ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ ವಿದ್ಯಾರ್ಥಿ ಅಭಿಶೇಕ್ ಅಪ್ಪನಿಗೆ ಬರೆದ ಆತ್ಮೀಯ ಪತ್ರ

ಶೃಂಗೇರಿ ವಿದ್ಯಾರ್ಥಿ, ಎಬಿವಿಪಿ ಕಾರ್ಯಕರ್ತ ಅಭಿಶೇಕ್ ಅವರ ಆತ್ಮಹತ್ಯೆ ಪತ್ರದ ತುಂಬಾ ಅಪ್ಪನಿಗೆ ಕ್ಷಮೆಯಾಚಿಸಿದ್ದಾರೆ. ಅಭಿಶೇಕ್ ಬರೆದ ಆತ್ಮೀಯ ಪತ್ರದ ಪ್ರತಿ ಇಲ್ಲಿದೆ

By Mahesh
|
Google Oneindia Kannada News

ಬೆಂಗಳೂರು, ಜನವರಿ 13: ಶೃಂಗೇರಿಯ ವಿದ್ಯಾರ್ಥಿ, ಎಬಿವಿಪಿ ಕಾರ್ಯಕರ್ತ ಅಭಿಶೇಕ್ ಅವರ ಆತ್ಮಹತ್ಯೆ ಪತ್ರದ ತುಂಬಾ ಅಪ್ಪನಿಗೆ ಕ್ಷಮೆಯಾಚಿಸಿದ್ದಾರೆ. ಅಭಿಶೇಕ್ ಬರೆದ ಆತ್ಮೀಯ ಪತ್ರದ ಪ್ರತಿ ಇಲ್ಲಿದೆ.

ಜನವರಿ 7ರಂದು ಶೃಂಗೇರಿಯಲ್ಲಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಅಂಕಣಕಾರ ಚಕ್ರವರ್ತಿ ಸೂಲಿಬೆಲೆಯನ್ನು ಆಹ್ವಾನಿಸಲಾಗಿತ್ತು. [ಮಂಗಳೂರಲ್ಲಿ ಎಬಿವಿಪಿ ಬೃಹತ್ ಪ್ರತಿಭಟನೆ]

Sringeri Student ABVP activist Abhishek death note

ಆದರೆ, ಸೂಲೆಬೆಲೆ ಬರುವುದನ್ನು ವಿರೋಧಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಜ.7ರಂದು ಪತ್ರಿಕಾಗೋಷ್ಠಿ ಕರೆದಿದ್ದರು. ಈ ವಿಚಾರವಾಗಿ ಎಬಿವಿಪಿ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.

ಗಲಾಟೆಗೆ ಸಂಬಂಧಿಸಿ ಅಭಿಷೇಕ್ ಸೇರಿದಂತೆ ನಾಲ್ವರು ಎಬಿವಿಪಿ ಕಾರ್ಯಕರ್ತರ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಚಾರದಲ್ಲಿ ನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದ.

ತನ್ನ ಮೇಲೆ ಎಫ್ ಐಆರ್ ದಾಖಲಾಗಿದ್ದು, ಇದರಿಂದ ಭವಿಷ್ಯದಲ್ಲಿ ಭಾರಿ ತೊಂದರೆ ಎದುರಾಗಲಿದೆ, ಅಪ್ಪ ನನ್ನನ್ನು ಕ್ಷಮಿಸಿಬಿಡಿ, ನಿಮ್ಮ ಕನಸು ನಾನು ಈಡೇರಿಸಲು ಆಗುತ್ತಿಲ್ಲ ಎಂದು ನೊಂದು ಪತ್ರ ಬರೆದಿದ್ದಾನೆ.

ಅಭಿಶೇಕ್ ಪತ್ರದ ಸಾರಾಂಶ ಹೀಗಿದೆ:
ಅಪ್ಪ ನನ್ನನ್ನು ಕ್ಷಮಿಸಿ, ನೀವು ನನ್ನ ಬಗ್ಗೆ ತುಂಬಾ ಕನಸು ಕಟ್ಟಿಕೊಂಡಿದ್ದೀರಿ. ಆದರೆ, ನಾ ಮಾಡದ ತಪ್ಪಿಗೆ ನನ್ನನ್ನು ತಪ್ಪಿತಸ್ಥ ಎಂದು ನನ್ನ ಮೇಲೆ ಕೇಸ್ ದಾಖಲು ಮಾಡಿ FIR ಹಾಕಿದ್ದಾರೆ.

