ಶ್ರೀರಾಮುಲು ಕಂಡರೆ ಕಾಂಗ್ರೆಸ್ ಪಕ್ಷದವರು ನಡಗುತ್ತಾರೆ!: ಹೀಗೆ ಹೇಳಿದ್ದು ಯಾರು ಗೊತ್ತೇ?

ಕೊಪ್ಪಳ, ನವೆಂಬರ್ 17: 'ಇಂದು ಶ್ರೀರಾಮುಲು ಬಿಜೆಪಿಯಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಶ್ರೀರಾಮುಲು ಎಂದರೆ ಕಾಂಗ್ರೆಸ್ ಪಕ್ಷದವರು ನಡಗುತ್ತಾರೆ'- ಹೀಗೆ ಹೇಳಿಕೆ ನೀಡಿರುವುದು ಬೇರಾರೂ ಅಲ್ಲ, ಸ್ವತಃ ಶ್ರೀರಾಮುಲು.

ಕೊಪ್ಪಳ ಜಿಲ್ಲೆಯ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಮಾತನಾಡಿದ ಅವರು, ರಾಮುಲು ಅವರಂತಹ ವ್ಯಕ್ತಿ ಕರ್ನಾಟಕದಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದಾರೆ. ಬಿಜೆಪಿ ಅವರನ್ನು ಬೆಳೆಸಿದೆ. ರಾಮುಲು ಅಂದರೆ ಕಾಂಗ್ರೆಸ್ ಪಕ್ಷದವರು ನಡಗುತ್ತಾರೆ. ಅವರ ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರುವ ವಿಚಾರವಲ್ಲ ಎಂದು ಹೇಳಿಕೊಂಡರು.

ಹಾಗೆಯೇ ಜನಾರ್ದನ ರೆಡ್ಡಿ ಅವರನ್ನು ಆಂಬಿಡೆಂಟ್ ಪ್ರಕರಣದಲ್ಲಿ ಬಂಧಿಸಿದ ನಿರ್ಧಾರದ ವಿರುದ್ಧ ಅವರು ಕಿಡಿಕಾರಿದರು. ರೆಡ್ಡಿ ಅವರ ಬಂಧನಕ್ಕೆ ಸಮ್ಮಿಶ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದರು.

ಆಂಬಿಡೆಂಟ್ ಕಂಪೆನಿಯ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಎಚ್ ಡಿ ಕುಮಾಸ್ವಾಮಿ ಅವರ ದ್ವೇಷ ರಾಜಕಾರಣದಿಂದಾಗಿ ತಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

ಈಗ ಶ್ರೀರಾಮುಲು ಕೂಡ ತಮ್ಮ ಸ್ನೇಹಿತನ ಪರವಾಗಿ ಮಾತನಾಡಿದ್ದಾರೆ.

ಸೇಡಿಗಾಗಿ ಬಂಧನ

ಸೇಡಿಗಾಗಿ ಬಂಧನ

ಜನಾರ್ದನ ರೆಡ್ಡಿ ಅವರ ಬಂಧನದ ಘಟನೆಯಲ್ಲಿ ಸರ್ಕಾರದ ಕೈವಾಡವಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.

ಆಂಬಿಡೆಂಟ್ ಕಂಪೆನಿ ವಿವಾದದಲ್ಲಿ ಇನ್ನಷ್ಟು ಆಳವಾಗಿ ಹೋದರೆ, ರೆಡ್ಡಿ ಅವರ ವಿಚಾರದಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಪ್ರಕರಣದಲ್ಲಿ ರಾಜಕೀಯ ಸಂಚು ಇರುವುದು ಕಾಣಿಸುತ್ತಿದೆ ಎಂದು ಶ್ರೀರಾಮುಲು ಹೇಳಿದರು.

ರೆಡ್ಡಿ ಭೇಟಿಯಾದ ಬಿಎಸ್‌ವೈ

ರೆಡ್ಡಿ ಭೇಟಿಯಾದ ಬಿಎಸ್‌ವೈ

ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶುಕ್ರವಾರ ತಡರಾತ್ರಿ ಗುಟ್ಟಾಗಿ ಭೇಟಿ ಮಾಡಿದ್ದಾರೆ.

ತಮ್ಮನ್ನು ಬಂಧಿಸುವ ವೇಳೆ ಬಿಜೆಪಿ ತಮಗೆ ಬೆಂಬಲ ನೀಡದೆ ಇರುವುದರ ಬಗ್ಗೆ ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನೀವು ಕಾನೂನು ಹೋರಾಟ ನಡೆಸಿ, ಅದಕ್ಕೆ ನಮ್ಮ ಬೆಂಬಲ ಇರಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮರ್ಥನೆ ಮಾಡಿಕೊಳ್ಳುವುದಿಲ್ಲ

ಸಮರ್ಥನೆ ಮಾಡಿಕೊಳ್ಳುವುದಿಲ್ಲ

ಆಂಬಿಡೆಂಟ್ ಲಂಚ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಅವರನ್ನು ತಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ರೆಡ್ಡಿ ಅವರನ್ನು ಯಾವ ಪ್ರಕರಣದಲ್ಲಿಯೂ ಸಮರ್ಥನೆ ಮಾಡಿಕೊಳ್ಳಲು ಹೋಗುವುದಿಲ್ಲ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ಅಪರಾಧ ದಳವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹೇಳುತ್ತಿದ್ದೇನೆ ಎಂಬುದಾಗಿ ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ಅಂದರೆ ಯೂ ಟರ್ನ್

ಬಿಜೆಪಿ ಅಂದರೆ ಯೂ ಟರ್ನ್

ರೆಡ್ಡಿ ಅವರು ಬಿಜೆಪಿಯಲ್ಲಿಯೇ ಇದ್ದಾರೆ. ಅವರು ತಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಎಂದರೆ ಯೂ ಟರ್ನ್ ಎಂದು. ಅವರಿಗೆ ಇದೆಲ್ಲ ಅಭ್ಯಾಸ ಆಗಿದೆ. ಚೆನ್ನಾಗಿದ್ದಾಗ ಜತೆಗೆ ಇರುತ್ತಾರೆ, ಹೆಚ್ಚೂ ಕಡಿಮೆ ಆದಾಗ ಅವರನ್ನು ಬಿಟ್ಟೇ ಬಿಡುತ್ತಾರೆ. ತಮ್ಮ ಜತೆಗಿದ್ದವರಿಗೆ ಕೆಟ್ಟಕಾಲ ಬಂದಾಗ ಹಿಂದೆ ಸರಿಯುವುದು ಮಾಮೂಲು ಎಂದು ಜಮೀರ್ ಅಹ್ಮದ್ ಉಡುಪಿಯಲ್ಲಿ ಹೇಳಿದ್ದಾರೆ.

ಮಹಾಧಾಯಿ ಸಭೆಗೆ ಗೈರು

ಮಹಾಧಾಯಿ ಸಭೆಗೆ ಗೈರು

ಮಹಾದಾಯಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆ ಕರೆಯಲಾಗಿದ್ದು, ಯಡಿಯೂರಪ್ಪ ಅದಕ್ಕೆ ಗೈರಾಗಲಿದ್ದಾರೆ. ಎರಡು ಕಾರಣಗಳಿಂದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+