ್ಲಿ ಇರಬೇಕು. ಈ ಮೂಲಕ ಇನ್ನಿತರ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತಿರಬೇಕು ಎನ್ನುವುದೇ ನಮ್ಮ ಆಶಯವಾಗಿದೆ.
ಉದಾಹರಣಗೆ ಮಂಗಳೂರು ಜಿಲ್ಲೆಯಲ್ಲೊಬ್ಬ ವಿದ್ಯಾರ್ಥಿ ಜಸ್ಟ್ ಪಾಸ್ ಆಗಿದ್ದಕ್ಕೆ ಆತನ ಬ್ಯಾನರ್ ಕಟ್ಟಿ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ಈ ವಿದ್ಯಾರ್ಥಿ ಇನ್ನಿತರ ಕಡಿಮೆ ಅಂಕ ಪಡೆದ ಹಾಗೂ ಫೇಲ್ ಆದ ವಿದ್ಯಾರ್ಥಿಗಳಿಗೆ ಮಾದರಿ ಎಂದರೆ ತಪ್ಪಾಗಲಾರದು. ಅದೆಷ್ಟೇ ಅಂಕಗಳು ಬರಲಿ, ಫೇಲ್ ಆಗಿರಲಿ ನೀವು ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ನಿರ್ಧರಿಸಬೇಕಾಗುತ್ತದೆ ಹೊರತು, ಆತ್ಮಹತ್ಯೆಯ ದಾರಿಯನ್ನು ಹಿಡಿಯಬಾರದು ಎನ್ನುವುದೇ ಹಲವು ಸಾಧಕರು ಹೇಳುವ ಆದರ್ಶದ ಮಾತುಗಳಾಗಿವೆ.












Click it and Unblock the Notifications