Special Train: ರೈಲು ಪ್ರಯಾಣಿಕರಿಗೆ ಬಂಪರ್ ಸುದ್ದಿ, ಕುಂಭಮೇಳಕ್ಕೆ ವಿಶೇಷ ರೈಲು ವ್ಯವಸ್ಥೆ!
ಭಾರತದ ಭವ್ಯ ಸಂಸ್ಕೃತಿಯನ್ನು 'ಕುಂಭಮೇಳ' ಇಡೀ ಜಗತ್ತಿಗೇ ಸಾರಿ ಸಾರಿ ಹೇಳುತ್ತದೆ. ಇದೇ ಕಾರಣಕ್ಕೆ 'ಕುಂಭಮೇಳ'ಕ್ಕೆ ದೊಡ್ಡ ಮಟ್ಟದಲ್ಲೇ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿಬಾರಿ ನಡೆಯುವ 'ಕುಂಭಮೇಳ' ಸಂಭ್ರಮದ ರೀತಿಯೇ ಈ ಬಾರಿ ಕೂಡ ಅದ್ಧೂರಿಯಾಗಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗಿದೆ. ಇಂತಹ ಸಮಯದಲ್ಲೇ ಕನ್ನಡ ನಾಡಿನಿಂದ 'ಕುಂಭಮೇಳ'ಕ್ಕೆ ಹೋಗುವ ರೈಲು ಪ್ರಯಾಣಿಕರಿಗೆ ಬಂಪರ್ ಸುದ್ದಿ ಸಿಗುತ್ತಿದೆ.
ಹೌದು, ಕುಂಭಮೇಳ ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಇದೀಗ ನೈಋತ್ಯ ರೈಲ್ವೆ ಮಹತ್ವದ ಕ್ರಮ ಕೈಗೊಂಡಿದೆ. ಕರ್ನಾಟಕ ರಾಜ್ಯದಿಂದ ಕೂಡ ಸಾಕಷ್ಟು ಭಕ್ತರು ಈ 'ಮಹಾ ಕುಂಭಮೇಳ'ಕ್ಕೆ ತೆರಳುತ್ತಾರೆ, ಇದೀಗ ಹೆಚ್ಚಾಗಿ ಪ್ರಯಾಣಿಕರು ಕರ್ನಾಟಕ ಮೂಲಕ 'ಮಹಾ ಕುಂಭಮೇಳ'ಕ್ಕೆ ಹೊರಡುವ ಸಾಧ್ಯತೆ ಇರುವ ಕಾರಣಕ್ಕೆ ಮೈಸೂರು ಟು ಪ್ರಯಾಗ್ ರಾಜ್‌ಗೆ ವಿಶೇಷ ಏಕಮುಖ ಎಕ್ಸ್ ಪ್ರೆಸ್ ರೈಲು (06215) ವ್ಯವಸ್ಥೆಯ ಮಾಡಲಾಗಿದೆ. ಹಾಗಾದ್ರೆ ಈ ವಿಶೇಷ ರೈಲು ಸಂಚಾರ ಮಾಡಲಿರುವ ಮಾರ್ಗ & ಊರುಗಳು ಯಾವುವು?

ಡಿಸೆಂಬರ್ 23 ರಿಂದ ಹೊರಡುವ ರೈಲು
'ಮಹಾ ಕುಂಭಮೇಳ'ಕ್ಕೆ ಕರ್ನಾಟಕದಿಂದ ವಿಶೇಷ ರೈಲು ಹೊರಟಿರುವುದು ಖುಷಿ ನೀಡಿದೆ. ಅಂದಹಾಗೆ ಇದೀಗ ವ್ಯವಸ್ಥೆ ಮಾಡಿರುವಂತೆ ರೈಲು ಸಂಖ್ಯೆ 06215, ಮೈಸೂರು ಟು ಪ್ರಯಾಗ್ ರಾಜ್ ಒನ್-ವೇ ಕುಂಭ ವಿಶೇಷ ಏಕಮುಖ ಎಕ್ಸ್ ಪ್ರೆಸ್ ರೈಲು, ಡಿಸೆಂಬರ್ 23ರ ಸೋಮವಾರ 00:30 ಗಂಟೆಗೆ ಮೈಸೂರಿಂದ ಹೊರಟು, ಬುಧವಾರ 3:00 ಗಂಟೆಗೆ ಪ್ರಯಾಗ್ ರಾಜ್ ಜಂಕ್ಷನ್ ತಲುಪಲಿದೆ ಎಂದು ಮಾಹಿತಿಯನ್ನ ಇದೀಗ ನೀಡಲಾಗಿದೆ.
ರೈಲು ನಿಲ್ಲುವ ನಿಲ್ದಾಣಗಳ ಪಟ್ಟಿ
ಮಾರ್ಗಮಧ್ಯೆ ರೈಲು ಮಂಡ್ಯಾ, ಕೆಎಸ್ಆರ್, ಬೆಂಗಳೂರು & ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು ಸೇರಿದಂತೆ ಚಿಕ್ಕಜಾಜೂರು, ದಾವಣಗೆರೆ, ಎಸ್ಎಂಎಂ ಹಾವೇರಿ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ & ಕರಾಡ್, ಪುಣೆ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ.
ಹಾಗೇ ದೌಂಡ್ ಚೋರ್ಡ್ ಲೈನ್, ಅಹ್ಮದ್ನಗರ, ಮನ್ಮಡ, ಭುಸಾವಲ್, ಖಾಂಡ್ವಾ ಸೇರಿದಂತೆ ತಲ್ವಾಡಿಯಾ, ಛಾನೆರಾ, ಖಿರ್ಕಿಯಾ, ಹರ್ದಾ, ಬನಪುರ, ಇಟಾರ್ಸಿ, ಪಿಪರಿಯಾ ನಿಲ್ದಾಣವು ಸೇರಿ ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ & ಮಾಣಿಕ್ಪುರ ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ, ಎಂದು ಮಾಹಿತಿ ನೀಡಲಾಗಿದೆ.
ರೈಲಿನ ಆಗಮನ & ನಿರ್ಗಮನದ ಸಮಯ ತಿಳಿಯಲು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಈಗ ಭಾರತೀಯ ರೈಲ್ವೆ ವೆಬ್‌ಸೈಟ್ ಆಗಿರುವ www.enquiry.indianrail.gov.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಅಥವಾ 139 ನಂಬರ್‌ಗೆ ಡಯಲ್ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಲಾಗಿದೆ.












Click it and Unblock the Notifications