SSLC Results 2026: ಬಂತು ಎಸ್‌ಎಸ್‌ಎಲ್‌ಸಿ ರಿಸಲ್ಟ್; ಈ ಬಾರಿ ಶೇ 90ರಷ್ಟು ಸಾಧನೆ
SSLC Result 2026: ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ಫಲಿತಾಂಶ 2026 ಇಂದು ಗುರುವಾರ (ಏ.23) ಬಿಡುಗಡೆ ಆಗಿದೆ. ಈ ಬಾರಿ ಶೇಕಡಾ ಶೇ 90ರಷ್ಟು ಫಲಿತಾಂಶ ದಾಖಲಾಗಿದೆ. ಹಿಂದೆಂದು ಕೂಡ ಈ ರೀತಿಯ ಫಲಿತಾಂಶ ಬಂದಿರಲಿಲ್ಲ ಎಂಬುದು ಗಮನಿಸಬೇಕಾದ ವಿಷಯ.
ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಈ ಫಲಿತಾಂಶವನ್ನು ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಅಧಿಕೃತ ಜಾಲತಾಣದ ಲಿಂಕ್ www.karresults.nic.in ಗೆ ಭೇಟಿ ನೀಡಿ ವೀಕ್ಷಿಸಬಹುದು. ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು ಸಚಿವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಚಿವರು ನೀಡಿದ ಮಾಹಿತಿಯ ಪ್ರಮುಖ ಅಂಶಗಳು, ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಫಲಿತಾಂಶದ ಪ್ರಮುಖ ಅಂಶಗಳು
* ರಾಜ್ಯದಲ್ಲಿ ಮೂರು ವಿದ್ಯಾರ್ಥಿಗಳು 625 ಕ್ಕೆ 625 ಪೂರ್ಣ ಅಂಕಗಳನ್ನು ಪಡೆದಿದ್ದಾರೆ.
* ಪಿಯುಸಿಯಂತೆ ಎಸ್‌ಎಸ್‌ಎಲ್‌ಸಿಯಲ್ಲೂ ದಾಖಲೆ ಫಲಿತಾಂಶ ದಾಖಲಾಗಿದೆ.
* ಎಸ್‌ಎಸ್‌ಎಲ್‌ಸಿ ಪರೀಕ್ಷೆ 7,70,209 ಲಕ್ಷ ಮಕ್ಕಳಲ್ಲಿ 7,26,794 ಮಕ್ಕಳು ತೇರ್ಗಡೆಯಾಗಿದ್ದಾರೆ.
* ಈ ಬಾರಿ ಬರೊಬ್ಬರಿ ಶೇಕಡಾ 94.10 ರಷ್ಟು ಮಕ್ಕಳು ತೇರ್ಗಡೆ ಆಗಿದ್ದಾರೆ.
* ದಕ್ಷಿಣ ಕನ್ನಡ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಪ್ರಥಮ, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
* ಉಡುಪಿ ಜಿಲ್ಲೆಯು ಫಲಿತಾಂಶದಲ್ಲಿ ಎರಡನೇ ಸ್ಥಾನದಲ್ಲಿದೆ.
* ವಿಜಯಪುರದ ಸೌಜನ್ಯಾ, ಬೆಂಗಳೂರಿನ ಧನುಷ್, ರಾಯಚೂರಿನ ಸುಖದೇವ್, ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಚಿಕ್ಕೋಡಿಯ ಪ್ರಾರ್ಥನಾ, ಉಡಪಿಯ ಪ್ರಥಮ್ ಪೂಜಾರಿ ಇವರುಗಳು ಎಸ್‌ಎಸ್‌ಎಲ್‌ಸಿ ಟಾಪಾರ್‍ಗಳಾಗಿ ಹೊರ ಹೊಮ್ಮಿದ್ದಾರೆ.
* ನಗರ ಫಲಿತಾಂಶದಲ್ಲಿ ಶೇ. 92ರಷ್ಟು ಫಲಿತಾಂಶ ಬಂದಿದೆ.
ಮೊಬೈಲ್ ಅಪ್ಲಿಕೇಷ್‌ನಗಳಲ್ಲು ಫಲಿತಾಂಶ ಲಭ್ಯ
10ನೇ ತರಗತಿ ಫಲಿತಾಂಶವನ್ನು ಮಂಡಳಿ ಜಾಲತಾಣದಲ್ಲಿ ಮಾತ್ರವಲ್ಲದೇ, ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಷನ್‌ಗಳಲ್ಲೂ ಲಭ್ಯವಿದೆ. ವಿದ್ಯಾರ್ಥಿಗಳು ಪರೀಕ್ಷಾ ನೋಂದಣಿ ಸಂಖ್ಯೆ, ಅಗತ್ಯ ವಿವರ ಹಾಕಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸುಮಾರು 9,02,889 ಮಂದಿ ಪರೀಕ್ಷೆಗೆ ಹಾಜರಾಗಲು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಒಟ್ಟು ಸುಮಾರು 2000 ಮಂದಿ ಗೈರು ಹಾಜರಾಗಿದ್ದಾರೆ. ಫಲಿತಾಂಶ. ಅದರಲ್ಲಿ ಒಟ್ಟು 7.20 ಲಕ್ಷ ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.














Click it and Unblock the Notifications