ಪ್ರತ್ಯೇಕ ರಾಜ್ಯ ಹೋರಾಟ ನೇತೃತ್ವ ವಹಿಸಲು ಸಿದ್ಧ: ಶ್ರೀರಾಮುಲು

Recommended Video

      ಎಚ್ ಡಿ ಕುಮಾರಸ್ವಾಮಿಯವರನ್ನ ತರಾಟೆಗೆ ತೆಗೆದುಕೊಂಡ ಬಳ್ಳಾರಿ ಶಾಸಕ ಬಿ ಶ್ರೀರಾಮುಲು | Oneindia Kannada

      ಬೆಂಗಳೂರು, ಜು.27: ಉತ್ತರ ಕರ್ನಾಟಕಕ್ಕೆ ಭಾರಿ ಅನ್ಯಾಯವಾಗಿದೆ, ಈ ಅನ್ಯಾಯ ಮುಂದುವರೆಯಲು ಬಿಡುವುದಿಲ್ಲ, ಆ ಭಾಗದ ಜನರಿಗೆ ಅನ್ಯಾಯವಾದರೆ ರಾಜಿನಾಮೆಗೂ ಸಿದ್ಧ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದ್ದಾರೆ.

      ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆನ್ನುವ ಕೂಗು ಮತ್ತೊಮ್ಮೆ ಕೇಳಿಬರುತ್ತಿದೆ, ಆ.2 ರಂದು ಉತ್ತರ ಕರ್ನಾಟಕ ಬಂದ್‌ಗೆ ಕೆಲವು ಸಂಘಟನೆಗಳು ಕರೆಕೊಟ್ಟಿವೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕರ್ನಾಟಕ ಬಜೆಟ್‌ ಮಂಡಿಸಿದ ಬಳಿಕ ಉತ್ತರ ಕರ್ನಾಟಕಕ್ಕೆ ಯಾವುದೇ ಭರವಸೆಗಳು, ಯೋಜನೆಗಳನ್ನು ನೀಡದಿರುವುದು ಅಲ್ಲಿನ ಜನರ ಕೆಂಗಣ್ಣಿಗೆ ಗುರಿಯಾಗಿದೆ.

      ತೆಲಂಗಾಣ ಮಾದರಿಯಲ್ಲಿ ಹೋರಾಟ ಮುಂದುವರೆಸುತ್ತೇವೆ, ಹಣ, ಜಾತಿಗೋಸ್ಕರ ಸಿಎಂ ತಮ್ಮನ್ನು ತಾವೇ ಮಾರಿಕೊಂಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದರೆ ದೊಡ್ಡ ಕ್ರಾಂತಿಯೇ ನಡೆಯುತ್ತೆ ಎಂದರು.

      ಪ್ರತ್ಯೇಕ ರಾಜ್ಯ ಮಾಡಲು ಬಿಡುವುದಿಲ್ಲ, ಪ್ರತ್ಯೇಕ ರಾಜ್ಯ ಬೇಕೆನ್ನುವ ಮುಖಂಡರು ಬಹಿರಂಗ ಚರ್ಚೆಗೆ ಬರಲಿ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದರು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಧ್ವನಿಯಾಗಬೇಕು. ನನ್ನ ಮುಂದಾಳತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.

      Sriramulu says he will not hesitate to take leadership of separate state agitation

      ಉತ್ತರ ಕರ್ನಾಟಕ ಭಾಗದ ರೈತರಿಗೆ ಅಗೌರವದಿಂದ ಮಾತನಾಡಬೇಡಿ, ಹೋರಾಟಗಾರರಿಗೆ ನನ್ನ ಬೆಂಬಲವಿದೆ. ಸರ್ಕಾರದ ಈ ತಾರತಮ್ಯದಿಂದ ಉತ್ತರ ಕರ್ನಾಟಕ ಜನ ನೊಂದಿದ್ದಾರೆ, ಅವರ ಕಣ್ಣೀರು ಒರೆಸುವುದು ನನ್ನ ಧರ್ಮ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಮುಂದಾಳತ್ವವಹಿಸಲು ನಾನು ಸಿದ್ಧ. ಯಾವುದೇ ಕಾರಣಕ್ಕೂ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+