ಅಪ್ಪ ನಾನು ತಪ್ಪು ಮಾಡಿಲ್ಲ ಎಂದರೆ ನೀವು ನಂಬಲ್ಲ ನನಗೆ ಗೊತ್ತು. ಆದರೆ, ನಿಜವಾಗಿಯೂ ಹೊಡೆದಿಲ್ಲ.

ಜೀವನದ ಮುಂದಿನ ಹಾದಿ ಬಹಳ ಯೋಚಿಸುವ ನಾನು ಈಗ FIR ಎಂಬ ದೊಡ್ಡ ಕಪ್ಪುಚುಕ್ಕೆ ಸಹಿಸಿಕೊಳ್ಲಲು ನನ್ನಿಂದ ಸಾಧ್ಯ ಇಲ್ಲ. ಅದಲ್ಲದೆ ನಿಮಗೆ ಇರುವ ಒಳ್ಳೆ ಅಭಿಪ್ರಾಯ ಅನ್ನು ನಾನು ಹಾಳು ಮಾಡುತ್ತಿದ್ದೇನೆ ಎಂಬ ಅನಿಸಿಕೆ ನನ್ನದು.

Sringeri Student ABVP activist Abhishek death note

ನಿಮ್ಮಂತ ತಂದೆ ಯಾವ ಮಕ್ಕಳಿಗೆ ಸಿಗಲ್ಲ. ನನ್ನ 21 ವರ್ಷದಲ್ಲಿ ನನಗೆ ಬೇಕೆಂದಿದ್ದು ಕೊಡಿಸಿದ್ದೀರಿ. ಕಷ್ಟಪಟ್ಟು ಸಾಕಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ನಾನು ಇಲ್ಲ ಎಂದು FIR ಹಾಕಿದ ಮೇಲೆ ಗೊತ್ತಾಯ್ತು.

ಅಪ್ಪ ನಾನು ಚೆನ್ನಾಗಿ ಓದುತ್ತಿದ್ದು, ಒಳ್ಳೆ ಕೆಲ್ಸಕ್ಕೆ ಸೇರುತ್ತಿದ್ದೆ. ನಿಮ್ಮನ್ನು ಚೆನ್ನಾಗಿ ನೋಡ್ಕೊತ್ತಿದ್ದೆ. ಆದರೆ, FIR ಹಾಕಿದ ಮೇಲೆ ಯಾವ ಕೆಲಸ ಸಿಗಲ್ಲ. ಅಪ್ಪ ನನ್ನ ಕ್ಷಮಿಸಿಬಿಡಿ, ಆದರೆ, ಅಪ್ಪ ನಾನು ತಪ್ಪು ಮಾಡಿ ಸಾಯುತ್ತಿಲ್ಲ.

ನಾನು ತಪ್ಪು ಮಾಡಿದ್ದರೆ, ಇವತ್ತು ಈ ನಿರ್ಧಾರಕ್ಕೆ ಬರುತ್ತಿರಲಿಲ್ಲ. ನಾನು ಮಾಡದ ತಪ್ಪಿಗೆ ಹೊಣೆ ಮಾಡಿದ್ದಾರೆ. ಆದ್ದರಿಂದ ನನಗೆ ಮುಖ ತೋರಿಸಲು ಆಗುತ್ತಿಲ್ಲ. ಅಪ್ಪ ನನ್ನ ಕ್ಷಮಿಸು ನನಗಾಗಿ ಕಷ್ಟಪಟ್ಟಿದ್ದು ನೀನು ನಿನಗಾಗಿ ಕ್ಷಮೆ ಕೇಳುತ್ತಿದ್ದೇನೆ.

English summary
A college student and a active member of Akhila Bharat Vidyarthi Parishat Abhishek reveals reason behind his suicide. A death note clearly states that he committed suicide after FIR filed against him in a riot case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X