ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭ, ವೇಳಾಪಟ್ಟಿ
ಬೆಂಗಳೂರು, ಮಾರ್ಚ್/ 30: ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದೆ. ಮಾರ್ಚ್ 30 ರಿಂದ ಪರೀಕ್ಷೆಗಳು ಆರಂಭವಾಗಿದ್ದು ಏಪ್ರಿಲ್ 13ರವರೆಗೆ ನಡೆಯಲಿವೆ.
ಸುಮಾರು 8 ಲಕ್ಷ ವಿದ್ಯಾರ್ಥಿಗಳು ಈ ಸಾರಿ ಪರೀಕ್ಷೆ ಬರೆಯಲಿದ್ದಾರೆ. ಸೆಕೆಂಡರಿ ಎಜುಕೇಶನ್ ಬೋರ್ಡ್ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಓದಿ ಅರ್ಥೈಸಿಕೊಳ್ಳಲು 15 ನಿಮಿಷಗಳ ಹೆಚ್ಚುವರಿ ಕಾಲಾವಕಾಶವನ್ನು ನೀಡಲಾಗುತ್ತಿದೆ. ಆದರೆ ಪುನಃ ಪರೀಕ್ಷೆ ಬರೆಯುತ್ತಿರುವವರು ಹಳೆ ಮಾದರಿಯಲ್ಲೇ ಉತ್ತರಿಸಬೇಕಾಗುತ್ತದೆ.[ದ್ವಿತೀಯ ಪಿಯು ವೇಳಾಪಟ್ಟಿ ನೋಡಿ]

ಎಸ್ ಎಲ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ
* ಮಾರ್ಚ್ 30 - ಪ್ರಥಮ ಭಾಷೆ
* ಏಪ್ರಿಲ್ 1 - ವಿಜ್ಞಾನ
* ಏಪ್ರಿಲ್ 4 - ಗಣಿತ
* ಏಪ್ರಿಲ್ 6 - ದ್ವಿತೀಯ ಭಾಷೆ
* ಏಪ್ರಿಲ್ 11- ಸಮಾಜ ವಿಜ್ಞಾನ
* ಏಪ್ರಿಲ್ 13 - ತೃತೀಯ ಭಾಷೆ
(ಎಲ್ಲ ಪರೀಕ್ಷೆಗಳು ಬೆಳಗ್ಗೆ 9.30ಕ್ಕೆ ಆರಂಭವಾಗುತ್ತವೆ)
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications