Karnataka SSLC Exam 2022: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ಹೈಕೋರ್ಟ್ ತೀರ್ಪು ಪಾಲಿಸಿದ ವಿದ್ಯಾರ್ಥಿಗಳು
ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಗೊಂಡಿದ್ದು ರಾಜ್ಯಾದ್ಯಂತ ಶಾಲೆಗಳಲ್ಲಿ ಹೈಕೋರ್ಟ್ ತೀರ್ಪುನ್ನು ವಿದ್ಯಾರ್ಥಿನಿಯರು ಪಾಲಿಸುತ್ತಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ತೆಗೆದು ಪ್ರವೇಶಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರು ತಮಗೆ ಹಿಜಾಬ್ ಮುಖ್ಯವಲ್ಲ ಪರೀಕ್ಷೆ ಮುಖ್ಯ ಎಂದಿದ್ದಾರೆ.
ಮೈಸೂರಿನಲ್ಲಿ ಮೂವತ್ತೆಂಟು ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯಲಿದ್ದು ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಬರೆಯುತ್ತಿದ್ದಾರೆ. ಈ ವೇಳೆ ಪೋಷಕರು ಹಿಜಾಬ್ ಮುಖ್ಯ ಅಲ್ಲ ಪರೀಕ್ಷೆ ಮುಖ್ಯ ಎಂದಿದ್ದಾರೆ. ಮಕ್ಕಳೂ ಕೂಡ ತಮಗೆ ಹಿಜಾಬ್ ಮುಖ್ಯವಲ್ಲ ಪರೀಕ್ಷೆ ಮುಖ್ಯ. ಪರೀಕ್ಷೆ ಕೊಠಡಿಯಲ್ಲಿ ಹಿಜಾಬ್ ಅನ್ನು ನಾವು ತೆಗೆಯುತ್ತೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ದಾವಣಗೆರೆಯಲ್ಲಿ ಹಿಜಾಬ್ ತೆಗೆಯಲು ಸೂಚನೆ ನೀಡಲಾಗಿದೆ. ಹಿಜಾಬ್ ಹಾಕಿಕೊಂಡು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಇಲ್ಲಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿ ಹಿಜಾಬ್ ತೆಗೆಯಲು ಸಿಬ್ಬಂದಿಗಳು ಸೂಚಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರ ಸಿದ್ಧಗಂಗಾ ಶಾಲೆಯಲ್ಲಿ ಸರ್ಕಾರದ ಆದೇಶವನ್ನು ಪಾಲಿಸಲಾಗುತ್ತಿದೆ. ಪರೀಕ್ಷೆಗಾಗಿ ಹಿಜಾಬ್ ತೆಗೆಯಲೇಬೇಕು ಹೀಗಾಗಿ ಕಾನೂನು ಪಾಲನೇ ಮಾಡಲು ಹಿಜಾಬ್ ತೆಗೆದಿದ್ದೇವೆ. ಶಿಕ್ಷಣ ಬೇಕು ಹಿಜಾಬ್ ಬೇಕು ಎಂದು ಹೇಳಿದ್ದಾರೆ. ಹುಬ್ಬಳ್ಳಿಯ ಅಂಜುಮನ್ ಶಿಕ್ಷಣ ಸಂಸ್ಥೆ ಮನವರಿಕೆ ಮೇರೆಗೆ ವಿದ್ಯಾರ್ಥಿಗಳು ಹಿಜಾಬ್ ತೆಗೆದು ಪರೀಕ್ಷೆ ಕೇಂದ್ರಗಳಿಗೆ ಹಾಜರಾಗಿದ್ದಾರೆ.

ಹೀಗಾಗಿ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಹಾಜರಾಗುತ್ತೇವೆ ಎಂದು ಯಾರೂ ಕೂಡ ಹೇಳಿರುವ ವರದಿಯಾಗಿಲ್ಲ. ಗದಗದಲ್ಲಿ ಮಾತ್ರ ಇಂಥದೊಂದು ಪ್ರಕರಣ ವರದಿಯಾಗಿದ್ದಾರೆ. ಆದರೆ ಶಿಕ್ಷಕರು ಮನವೊಲಿಸಿದ ನಂತರ ಹಿಜಾಬ್ ತೆರೆದಿರುವುದು ಕಂಡು ಬಂದಿದೆ. ಇನ್ನು ಕೆಲವೆಡೆ ಕ್ಯಾಮರಾ ನೋಡಿ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿರುವುದು ಕಂಡು ಬಂದಿದೆ.
ಹಿಜಾಬ್ ವಿಚಾರಕ್ಕೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇಲ್ಲ ಅಂತ ಮೈಸೂರಿನಲ್ಲಿ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಹೈಕೋರ್ಟ್ ಆದೇಶ ಪಾಲಿಸುವುದು ಸರ್ಕಾರದ ಕರ್ತವ್ಯ. ಕರ್ತವ್ಯ ಪಾಲಿಸದೆ ಛೀಮಾರಿ ಹಾಕಿಸಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ಸಚಿವರು ಹೇಳಿದ್ದಾರೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಒಳಗೆ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಹಿಜಾಬ್ಗೆ ಪಟ್ಟು ಬಿದ್ದು ಕೆಲ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕಾರ ಮಾಡಿ, ವಾಪಸ್ ಮನೆಗೆ ತರೆಳಿದ್ದರು. ಕೆಲವರು ಪ್ರತಿಭಟನೆ ನಡೆಸಿದ್ದರು. ಆದರೆ ಈ ಇದೇ ರೀತಿ ಮತ್ತೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇರಲ್ಲ ಅಂತ ಸಚಿವರು ಹೇಳಿದರು.












Click it and Unblock the Notifications