SSLC ಫೇಲ್ ಆದರೆ ಜೀವನ ಮುಗಿದಂತಲ್ಲ, ಇದೆ ಇನ್ನೊಂದು ಅವಕಾಶ: ಶಿಕ್ಷಕ ವಸಂತ ಭಜಂತ್ರಿ ಬರಹ
ಕರ್ನಾಟಕದ ಲಕ್ಷಾಂತರ ಮಕ್ಕಳು, ಪೋಷಕರು ಕಾತರದಿಂದ ಕಾಯುತ್ತಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026 (SSLC Result 2026) ಬಿಡುಗಡೆ ಆಗಿದೆ. ಒಂದೆಡೆ ಟಾಪರ್ಸ್ ಯಾರು, ಯಾವ ಜಿಲ್ಲೆ ಮೊದಲು, ಯಾವುದು ಕೊನೆ, ಅನುತ್ತೀರ್ಣರಾದವರ ಬಗ್ಗೆ ಮಾತನಾಡುತ್ತಿದ್ದೇವೆ. ಇದರ ನಡುವೆ ಅದೆಷ್ಟೋ ಮಕ್ಕಳಲ್ಲಿ ತಾನು ತೇರ್ಗಡೆ ಆಗಲಿಲ್ಲ. ಕಡಿಮೆ ಅಂಕ ಪಡೆದೆ, ಮುಂದೆ ಭವಿಷ್ಯವೇನು? ಎಂಬಿತ್ಯಾದಿ ಆತಂಕಗಳು ಶುರುವಾಗಿವೆ. 'ಎಸ್‌ಎಸ್‌ಎಲ್‌ಸಿ ನಲ್ಲಿ ಫೇಲ್ ಆದರೆ ಅದು ಜೀವನದ ಅಂತ್ಯವಲ್ಲ' ಎಂಬುದನ್ನು ಪೋಷಕರು ಗಮನದಲ್ಲಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಪೋಷಕರು,ವಿದ್ಯಾರ್ಥಿಗಳು, ಶಿಕ್ಷಕರು ಏನು ಮಾಡಬೇಕು ಎನ್ನುವ ಕುರಿತು ಹಾವೇರಿ ಜಿಲ್ಲೆ ಸವಣೂರ ಪಟ್ಟಣದ ಮೌಲನಾ ಅಜಾದ್ ಮಾದರಿ ಶಾಲೆಯ ಕನ್ನಡ ಶಿಕ್ಷಕರಾದ ವಸಂತ ಭೀ ಭಜಂತ್ರಿ ತಿಳಿಸಿದ್ದಾರೆ. ಅವರ ಮಾತಿನ ಅಕ್ಷರರೂಪ ಮುಂದಿನ ಸಾಲುಗಳಲ್ಲಿದೆ.
ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್ ಆದರೆ ಜೀವನದ ಅಂತ್ಯವಲ್ಲ -ಅದು ಹೊಸ ಪ್ರಾರಂಭಕ್ಕೆ ಒಂದು ಅವಕಾಶ. ವಿದ್ಯಾರ್ಥಿಗಳು ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಫೇಲ್ ಆಗಿದ್ದರಿಂದ ನಿಮ್ಮ ಸಾಮರ್ಥ್ಯ ಕಡಿಮೆ ಆಗುವುದಿಲ್ಲ. ತಪ್ಪುಗಳಿಂದ ಕಲಿಯುವುದು ಮುಖ್ಯ. ಮೊದಲು ಶಾಂತಚಿತ್ತದಿಂದ ನಿಮ್ಮ ತಪ್ಪುಗಳನ್ನು ಗುರುತಿಸಿಕೊಳ್ಳಿ. ಯಾವ ವಿಷಯದಲ್ಲಿ ಕಡಿಮೆ ಅಂಕ ಬಂದಿದೆ? ಯಾವ ಭಾಗ ಕಷ್ಟವಾಯಿತು? ಅದನ್ನು ವಿಶ್ಲೇಷಿಸಿಕೊಳ್ಳಬೇಕು.

