ಡಿಕೆಶಿ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹೋಮ: ಒಬ್ಬರು ಪ್ರಮುಖರ ಗೈರು

ಬೆಂಗಳೂರು, ಜೂನ್ 14: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ, ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಹೋಮ, ಹವನಾದಿಗಳು ನಡೆದಿದೆ.

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಶಾಸಕ ರಾಮಲಿಂಗ ರೆಡ್ಡಿ, ಎಚ್.ಎಂ.ರೇವಣ್ಣಯಾದಿಯಾಗಿ, ಹಲವು ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡಿಕೆಶಿ ಜೊತೆ, ಮೂವರು ಕಾರ್ಯಾಧ್ಯಕ್ಷರ ಪೈಕಿ ಒಬ್ಬರು ಗೈರಾಗಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈಶ್ವರ್ ಖಂಡ್ರೆ ಮತ್ತು ಸಲೀಂ ಅಹಮದ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಸತೀಶ್ ಜಾರಕಿಹೊಳಿ ಗೈರಾಗಿದ್ದರು.

Special Pooja At KPCC Office: One Of The Woking President Satish Jarkiholi Absent From This Religious Programme

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡಾ ಈ ಕಾರ್ಯಕ್ರಮದಲ್ಲಿ ಹಾಜರಿರದಿದ್ದರೂ, ಕಾರ್ಯಾಧ್ಯಕ್ಷರಾಗಿರುವ ಕಾರಣದಿಂದ ಜಾರಕಿಹೊಳಿ ಗೈರು ಪ್ರಮುಖವಾಗಿತ್ತು.

ಡಿಕೆಶಿ ಪರಮ ದೈವಭಕ್ತರಾಗಿದ್ದರೆ, ಸತೀಶ್ ಜಾರಕಿಹೊಳಿ ಭಿನ್ನ ನಿಲುವು, ಸಿದ್ದಾಂತವನ್ನು ಹೊಂದಿದ್ದವರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ಹಿಂದೆಯೂ ಜಾರಕಿಹೊಳಿ ಭಾಗವಹಿಸಿದ್ದದ್ದು ಅಪರೂಪ.

ಮೌಢ್ಯದ ವಿರುದ್ದ ಹಲವು ಕಾರ್ಯಕ್ರಮ/ಹೋರಾಟದಲ್ಲಿ ಭಾಗವಹಿಸಿದ್ದ ಜಾರಕಿಹೊಳಿ, ಹಲವು ಬಾರಿ, ಗ್ರಹಣದ ವೇಳೆ, ಹಿಂದೂ ರುದ್ರಭೂಮಿಯಲ್ಲಿ ಉಪಹಾರ/ಊಟ ಮಾಡಿದ್ದುಂಟು. ಆದಾಗ್ಯೂ, ಜಾರಕಿಹೊಳಿ ಭಾಗವಹಿಸದೇ ಇದ್ದಿದ್ದಕ್ಕೆ ಇದೇ ಕಾರಣನಾ ಅಥವಾ ಬೇರೆ ಏನಾದರೂ ರಾಜಕೀಯವಿದೆಯೇ ಎನ್ನುವುದು ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+