ಮುಂದಿನ ಪರೀಕ್ಷೆಗೆ (SSLC Exam 2) ಸರಿಯಾದ ಅಧ್ಯಯನ ನಡೆಸಲು ಯೋಜನೆ ಮಾಡಿಕೊಳ್ಳಿ. ಅದಕ್ಕಾಗಿ ದಿನಚರಿ ರೂಪಿಸಿ. ಗಂಟೆಗಟ್ಟಲೇ ಓದುವ ಬದಲಿಗೆ ಪ್ರತಿದಿನ ಸ್ವಲ್ಪಸ್ವಲ್ಪವಾಗಿ ಓದಿ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಕೊನೆಯ ಕ್ಷಣದಲ್ಲಿ ಓದಬೇಡಿ. ಶಿಕ್ಷಕರ ಮಾರ್ಗದರ್ಶನ ಪಡೆಯುವುದು ತುಂಬಾ ಮುಖ್ಯವಾಗಿರುತ್ತದೆ.
ಇದನ್ನೂ ಓದಿ: SSLC 2026 ಫಲಿತಾಂಶ ಬಿಡುಗಡೆ ಅಪ್ಡೇಟ್; ಅಂಕಪಟ್ಟಿ ಡೌನ್‌ಲೋಡ್ ಮಾಡೋದು ಹೇಗೆ, ಇಲ್ಲಿದೆ ವಿವರ
ಹಳೆಯ ಪ್ರಶ್ನೆಪತ್ರಿಕೆಗಳನ್ನು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪುನಃ ಸರಿಯಾಗಿ ಅಭ್ಯಸಿಸಿ. ಅದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಆರೋಗ್ಯದ ಸರಿಯಾಗಿದ್ದ ನೀವು ಎಲ್ಲದರಲ್ಲೂ ಯಶಸ್ಸು ಸಾಧಿಸಬಹುದು. ಸರಿಯಾದ ನಿದ್ರೆ, ಆಹಾರ ಮತ್ತು ವ್ಯಾಯಾಮವೂ ಸಮಾನವಾಗಿ ಮುಖ್ಯ. ಅದರತ್ತವು ಗಮನ ಕೊಡಿ'.
ಪಾಲಕರು, ಶಿಕ್ಷಕರ ವರ್ತನೆ ತುಂಬ ಮುಖ್ಯ
ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ಪಡೆದವರನ್ನು, ಅನುತ್ತೀರ್ಣ ಆದ ಮಕ್ಕಳನ್ನು ಬೆಂಬಲಿಸಿ, ದೂಷಿಸಬೇಡಿ. ಅಂತಹ ಮಕ್ಕಳಿಗೆ ಬೈಯುವುದಕ್ಕಿಂತ ಧೈರ್ಯ ತುಂಬುವುದು ಮುಖ್ಯ. ಹೆಚ್ಚು ಅಂಕ ಪಡೆದವರೊಂದಿಗೆ ಹೋಲಿಕೆ ಮಾಡಬೇಕಿದೆ. ಇತರರೊಂದಿಗೆ ಹೋಲಿಸಿದರೆ ನಿಮ್ಮ ಮಕ್ಕಳ ಮನೋಬಲ ಕಡಿಮೆಯಾಗುತ್ತದೆ.
ಮುಂದಿನ ಪರೀಕ್ಷೆಗೆ ಸಜ್ಜಾಗುತ್ತಿರುವ ಓದಿಗೆ ಅನುಕೂಲಕರ ವಾತಾವರಣ ಒದಗಿಸಿ. ಮನೆಯಲ್ಲಿನ ಶಾಂತ ಪರಿಸರ, ಸಮಯದ ವ್ಯವಸ್ಥೆ ಮಾಡಿಕೊಡಿ. ಫಲಿತಾಂಶದ ಬಳಿಕವು ಮಕ್ಕಳೊಂದಿಗೆ ನಗುನಗುತ್ತ ಎಂದಿನಂತೆ ಮಾತನಾಡಿ. ಅವರ ಭಾವನೆಗಳನ್ನು ಕೇಳಿ. ಮಕ್ಕಳು ಒತ್ತಡದಲ್ಲಿದ್ದ ಕಡಿಮೆ ಮಾಡಲು ಸಹಾಯ ಮಾಡಿ. ಇದರಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇಂದು ಫೇಲ್ ಆದ, ಕಡಿಮೆ ಅಂಕ ಪಡೆದವರು ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಬಹುದು. ಇಂದು ನಿಮ್ಮ ನಡೆ ಅವರಿಗೆ ಪ್ರೇರಣೆ ಆಗಲಿ.
ಇದನ್ನೂ ಓದಿ: SSLC Results 2026: ಬಂತು ಎಸ್‌ಎಸ್‌ಎಲ್‌ಸಿ ರಿಸಲ್ಟ್; ಈ ಬಾರಿ ಶೇ 90ರಷ್ಟು ಸಾಧನೆ
ಪೋಷಕರು/ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಂಪರ್ಕದಲ್ಲಿರಬೇಕು. ತಮ್ಮ ಮಗುವಿನ ಮನೆ ಮಕ್ಕಳ ಬಗ್ಗೆ ನಿಯಮಿತವಾಗಿ ಮಾಹಿತಿ ಪಡೆಯುತ್ತಿರಬೇಕು. SSLC ಪ್ರಮುಖ ಘಟ್ಟವೇ ಆದರೆ ಸಹಿತ ಅದರ ಹೊರತಾಗಿಯೂ ಸಾಕಷ್ಟು ಅವಕಾಶಗಳಿವೆ. ಶ್ರಮ, ಸಹನೆ ಮತ್ತು ಸರಿಯಾದ ಮಾರ್ಗದರ್ಶನದಿಂದ ಯಶಸ್ಸು ಖಂಡಿತ ಸಿಗುತ್ತದೆ ಎಂಬುದನ್ನು ಬಲವಾಗಿ ನಂಬಿ.
SSLC ಫಲಿತಾಂಶದ ನಂತರ ವಿದ್ಯಾರ್ಥಿಗಳಿಗೆ ಶಿಕ್ಷಕರು ನೀಡುವ ಮುಖ್ಯ ಸಲಹೆಗಳು, ಫಲಿತಾಂಶವನ್ನು ಸಮತೋಲನದಿಂದ ಸ್ವೀಕರಿಸಬೇಕು. ಯಶಸ್ಸು ಬಂದರೂ ಅಹಂಕಾರ ಬೇಡ, ಕಡಿಮೆ ಅಂಕ ಬಂದರೂ ನಿರಾಶರಾಗಬೇಡಿ. ಇದು ಜೀವನದ ಒಂದು ಹಂತ ಮಾತ್ರ. ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯ ಗುರುತಿಸಿ
ಮುಂದಿನ ಕೋರ್ಸ್ ಆಯ್ಕೆ ಮಾಡುವಾಗ ಸ್ನೇಹಿತರು ಅಥವಾ ಒತ್ತಡಕ್ಕೆ ಒಳಗಾಗಿ ನಿರ್ಧಾರ ಮಾಡಬೇಡಿ. ನಿಮ್ಮ ಆಸಕ್ತಿ (ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಇಲ್ಲವೇ ಡಿಪ್ಲೋಮಾ, ಐಟಿಐ) ಏನು ಯಾವುದರ ಮೇಲಿದೆ ಎಂದು ತಿಳಿದುಕೊಳ್ಳಬೇಕು. ಆ ಬಗ್ಗೆ ಮಾಹಿತಿ ಕಡಿಮೆ ಇದ್ದಲ್ಲಿ, ಸರಿಯಾದವರಿಂದ ಮಾರ್ಗದರ್ಶನ ಪಡೆಯಿರಿ. ಶಿಕ್ಷಕರು, ಪೋಷಕರು, ಹಿರಿಯರು ಅಥವಾ ಕರಿಯರ್ ಕೌನ್ಸಿಲರ್‌ಗಳಿಂದ ಸಲಹೆ ಪಡೆದು ಮುಂದೆ ಹೆಜ್ಜೆ ಇಡಿ.
ಗುರಿ ನಿಗದಿ ಮಾಡಿಕೊಳ್ಳುವುದು ಮುಖ್ಯ
ಮುಂದಿನ 2-3 ವರ್ಷಗಳ ಗುರಿ ಸ್ಪಷ್ಟವಾಗಿರಲಿ. ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು, ನಿಮ್ಮ ದುರ್ಬಲತೆಗಳನ್ನು ಸರಿಪಡಿಸಿಕೊಳ್ಳುವತ್ತ ಗಮನಹರಿಸಿ.ಎಸ್‌ಎಸ್‌ಎಲ್‌ಸಿಯಲ್ಲಿ ಯಾವ ವಿಷಯದಲ್ಲಿ ಕಡಿಮೆ ಅಂಕ ಬಂದಿದೆಯೋ ಅದನ್ನು ಸುಧಾರಿಸಲು ಪ್ರಯತ್ನಿಸಬೇಕು. ಅದಕ್ಕಾಗಿ ಸಮಯ ನಿರ್ವಹಣೆಯ ಕಲೆ ಕಲೆತುಕೊಳ್ಳಿ. ಪೋಷಕರೊಂದಿಗೆ ಮುಕ್ತವಾಗಿ ಮಾತನಾಡಿ, ಸಮಸ್ಯೆ ಹೇಳಿಕೊಳ್ಳಿ. ಮುಂದಿನ ತರಗತಿಗಳಲ್ಲಿ ಸ್ಪರ್ಧೆ ಹೆಚ್ಚಿರುತ್ತದೆ. ಆದ್ದರಿಂದ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ
ಈಗತಾನೆ ಎಸ್‌ಎಸ್‌ಎಲ್‌ಸಿ ಮುಗಿಸಿದೆ. ಭವಿಷ್ಯ, ಬುದುಕು ದೊಡ್ಡದಿದೆ. ಭಯ, ಒತ್ತಡಕ್ಕೆ ಒಳಗಾಗಬೇಡಿ. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳದೇ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ. ಕೌಶಲ್ಯ ಅಭಿವೃದ್ಧಿಯತ್ತ ಗಮನಹರಿಸಿ. ಜೊತೆಗೆ ಸಂವಹನ ಕೌಶಲ್ಯ, ಕಂಪ್ಯೂಟರ್ ತರಬೇತಿ, ಇಂಗ್ಲಿಷ್ ಮಾತನಾಡುವುದು ಹೀಗೆ ವಿದ್ಯಾರ್ಥಿಯಾಗಿ ನೀವು ಮಾಡಬೇಕಾದ ಎಲ್ಲವನ್ನು ಮಾಡಿ. ಅವೆಲ್ಲ ಬರದಿಂದ ಕ್ರಮೇಣ ಅವುಗಳನ್ನು ಕಲಿಯಲ್ಲಿ ರೂಢಿಮಾಡಿಕೊಳ್ಳಿ.
ಇದನ್ನೂ ಓದಿ: SSLC ಪರೀಕ್ಷೆ-2: ಫೇಲಾದವರಿಗೆ ಇನ್ನೊಂದು ಅವಕಾಶ; ವೇಳಾಪಟ್ಟಿ ಮತ್ತು ಶುಲ್ಕದ ವಿವರ ಇಲ್ಲಿದೆ
ಎಸ್‌ಎಸ್‌ಎಲ್‌ಸಿ ವೈಪಲ್ಯದಿಂದ ಹತಾಶರಾಗಬೇಡಿ. ಫೇಲ್ ಆದರೂ ಅದು ಅಂತ್ಯ ಅಲ್ಲ. ಮತ್ತೆ ಪ್ರಯತ್ನಿಸಿ ಯಶಸ್ಸು ಸಾಧಿಸಬಹುದು. ಈ ಸಮಯದಲ್ಲಿ ಉತ್ತಮ ಸ್ನೇಹ ವಲಯ ಆಯ್ಕೆ ಮಾಡಿಕೊಳ್ಳಿ. ಪದೇ ಪದೇ ಆಡಿಕೊಳ್ಳುವವರಿಂದ ಸ್ವಲ್ಪ ಸಮಯ ದೂರವಿರಿ. ಸಹಾಯ ಮಾಡುವ ಸ್ನೇಹಿತರನ್ನು ಆಯ್ಕೆ ಮಾಡಿ, ನಿಮ್ಮ ಬೆಂಬಲಿಸುವ ಸ್ನೇಹಿತರಿಗೆ ಮನಸ್ಸಿ ದುಗುಡ ಹೇಳಿಕೊಂಡು ಪರಿಹಾರ ಪಡೆದುಕೊಳ್ಳಿ. ನಿಮ್ಮ ಭವಿಷ್ಯ ಉಜ್ವಲವಾಗಲಿದೆ.












Click it and Unblock the Notifications